ಕರಾವಳಿ

ನೀರು ಶುದ್ಧೀಕರಣದ ಕ್ಲೋರಿನ್ ಸೋರಿಕೆ : ಮನಪಾ ನಿರ್ಲಕ್ಷಕ್ಕೆ ಜಿಲ್ಲಾಧಿಕಾರಿ ಅಸಮಾಧಾನ

Pinterest LinkedIn Tumblr

dc_press_meet_1

ಮಂಗಳೂರು, ಅ. 17: ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ತುಂಬೆ ಕಿಂಡಿ ಅಣೆಕಟ್ಟು ಬಳಿ, ಬೆಂದೂರ್‌ವೆಲ್ ಹಾಗೂ ಪಣಂಬೂರುಗಳಲ್ಲಿ ಕುಡಿಯುವ ನೀರು ಶುದ್ಧೀಕರಣಕ್ಕೆ ಕ್ಲೋರಿನ್ ಸಂಗ್ರಹಿಸಲಾಗುತ್ತಿದ್ದು, ಇದು ಸೋರಿಕೆ ಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜನವರಿಯಲ್ಲೇ ಮನಪಾ ಆಡಳಿತಕ್ಕೆ ಸೂಚನೆ ನೀಡಲಾಗಿದ್ದರೂ ಮನಪಾದಿಂದ ಕ್ರಮವಾಗದ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತ ಸಭೆಯಲ್ಲಿ ಕಳೆದ ಜೂನ್‌ನಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಕುರಿತಂತೆ ಪರಿಶೀಲನೆಯ ಸಂದರ್ಭ ಜಿಲ್ಲಾಧಿಕಾರಿ ಮನಪಾ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

dc_press_meet_2 dc_press_meet_3

ತುಂಬೆ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌ನಲ್ಲಿ ನೀರು ಶುದ್ಧೀಕರಣಕ್ಕಾಗಿ 900 ಕೆ.ಜಿ.ಯಷ್ಟು ಕ್ಲೋರಿನ್ ಸಂಗ್ರಹಿಸಿಡಲಾಗುತ್ತದೆ. ಇದೇ ರೀತಿ ಬೆಂದೂರ್‌ವೆಲ್ ಹಾಗೂ ಪಣಂಬೂರು ಗಳಲ್ಲಿಯೂ ಕ್ಲೋರಿನ್ ಸಂಗ್ರಹವಿದೆ. ದ್ರವ ರೂಪದಲ್ಲಿರುವ ಈ ಕ್ಲೋರಿನನ್ನು ಬೃಹತ್ತಾದ ಅನಿಲ ಸಿಲಿಂಡರ್‌ಗಳಲ್ಲಿ ಶೇಖರಿಸಿಡಲಾಗಿದೆ. ಈ ಸಿಲಿಂಡರ್ ನಿಂದ ಕ್ಲೋರಿನ್ ಸೋರಿಕೆಯಾದಲ್ಲಿ ಪ್ರಾಣ ಹಾನಿಯ ಅಪಾಯವನ್ನೂ ಅಲ್ಲಗಳೆಯಲಾಗದು. ಈ ಬಗ್ಗೆ ಜನವರಿಯಲ್ಲಿ ನಡೆದ ಸಭೆಯ ವೇಳೆಗೆ ಮನಪಾ ಆಡಳಿತಕ್ಕೆ ಸೂಚನೆ ನೀಡಲಾಗಿತ್ತು. ಮತ್ತೆ ಜೂನ್‌ನಲ್ಲಿ ನಡೆದ ಸಭೆಯಲ್ಲೂ ಗಮನ ಸೆಳೆಯಲಾಗಿತ್ತು. ಆದರೆ ಮುಂಜಾಗೃತಾ ಕ್ರಮವಾಗಿ ಅಲ್ಲಿನ ಕಾರ್ಮಿಕರಿಗೆ ಅಗತ್ಯವಾದ ಮುಖವಾಡದ ವ್ಯವಸ್ಥೆ ಮತ್ತು ಸೋರಿಕೆಯ ಸಂದರ್ಭ ಅಪಾಯವನ್ನು ತಪ್ಪಿಸಲು ಸೋಡಿಯಂ ಬೈಕಾರ್ಬೊನೇಟನ್ನು ಸಿದ್ಧವಾಗಿಟ್ಟುಕೊಳ್ಳ ಬೇಕಾಗಿರುತ್ತದೆ.

dc_press_meet_4

 

ಮಾತ್ರವಲ್ಲದೆ ಕಾರ್ಮಿ ಕರಿಗೆ ಈ ಬಗ್ಗೆ ಸೂಕ್ತ ತರಬೇತಿಯನ್ನೂ ನೀಡಬೇಕಾಗಿದೆ. ಆದರೆ ಈ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾ ಗಿಲ್ಲ. ಈ ಬಗ್ಗೆ ಕಳೆದ ಜುಲೈನಲ್ಲಿ ಮನಪಾ ಆಡಳಿತಕ್ಕೆ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಸುರಕ್ಷತಾ ಇಲಾಖೆ ಯಿಂದ ನೋಟಿಸನ್ನು ಕೂಡಾ ನೀಡಲಾ ಗಿತ್ತು ಎಂದು ಇಲಾಖೆಯ ಉಪ ನಿರ್ದೇ ಶಕ ನಂಜಪ್ಪ ಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ಮನಪಾ ಸಂಬಂಧಪಟ್ಟ ಅಧಿಕಾರಿಗಳು ಕಾರ್ಖಾನೆ ಮತ್ತು ಬಾಯ್ಲರ್ ಗಳ ಉಪನಿರ್ದೇಶಕರ ಜತೆ ಸಮಾ ಲೋಚನೆ ನಡೆಸಿ ತುರ್ತು ಕ್ರಮ ಕೈಗೊ ಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

Write A Comment