ಕರಾವಳಿ

ಧರ್ಮಸ್ಥಳದ ಬಗ್ಗೆ ಅವಮಾನಕಾರಿ ಹೇಳಿಕೆ : ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದೂರು : ಪ್ರಕರಣ ದಾಖಲು

Pinterest LinkedIn Tumblr

Veerendra_Heggade_thimarody

ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ ಬಗ್ಗೆ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ ಶೆಟ್ಟಿ ತನ್ನ ವಿರುದ್ಧ ವೃಥಾ ಮಿಥ್ಯಾರೋಪ ಮಾಡಿ ಅವಮಾಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಎಸ್ಪಿಗೆ ವಿರೇಂದ್ರ ಹೆಗ್ಗಡೆಯವರು ನೀಡಿದ ಮನವಿಯನ್ನು ದೂರಾಗಿ ಪರಿಗಣಿಸಿದ್ದು. ಎಸ್ಪಿಯವರ ಆದೇಶದಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸರ್ಕಲ್ ಇನ್‌ಸ್ಪೆಕ್ಟರ್‌ಗೆ ತಾನು ದೂರವಾಣಿ ಕರೆ ಮಾಡಿ ತಿಮರೋಡಿ ಯನ್ನು ಬಂಧಿಸುವಂತೆ ಕೇಳಿಕೊಂಡಿದ್ದೇನೆ, ಕೊಲೆ ಪ್ರಕರಣದಲ್ಲಿ ತನ್ನ ಸಂಬಂಧಿಗಳು ಭಾಗಿಗಳಾಗಿದ್ದು ತಾನು ಅವರನ್ನು ರಕ್ಷಿಸುತ್ತಿದ್ದೇನೆ ಎಂಬರ್ಥದ ಮಾತುಗಳನ್ನು ಆಡಿ, ಜು.24ರಂದು ಪ್ರಸಾರವಾದ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತಿಮರೋಡಿ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ವೀರೇಂದ್ರ ಹೆಗ್ಗಡೆಯವರು ದೂರಿನಲ್ಲಿ ತಿಳಿಸಿದ್ದಾರೆ.

Veerendra_Hegde_thimarody1

ಪೊಲೀಸ್ ಇಲಾಖೆಗೆ ನೇರ ಸಂಪರ್ಕ ಮಾಡಿ ಮಾತನಾಡಿರುವುದು ಮತ್ತು ಯಾವುದೇ ವ್ಯವಹಾರದಲ್ಲಿ ಇಂತಹ ಸಂಪರ್ಕ ಇಟ್ಟು ಕೊಂಡಿರುವುದು ಶ್ರೀ ಕ್ಷೇತ್ರದ ಇತಿಹಾಸದಲ್ಲಿಯೇ ಇಲ್ಲ. ಯಾವ ಸಂದರ್ಭದಲ್ಲೂ ಈ ರೀತಿಯಾಗಿ ಪೊಲೀಸ್ ಇಲಾಖೆಯನ್ನು ಉಪಯೋಗಿಸಿ ಕೊಂಡಿರುವ ಉದಾಹರಣೆ ಇರುವುದಿಲ್ಲ ಎಂದು ಡಾ.ಹೆಗ್ಗಡೆ ಎಸ್‍ಪಿಯವರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಧರ್ಮಸ್ಥಳದ ಬಳಿ ನಡೆದ ಕೆಲವು ಘಟನೆಗಳನ್ನು ನೆಪವಾಗಿ ಇಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ತನ್ನ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಕಳೆದ ಒಂದು ವರ್ಷದಿಂದ ಮಹೇಶ್ ಶೆಟ್ಟಿ ತಿಮರೋಡಿ ಆರೋಪ ಮಾಡುತ್ತಾ ಬಂದಿದ್ದಾರೆ. ಸರಕಾರ, ಕಾನೂನು,ಪೊಲೀಸ್ ಮೊದಲಾದ ರಾಜ್ಯದ ಉನ್ನತ ಮಟ್ಟದ ಇಲಾಖೆಗಳನ್ನು ದೂರುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಸುಳ್ಳು ಮಾಹಿತಿ ಹರಡುತ್ತಿದೆ.ಈ ಆರೋಪಗಳು ನನಗೆ ಹಾಗೂ ಪೊಲೀಸ್ ಇಲಾಖೆಗೆ ಮಾಡಿದ ಅವಮಾನವೆಂದು ನಾನು ತಿಳಿದಿದ್ದೇನೆ. ಆದ್ದರಿಂದ ಈ ವಿಚಾರದ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳು ಕೂಲಂಕಶವಾಗಿ ಪರಿಶೀಲಿಸಿ ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ನಮಗೆ ಹಾಗೂ ಸಾರ್ವಜನಿಕರಿಗೆ ತಿಳಿಯಪಡಿಸಬೇಕು. ಇಲಾಖೆ ಗಂಭೀರ ತನಿಖೆ ನಡೆಸಿದರೆ ಕಾನೂನು ಮತ್ತು ಸಂವಿಧಾನದ ಗೌರವವನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ಹೇಳಿದ್ದಾರೆ.

Veerendra_Hegde_thimarody2

File Photo

ಈ ದೂರಿನ ಕುರಿತಂತೆ ಜಿಲ್ಲಾ ಎಸ್‍ಪಿಯವರು ಕಾನೂನು ತಜ್ಞರ ಬಳಿ ಸಮಾಲೋಚಿಸಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಲು ಬೆಳ್ತಂಗಡಿ ಠಾಣೆಗೆ ಸೂಚನೆ ನೀಡಿದ್ದಾರೆ. ಹೆಗ್ಗಡೆಯವರು ನೀಡಿದ ದೂರಿನಂತೆ ತಿಮರೋಡಿ ವಿರುದ್ಧ ಪೊಲೀಸರು ಸೆಕ್ಷನ್ 153,153ಎ, 295 ಅನ್ವಯ ಪ್ರಕರಣ ದಾಖಲಿಸಿದ್ದಾರೆ.

Write A Comment