ಕರಾವಳಿ

ಕೋಟೇಶ್ವರದಲ್ಲಿ ಗೋವು ಪೂಜೆ ಸಂಭ್ರಮ

Pinterest LinkedIn Tumblr

ಕುಂದಾಪುರ: ವಿಶ್ವಹಿಂದೂ ಪರಿಷತ್ ಕೋಟೇಶ್ವರ ಹಾಗೂ ಬಜರಂಗದಳ ಕೋಟೇಶ್ವರ ಘಟಕದ ವತಿಯಿಂದ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿತು.

K K K K Koteshwara_Govu_pooje (5) K K K K K Koteshwara_Govu_pooje (2) Koteshwara_Govu_pooje (4) K Koteshwara_Govu_pooje (3)

ಈ ಸಂದರ್ಭ ಹತ್ತಾರು ಗೋವುಗಳಿಗೆ ಸಾಮೂಹಿಕವಾಗಿ ಪೂಜೆ ಮಾಡಲಾಗಿತ್ತು. ಅರ್ಚಕರು ಪೂಜಾವಿಧಿಗಳನ್ನು ನೆರವೇರಿಸಿದರು. ಹಲವು ಮಹಿಳೆಯರು ಇಲ್ಲಿಗೆ ಆಗಮಿಸಿ ಬಾಳೆಹಣ್ಣು, ಬೆಲ್ಲ, ಅಕ್ಕಿ ಮೊದಲಾದ ಭಕ್ಷ್ಯಗಳನ್ನು ದನಗಳಿಗೆ ತಿನ್ನಿಸಿದರು. ಗೋವುಗಳಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಗೋವುಗಳನ್ನು ತಂದ ಮನೆಯವರಿಗೆ ಒಂದೊಂದು ಬ್ಯಾಗ್ ಹಿಂಡಿಯನ್ನು ನೀಡಲಾಗಿತ್ತು.

ಗೋ ಪೂಜೆ ಬಳಿಕ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರಿಂದ ಕೋಟೇಶ್ವರ ಗ್ರಾಮದ ಹಲವೆಡಗಳಲ್ಲಿ ಬೈಕ್ ರ್‍ಯಾಲಿ ನಡೆದಿತ್ತು. ಈ ಸಂದರ್ಭದಲ್ಲಿ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Write A Comment