ಕರಾವಳಿ

ಉರ್ವಾ ಮಾರಿಗುಡಿ ಎದುರು ಅಪರಿಚಿತ ಶವ ಪತ್ತೆ : ಕಲ್ಲಿನಿಂದ ಜಜ್ಜಿ ಕೊಲೆ..

Pinterest LinkedIn Tumblr

Murder_Boday_Urva_3

ಮಂಗಳೂರು : ನಗರದ ಉರ್ವ ಮಾರಿಗುಡಿ ದೇವಸ್ಥಾನದ ಮಹಾಧ್ವಾರದ ಎದುರಿನ ಮಂಗಳೂರು ಮಹಾನಗರ ಪಾಲಿಕೆ ಬಯಲು ರಂಗ ಮಂಟಪದ ಮೆಟ್ಟಲಿನಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾರೋ ದುಷ್ಕರ್ಮಿಗಳು ಈ ವ್ಯಕ್ತಿಯನ್ನು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಿರಬೇಕೆಂದು ಪ್ರಾಥಮಿಕ ತನಿಕೆಯಿಂದ ತಿಳಿದು ಬಂದಿದೆ.

Murder_Boday_Urva_2 Murder_Boday_Urva_1 Murder_Boday_Urva_4 Murder_Boday_Urva_7

ಹತ್ಯೆಗೀಡಾದ ವ್ಯಕ್ತಿಯನ್ನು ಉರ್ವಾ ಪರಿಸರದ ನಿವಾಸಿ ನಂದ ಕುಮಾರ್ (44)  ಎಂದು ಗರುತಿಸಲಾಗಿದ್ದು, ಈತ ಮನೆಯಿಂದ ಪರಿತ್ಯಕ್ತನಾಗಿದ್ದ ಎಂದು ತಿಳಿದು ಬಂದಿದೆ. ಬುಧವಾರ ಮಧ್ಯರಾತ್ರಿಯ ವೇಳೆಗೆ ಅಪರಿಚಿತ ವ್ಯಕ್ತಿಗಳು ನಾರಾಯಣ ಅವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿರ ಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆ ಯಾರು ಮಾಡಿರ ಬಹುದು ಹಾಗೂ ಕೊಲೆಗೆ ನಿರ್ಧಿಷ್ಟ ಕಾರಣವೇನೆಂದು ತನಿಖೆಯಿಂದ ಇನ್ನಷ್ಟೆ ತಿಳಿದು ಬರಬೇಕಿದೆ.

Murder_Boday_Urva_7 Murder_Boday_Urva_5 Murder_Boday_Urva_6 Murder_Boday_Urva_8 Murder_Boday_Urva_9 Murder_Boday_Urva_10

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್‌ ಅಯುಕ್ತ ಆರ್.ಹಿತೇಂದ್ರ, ಡಿಸಿಪಿ ವಿಷ್ಣು ವರ್ಧನ್‌ ಹಾಗೂ ಉರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆಯಲ್ಲಿ ತೊಡಗಿದೆ.

ಕಲ್ಲಿನಿಂದ ಜಜ್ಜಿ ಕೊಲೆ..

ವ್ಯಕ್ತಿಯೋರ್ವನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಉರ್ವ ಮಾರಿಗುಡಿ ಮುಂಭಾಗದಲ್ಲಿರುವ ಬಯಲು ರಂಗಮಂಟಪದ ಎದುರು ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಉರ್ವಾ ಪರಿಸರದ ನಿವಾಸಿ ನಂದ ಕುಮಾರ್ (44) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೆಲವು ವರ್ಷ ಗಳ ಹಿಂದೆ ನಗರದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ನಂದಕುಮಾರ್ ರಿಕ್ಷಾ ಮಾರಿ ಬಳಿಕ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಮದ್ಯ ವ್ಯಸನಿಯಾಗಿದ್ದ ಆತ ಮನೆಯಲ್ಲಿ ಜಗಳ ಮಾಡು ತ್ತಿದ್ದ ಕಾರಣ ಮನೆಮಂದಿ ಆತನನ್ನು ದೂರ ಮಾಡಿದ್ದರು ಎನ್ನಲಾಗಿದೆ. ಅಲ್ಲಲ್ಲಿ ಕೆಲಸ ಮಾಡಿ ರಾತ್ರಿ ವೇಳೆ ಮಾರಿಗುಡಿ ಮುಂಭಾಗದ ಬಯಲು ರಂಗ ಮಂಟಪದಲ್ಲಿ ಮಲಗುತ್ತಿದ್ದ ಆತನನ್ನು ಅಲ್ಲಿಯೇ ಕೊಲೆ ಮಾಡಲಾಗಿದೆ.

ಬುಧವಾರ ರಾತ್ರಿ ನಂದನನ್ನು ಇದೇ ಪರಿಸರದಲ್ಲಿ ಕಂಡವ ರಿದ್ದು, ಗುರುವಾರ ಮುಂಜಾನೆ ಬಯಲು ಮಂಟಪದ ಮೆಟ್ಟಿಲಿನ ಪಕ್ಕವೇ ನಂದನ ಮೃತದೇಹ ಕಂಡು ಬಂದಿದೆ. ತಲೆಯ ಮೇಲೆ ಭಾರೀ ಗಾತ್ರದ ಸಿಮೆಂಟ್ ಕಲ್ಲನ್ನು ಎತ್ತಿಹಾಕಿದ ಕುರುಹುಗಳು ಕಂಡು ಬಂದಿವೆ. ಪೊಲೀಸ್ ಆಯುಕ್ತ ಆರ್.ಹಿತೇಂದ್ರ, ಡಿಸಿಪಿಗಳಾದ ಡಾ.ಜಗದೀಶ್, ವಿಷ್ಣುವರ್ಧನ್, ಎಸಿಪಿ ಉದಯ ನಾಯಕ್, ಉರ್ವಾ ಠಾಣಾ ಇನ್‌ಸ್ಪೆಕ್ಟರ್ ರಾಮಚಂದ್ರ ಮಾಳೆದೇವರು, ಎಸ್ಸೈ ಪೂವಪ್ಪ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹಲವರ ವಿಚಾರಣೆ:

ಬಯಲು ರಂಗ ಮಂಟಪವನ್ನು ನಂದಕುಮಾರ್‌ನಂತೆ ಹಲವರು ರಾತ್ರಿ ಆಶ್ರಯ ತಾಣವನ್ನಾಗಿಸಿಕೊಂಡಿದ್ದಾರೆ. ಇದೀಗ ಆತನ ಜೊತೆ ಇರುತ್ತಿದ್ದವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಅವರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ. ಉರ್ವ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment