ಮಂಗಳೂರು : ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್ (MCF) ಯೂರಿಯಾ ಮತ್ತು ಇತರ ರಸಗೊಬ್ಬರ ಉತ್ಪಾದನೆ ಸ್ತಗಿತಗೊಳಿಸದಂತೆ ಒತ್ತಾಯಿಸಿ ಮಂಗಳವಾರ ಎಂಸಿಎಫ್ ಕಾರ್ಮಿಕರು ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಎಂಸಿಎಫ್ ಮಂಗಳಾ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಕೆ.ಎನ್ ಸೂರ್ಯನರಾಯಣ ಅವರು ಮಾತನಾಡಿ, ನಾವು ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ಸಮ್ಮಂದ ಪಟ್ಟ ಕೇಂದ್ರ ಸಚಿವರಿಗೆ ರಸಗೊಬ್ಬರ ಉತ್ಪಾದನೆ ಪುನರಾರಂಭಿಸಲು ಮನವಿ ಮಾಡಿದ್ದೇವೆ. ಆದರೆ ಕಳೆದ ೨೧ ದಿನಗಳಿಂದ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕಂಪನಿ ಕೊಟ್ಯಾಂತರ ರೂ ನಷ್ಟ ಅನುಭವಿಸುವಂತಾಗಿದೆ. ಕಂಪನಿ ಮುಚ್ಚಿದರೆ ಹಲವಾರು ಕುಟುಂಬಗಳು ಜೀವನಾಧಾರ ಕಳೆದುಕೊಂಡು ಬೀದಿ ಪಾಲಾಗುವುದು ಖಂಡಿತ ಎಂದು ಹೇಳಿದರು.
ರೈತ ಸಂಘದ ಸದಸ್ಯ ಶಿವಾನಂದ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಕೃಷಿಕರು ತಮ್ಮ ಕೃಷಿಗೆ ಮಂಗಳ ಯೂರಿಯಾವನ್ನೇ ಬಳಸುತ್ತಾರೆ. ಇದು ಕೃಷಿಗೆ ಯೋಗ್ಯವಾದ ಯೂರಿಯವಾಗಿದ್ದು, ಇತ್ತೀಚೆಗೆ ಸರ್ಕಾರ ಇದರ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಈ ಯೂರಿಯಾ ಗೊಬ್ಬರವೇ ರೈತರಿಗೆ ಆಧಾರವಾಗಿದ್ದು, ಶೀಘ್ರದಲ್ಲೇ ಪೂರೈಕೆ ಮಾಡಬೇಕು. ಇಲ್ಲವೆಂದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.