ಕುಂದಾಪುರ: ಸಂತೋಷ ಎಂಬ ಹೆಸರಿನ ಸುಮಾರು 10 ವರ್ಷದ ಬಾಲಕನೋರ್ವ 25 ರಂದು ಬೈಂದೂರು ರೈಲ್ವೆ ಸ್ಟೇಷನ್ನಿನಲ್ಲಿ ಪತ್ತೆಯಾಗಿದ್ದಾನೆ. ಬಾಲಕನನ್ನು ಬೈಂದೂರು ಪೋಲೀಸರು ಬೇಳೂರು ಸ್ಫೂರ್ತಿಧಾಮಕ್ಕೆ ದಾಖಲಿಸಿದ್ದಾರೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಬಾಲಕನಿಗೆ ಸ್ಫೂರ್ತಿಧಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ವಾರೀಸುದಾರರ್‍ಯಾರಾದರೂ ಇದ್ದಲ್ಲಿ ಬೈಂದೂರು ಪೋಲೀಸ್ ಸ್ಟೇಷನ್ ಅಥವಾ 9448984119 ಗೆ ಸಂಪರ್ಕಿಸುವಂತೆ ಡಾ||ಕೇಶವ ಕೋಟೇಶ್ವರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.