ದೋಹಾ: “ಮನುಕುಲವನ್ನು ಗೌರವಿಸಿ” ಎಂಬ ಘೋಷ ವಾಕ್ಯದೊಂದಿಗೆ ಈ ತಿಂಗಳ 25ರಿಂದ ನವೆಂಬರ್ 2ರ ತನಕ ಗುಲ್ಬರ್ಗ ದಿಂದ ಮಂಗಳೂರಿನವರೆಗೆ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಹಮ್ಮಿಕೊಳ್ಳಲಿರುವ ಕರ್ನಾಟಕ ಯಾತ್ರೆಗೆ ಬೆಂಬಲ ಸೂಚಿಸಿ ದೋಹಾ ದಲ್ಲಿ ನಡೆದ ಮಾನವತಾ ಸಮಾವೇಶದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಕತಾರ್ ಘಟಕಕ್ಕೆ ಚಾಲನೆ ನೀಡಲಾಯಿತು.
ಮಾನವೀಯತೆ ಮರೆ ಮಾಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಾನವೀಯತೆಯ ಸಂದೇಶವನ್ನು ಧರ್ಮ, ಜಾತಿ ಬೇಧವಿಲ್ಲದೆ ಸರ್ವರಿಗೂ ತಲುಪಿಸುವ ಉದ್ದೇಶದಿಂದ ಸತತ 9 ದಿನಗಳ ಕಾಲ 18 ಜಿಲ್ಲೆಗಳನ್ನು ಹಾದು ಹೋಗುವ ಎ.ಪಿ ಉಸ್ತಾದರ ಕರ್ನಾಟಕ ಯಾತ್ರೆಗೆ ಬೆಂಬಲ ಸೂಚಿಸಿ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ನಡೆಸುತ್ತಿರುವ ಮಾನವತಾ ಸಮಾವೇಶವು ಎಲ್ಲರ ಗಮನ ಸೆಳೆಯುತ್ತಿದೆ. ಕೆ.ಸಿ.ಎಫ್ ಕತಾರ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ ಮಾನವತಾ ಸಮಾವೇಶವು ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ ಕಟ್ಟೆ ರವರ ದುವಾ ಆಶಿರ್ವಚನದೊಂದೊಗೆ ಪ್ರಾರಂಭವಾಯಿತು. ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸಯ್ಯದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ ಉದ್ಘಾಟಿಸಿದರು. ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ವಿಷಯ ಮಂಡಿಸಿದರು. ಸಮಾರಂಭದಲ್ಲಿ ಐ.ಸಿ.ಎಫ್ ಕತಾರ್ ಸಮಿತಿ ಪ್ರತಿನಿಧಿಗಳಾದ ಕೆ.ಬಿ. ಅಬ್ದುಲ್ಲಾ ಹಾಜಿ, ಅಬ್ದುಲ್ ಸಲಾಂ ಹಾಜಿ ಪಾಪಿನಷೇರಿ, ಅಹ್ಮದ್ ಸಖಾಫಿ ಪೇರಾಂಪ್ರ, ಪಾಡಿ ಅಬ್ದುಲ್ಲಾ ಹಾಜಿ, ಆರ್.ಎಸ್.ಸಿ ಪ್ರತಿನಿಧಿಗಳಾದ ಜಮಾಲುದ್ದೀನ್ ಅಝ್ ಹರಿ, ಉಮರ್ ಕುಂಡ್ ತೋಡ್ ಮುಂತಾದವರು ಉಪಸ್ಥಿತರಿದ್ದರು. ಸಯ್ಯದ್ ಹಸ್ಸನ್ ಸಖಾಫ್ ತಂಙಳ್ ಆದೂರ್ ಸಮಾರೋಪ ಪ್ರಾರ್ಥನೆಗೆ ನೇತೃತ್ವ ವಹಿಸಿದರು.
ಸಮಾವೇಶದಲ್ಲಿ ಸಯ್ಯದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ ರವರು ಕೆ.ಸಿ.ಎಫ್ ಕತಾರ್ ಘಟಕವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಸಂಘಟನೆಯ ಕತಾರ್ ರಾಷ್ಟ್ರೀಯ ಸಮಿತಿ ಪದಾಧಿಕಾರಿಗಳ ವಿವರವನ್ನು ಕರ್ನಾಟಕ ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿರವರು ವಾಚಿಸಿದರು. ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು (ಅಧ್ಯಕ್ಷರು), ಅಬ್ದುಲ್ ರಹೀಂ ಸಅದಿ ಪಾಣೆಮಂಗಳೂರು (ಪ್ರ.ಕಾರ್ಯದರ್ಶಿ), ಅಬ್ದುಲ್ ರಹ್ಮಾನ್ ನಾವುಂದ (ಕೋಶಾಧಿಕಾರಿ), ಯೂಸುಫ್ ಸಖಾಫಿ ಅಯ್ಯಂಗೇರಿ (ಅಧ್ಯಕ್ಷರು – ಸಂಘಟನಾ ವಿಭಾಗ), ಮಿರ್ಷಾದ್ ಕನ್ಯಾನ (ಕಾರ್ಯದರ್ಶಿ – ಸಂಘಟನಾ ವಿಭಾಗ), ಅಬ್ದುಲ್ ಸತ್ತಾರ್ ಅಶ್ರಫಿ ಮಠ (ಅಧ್ಯಕ್ಷರು – ಶಿಕ್ಷಣ ವಿಭಾಗ), ಉಮರುಲ್ ಫಾರೂಖ್ ಕೃಷ್ನಾಪುರ (ಕಾರ್ಯದರ್ಶಿ – ಶಿಕ್ಷಣ ವಿಭಾಗ), ಅಬ್ಬಾಸ್ ಚಿಕ್ಕಮಗಳೂರು (ಅಧ್ಯಕ್ಷರು – ಸಾಂತ್ವನ ವಿಭಾಗ), ಹನೀಫ್ ಪಾತೂರು (ಕಾರ್ಯದರ್ಶಿ – ಸಾಂತ್ವನ ವಿಭಾಗ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಝೀರ್ ಹಾಜಿ ಕಾಟಿಪಳ್ಳ, ಅಬ್ದುಲ್ ಲತೀಫ್ ಹಾಜಿ ತಿಂಗಲಾಡಿ, ಅಬ್ದುಲ್ ಕಬೀರ್ ದೇರಳಕಟ್ಟೆ, ಮುನೀರ್ ಚಿಕ್ಕಮಗಳೂರು, ಹಸ್ಸೈನಾರ್ ಕುಂದಾಪುರ, ಅಬ್ದುಲ್ ರಹ್ಮಾನ್ ಪೂಂಜಾಲ್ ಕಟ್ಟೆ, ಮನ್ಸೂರ್ ಪಡೀಲ್, ಅಶ್ರಫ್ ಮುಡಿಪು, ಶಬೀರ್ ಅಹಮದ್ ಹೊನ್ನಾವರ, ಮುಸ್ತಫಾ ನಾವುಂದ, ಪಿ.ಎಚ್ ಇಸ್ಮಾಯಿಲ್ ಎಡ್ತೂರುಪದವು ರವರನ್ನು ಆಯ್ಕೆ ಮಾಡಲಾಯಿತು.
ಸಮಾವೇಶದ ಕೊನೆಯಲ್ಲಿ 20ಕ್ಕೂ ಮಿಕ್ಕ ಯುವಕರು ವರದಕ್ಷಿಣೆ ವಿರುದ್ದ ಪ್ರತಿಜ್ಞೆ ಸ್ವೀಕರಿಸಿದರು. ಅಬ್ದುಲ್ ರಹೀಂ ಸಅದಿ ಸ್ವಾಗತಿಸಿ ಅಬ್ದುಲ್ ಸತ್ತಾರ್ ಅಶ್ರಫಿ ಮಠ ವಂದಿಸಿದರು.