ಮಂಗಳೂರು : ಕೊಂಕಣೀ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ (ರಿ) ಮಂಗಳೂರು ಹಾಗೂ ಡಾ.ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ ಪೈ ಟ್ರಸ್ಟ್, ಬೆಂಗಳೂರು ಇದರ ಆಶ್ರಯದಲ್ಲಿ ಜರಗಿದ ಹರಿದಾಸ ಶ್ರೇಷ್ಠ ಸಂತ ಭದ್ರಗಿರಿ ಅಚ್ಯುತದಾಸಜೀ ಸಂಸ್ಮರಣ ಸಮಾರಂಭದಲ್ಲಿ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರಿಗೆಸಂತ ಶ್ರೀ ಭದ್ರಗಿರಿಸ್ಮರಣ ಪುರಸ್ಕಾರನೀಡಿ ಗೌರವಿಸಲಾಯ್ತು. ವಿಶ್ರಾಂತ ಕುಲಪತಿ, ಸಂಶೋಧಕ, ವಿರ್ಮಶಕ ಪ್ರೊ. ಡಾ. ಬಿ.ಎ. ವಿವೇಕರೈ ಅವರು ಪುರಸ್ಕಾರ ನೀಡಿ ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಇನ್‌ಫೋಸಿಸ್ ಟೆಕ್ನಾಲಜಿಸ್ ಪ್ರೈ ಲಿ. ಬೆಂಗಳೂರು ಇದರ ಹಿರಿಯ ಉಪಾಧ್ಯಕ್ಷ ರಾಮದಾಸ ಕಾಮತ್ ಯು., ಕೊಂಕಣೀ ಮಹಾಭಾರತ ಸಂಶೋಧಕ ಡಾ. ರೋಕಿ ವಿ. ಮಿರಾಂದಾ, ವಿಶ್ವಕೊಂಕಣಿ ಕೇಂದ್ರ ಮಂಗಳೂರು ಇದರ ಅಧ್ಯಕ್ಷ ಬಸ್ತಿವಾಮನ ಶೆಣೈ, ಕಾರ್ಯಕ್ರಮ ಸಂಯೋಜಕ ಡಾ. ಎಂ. ಪ್ರಭಾಕರ ಜೋಶಿ ವಿಶ್ವಕೊಂಕಣಿ ಕೇಂದ್ರ ಮಂಗಳೂರು ಇದರ ಕಾರ್ಯದರ್ಶಿ ವೆಂಕಟೇಶ್ ಎನ್. ಬಾಳಿಗ ಮತ್ತಿತರರು ಉಪಸ್ಥಿತರಿದ್ದರು.