ಕುಂದಾಪುರ: ಸಾವಿರಾರು ವರ್ಷಗಳ ಕಾಲ ಭಾರತ ದೇಶದ ಮೇಲೆ ಆಕ್ರಮಣಗಳು ನಡೆದರೂ ಕೂಡ ಅದನ್ನು ಮೆಟ್ಟಿ ನಿಂತಿದ್ದೇವೆ, ಭಾರತದ ಇತಿಹಾಸ ಸೋಲಿನ ಇತಿಹಾಸವಲ್ಲ, ಗೆಲುವು ಮತ್ತು ಸಂಘರ್ಷದ ಇತಿಹಾಸವಾಗಿದ್ದು ಇದೇ ಕಾರಣಕ್ಕಾಗಿ ಭಾರತ ಇಂದಿಗೂ ಗುರುಸ್ಥಾನದಲ್ಲಿದೆ. ಆದರೂ ಕೆಲವೊಂದು ನಾಯಕರ ದೂರದೃಷ್ಟಿಯ ಕೊರತೆ ಆಗೂ ಚಿಂತನೆಯ ಲೋಫದಿಂದಾಗಿ ಭಾರತ ಕೆಲವು ಸಮಸ್ಯೆ ಎದುರಿಸುವಂತಾಗಿದೆ ಸಂಘಟಿತ ಶಕ್ತಿಯ ಮೂಲಕ ಸಮಸ್ಯೆಗಳನ್ನು ತೊಡೆದುಹಾಕಿ ಭವ್ಯ ಭಾರತವನ್ನು ನಿರ್ಮಿಸೋಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ಜನಾರ್ದನ ಹೇಳಿದರು.
ಅವರು ಮಂಗಳವಾರ ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಅನೇಕ ಅಪಹಾಸ್ಯ, ಸಂಕಷ್ಟಗಳ ನಡುವೆಯೂ ಬೆಳೆದುಬಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ಧ್ಯೇಯೊದ್ಧೇಶವೇ ವ್ಯಕ್ತಿಯ ನಿರ್ಮಾಣ ಆತನ ಮೂಲಕ ಸಮಾಜಕ್ಕೆ ಕೊಡುಗೆ ನೀಡಿಸುವ ಮೂಲಕ ಮೌನ ಕ್ರಾಂತಿಯೊಂದಿಗೆ ಸ್ವಸ್ಥ ಹಾಗೂ ಭವ್ಯ ಭಾರತ ನಿರ್ಮಾಣದ ಪರಿಕಲ್ಪನೆಯಾಗಿದೆ ಎಂದರು.
ಭಾರತ ಅನೇಕ ಸಂಗತಿಗಳಲ್ಲಿ ಜಗತ್ತಿನಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ನಾವೂ ವಿವಿದೆಡೆಯಲ್ಲಿಯೂ ವಿವಿಧ ರೀತಿಯ ಸಂಸ್ಕೃತಿಗಳನ್ನು ನೋಡಿದ್ದು ಎಲ್ಲವೂ ಕೆಲಕಾಲ ಮಿಂಚಿ ಮಾಯವಾಗಿದೆ. ಆದರೇ ಭಾರತದ ಸಂಸ್ಕೃತಿ ಪರಂಪರೆ ಶ್ರೇಷ್ಠವಾದುದಾಗಿದೆ. ಅದ್ದರಿಂದಲೇ ಯಾವ ಸಂಸ್ಕೃತಿ ಅಳಿದರೂ ಭಾರತದ ಸಂಸ್ಕೃತಿ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಆರ್.ಎಸ್.ಎಸ್. ಸಂಘಚಾಲಕ ಶಂಭು ಶೆಟ್ಟಿ, ಉದ್ಯಮಿ ಕೆ. ಚಂದ್ರಶೇಖರ್ ಮೊದಲಾದವರಿದ್ದರು.
ವರ್ಗದ ಕಾರ್ಯವಾಹ ಗಿರೀಶ್ ಅಂಪಾರು ಸ್ವಾಗತಿಸಿ, ಸಹಕಾರ್ಯವಾಹ ಸುಧೀರ್ ಹೆಬ್ರಿ ಶಿಬಿರದ ವರದಿ ಮಡಿಸಿದರು. ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ್ ಪ್ರಕಾಶ್ ಮಲ್ಪೆ ಕಾರ್ಯಕ್ರಮ ನಿರೂಪಿಸಿ, ಪ್ರಕಾಶ್ ತೆಕ್ಕಟ್ಟೆ ವಂದಿಸಿದರು.
ಹೈಲೈಟ್ಸ್ ಫಾಯಿಂಟ್ಸ್:
ವಾರಗಳ ಕಾಲ ನಡೆದ ಆರ್.ಎಸ್.ಎಸ್. ಪ್ರಾಥಮಿಕ ಶಿಕ್ಷಾ ವರ್ಗದಲ್ಲಿ ೩೨೪ ವಿದ್ಯಾರ್ಥಿಗಳು, ೩೮ ಮಂದಿ ಉದ್ಯೋಗಿಗಳು ಸೇರಿದಂತೆ ೩೬೨ ಸ್ವಯಂಸೇವಕರು ತರಭೇತಿ ಪಡೆದರು.
ಮಂಗಳವಾರ ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಿಂದ ಹೊರಟ ಗಣವೇಷಧಾರಿ ಆರ್.ಎಸ್.ಎಸ್. ಸ್ವಯಂಸೇವಕರ ಪಥಸಂಚಲನ ಆಕರ್ಷಣೀಯವಾಗಿತ್ತು. ಘೋಶ್ ವಾದನದ ಜೊತೆಗೆ ಸಾಗಿದ ಸಂಚಲನ ಕುಂದಾಪುರ ಪೇಟೆಯಲ್ಲಿ ಸಂಚರಿಸಿತು.