ಕರಾವಳಿ

ಹಳ್ಳಿಹೊಳೆ ಒಂಟಿ ಮನೆ ದರೋಡೆ ಪ್ರಕರಣ: ಸ್ಥಳೀಯರ ಕೈವಾಡ ಶಂಕೆ: ಮುಂದುವರಿದ ಶೋಧಕಾರ್ಯ

Pinterest LinkedIn Tumblr

ಕುಂದಾಪುರ: ತಾಲೂಕಿನ ನಕ್ಸಲ್ ಪೀಡಿತ ಪ್ರದೇಶವಾದ ಹಳ್ಳಿಹೊಳೆ ಗ್ರಾಮದ ಇರಿಗೆ ಶಾಲೆ ಸಮೀಪದಲ್ಲಿ ಮುಸುಕುಧಾರಿಗಳಿಂದ ಕೃಷಿಕ ರಾಘವೇಂದ್ರ ರಾವ್‌ ಮನೆಯಲ್ಲಿ ದರೋಡೆ ನಡೆದಿದ್ದು, ದರೋಡೆಕೋರರಿಗಾಗಿ ಪೊಲೀಸರಿಂದ ವ್ಯಾಪಕ ಶೋಧಕಾರ್ಯ ಮುಂದುವರಿದಿದೆ.

Hallihole_Robbary_case Hallihole_Robbary_case (1)
3 ಪೊಲೀಸ್‌ ತಂಡಗಳ ರಚನೆ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ, ಕುಂದಾಪುರ, ಅಮಾಸೆಬೈಲು, ಕೊಲ್ಲೂರು ಠಾಣೆಯ ಪೊಲೀಸರನ್ನೊಳಗೊಂಡ ಮೂರು ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ. ಈ ತಂಡಗಳು ಸ್ಥಳೀಯ  ಹಳ್ಳಿಹೊಳೆ, ಜಡ್ಕಲ್‌, ಮುದೂರು, ಕೊಲ್ಲೂರು, ಸಿದ್ದಾಪುರ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ನಗರ, ಹೊಸನಗರ, ತೀರ್ಥಹಳ್ಳಿ, ಸಾಗರ ಹಾಗೂ ಹೊರ ಜಿಲ್ಲೆಗಳಲ್ಲಿಯೂ ಶೋಧಕಾರ್ಯ ನಡೆಸುತ್ತಿದೆ.

ಸ್ಥಳೀಯರ ಭಾಗಿ?: ಮೂಲವೊಂದರ ಪ್ರಕಾರ ದರೋಡೆಕೋರರ ಈ ಗುಂಪಿನಲ್ಲಿ ಕೆಲವು ಸ್ಥಳೀಯರು ಇದ್ದರು ಎನ್ನಲಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಎಲ್ಲಾ ಆಯಾಮಗಳಲ್ಲಿಯೂ ಶೋಧಕಾರ್ಯ ಮುಂದುವರಿದಿದ್ದು, ಪ್ರಗತಿ ಹಂತಲ್ಲಿದೆ ಎಂದು ಪೊಲೀಸ್‌ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Write A Comment