ಕಳೆದ ಕೆಲವು ದಿನಗಳ ಹಿಂದೆ ದೂರವಾಣಿ ಮೂಲಕ ತನಗೆ ಜೀವ ಬೆದರಿಕೆ ಇರುವುದಾಗಿ ಪುತ್ರ ತಿಳಿಸಿದ್ದ. ನಾಲ್ವರ ಹೆಸರನ್ನು ಹೇಳಿದ್ದಲ್ಲದೆ ತಾನು ಕೆಲಸ ಬಿಉವುದಾಗಿ ಹೇಳಿದ್ದ. ಉತ್ತಮ ಈಜುಪಟು ಆಗಿರುವ ಪುತ್ರ ನದಿಗೆ ಬಿದ್ದು ಸಾವನ್ನಪ್ಪಲು ಸಾಧ್ಯವಿಲ್ಲ. ಸಾವಿನ ಬಗ್ಗೆ ಸಂಶಯವಿದೆ’ ಎಂದು ದೂರಿನಲ್ಲಿ ಮತನ ತಾಯಿ ತಿಳಿಸಿದ್ದಾರೆ.
ಪ್ರಮೋದ್ ಖಾರ್ವಿ ಅಸಹಜ ಸಾವಿನ ಹಿನ್ನೆಲೆಯಲಿ ಸ್ಥಳೀಯ ಉದ್ವಿಗ್ನತೆ ಉಂಟಾಯಿತು. ಯಾರೊ ಹತ್ಯೆಗೈದು ನದಿಗೆ ಎಸೆದಿದ್ದಾರೆ ಎಂಬ ಗುಸು ಗುಸು ಹಬ್ಬಿದ್ದರಿಂದ ಬುಧವಾರ ಪರಿಸ್ಥಿತಿ ಬಿಗಡಾಯಿಸಿತು. ಖಾರ್ವಿಕೇರಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮರಳುಗಾರಿಕೆ ದಂಧೆಯಲ್ಲಿ ತೊಡಗಿಸಿಕೊಂಡಿರುವ ಅನ್ಯ ರಾಜ್ಯದ ಮಂದಿಯ ವಿರುದ್ಧ ಈ ಆಕ್ರೋಶ ತಿರುಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂಜಾಗ್ರತೆ ಕ್ರಮವಾಗಿ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ತನಿಖೆಗೆ ಆಗ್ರಹ: ಬುಧವಾರ ಬೆಳಗ್ಗೆ ಖಾರ್ವಿಕೇರಿ ನಿವಾಸಿಗಳು ಮರಳುಗಾರಿಕೆ ಮಾಫಿಯಾ ಅಮಾಯಕ ಯುವಕನ ಹತ್ಯೆಗೈದಿದೆ ಎಂದು ಆರೋಪಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಬಳಿಕ ಕುಂದಾಪುರ ಶಾಸ್ತ್ರೀವತ್ತದಲ್ಲಿ ಮತ ಯುವಕನ ಶವವಿಟ್ಟು ಪ್ರತಿಭಟಿಸಿದರು. ರಸ್ತೆ ತಡೆ ನಡೆಸಿದರು.