ಕರಾವಳಿ

ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದ ಯುವಕ ನಾಪತ್ತೆ

Pinterest LinkedIn Tumblr

ಕುಂದಾಪುರ: ಬೆಂಗಳೂರಿನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ಊರಿಗೆ ಮರಳುವ ಸಂದರ್ಭದಲ್ಲಿ ಮನೆಗೂ ಬಾರದೇ ಕಾಣೆಯಾಗಿದ್ದಾನೆ.

ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚಗೋಡು ನಿವಾಸಿ  ಶಾಂತಿ ಖಾರ್ವಿರವರ ಮಗ ಕಿರಣ್ (19) ಎನ್ನುವಾತನೇ ಕಾಣೆಯಾದ ಯುವಕ.

man miss knd

ಈತ ಸುಮಾರು 8 ತಿಂಗಳಿಂದ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು,ಇದೇ ಅಕ್ಟೋಬರ್ 21 ರಂದು ರಾತ್ರಿ 8:45 ಗಂಟೆಗೆ ತನ್ನ ಸೋದರಮಾವ ರವಿ ಖಾರ್ವಿ ಹಾಗೂ ಆತನ ತಾಯಿ ಶಾಂತಿ ಖಾರ್ವಿರವರಿಗೆ ಕಿರಣನು ದೂರವಾಣಿ ಕರೆ ಮಾಡಿ ಬೆಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಹೊರಟಿದ್ದೇನೆ ಎಂದು ತಿಳಿಸಿದ್ದಾನೆ. ಮರುದಿನ ಬೆಳಿಗ್ಗೆ  9:00 ಗಂಟೆಗೆ ಕಿರಣ ಪುನಃ ಆತನ ತಾಯಿಗೆ ಫೋನ್ ಮಾಡಿ ನಾನು ಕುಂದಾಫುರ ಶಾಸ್ತ್ರೀ ಪಾರ್ಕ್‌ನಲ್ಲಿ ಇದ್ದೇನೆ, ನನ್ನ ಮೊಬೈಲ್ ಸ್ವಿಚ್ ಆಫ್ ಆಗುತ್ತಿದೆ ಎಂದು ಹೇಳಿದ್ದು, ಬಳಿಕ ಮನೆಗೂ ಬಾರದೇ ಕಾಣೆಯಾಗಿರುತ್ತಾನೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment