ಮಂಗಳೂರು : ನಾನು ಸರಕಾರದ ಹಾಗೂ ಜನರ ಹಣವನ್ನು ಯಾವ ರೀತಿಯಲ್ಲೂ ದುರುಪಯೋಗಪಡಿಸಿಕೊಂಡಿಲ್ಲ. ಲೋಕಸಭೆ ಚುನಾವಣೆಗೆ ನಾಮಪತ್ರದ ಸಲ್ಲಿಸಿದ ಬಳಿಕ ವ್ಯವಹಾರವೊಂದಕ್ಕೆ ಫೆಡರಲ್ ಬ್ಯಾಂಕ್‌ನಿಂದ ಸಾಲ ಪಡೆದಿದ್ದೆ. ಅದರಿಂದಾಗಿ ನನ್ನ ಆಸ್ತಿಯಲ್ಲಿ ಏರಿಕೆ ಕಂಡುಬಂದಿದೆ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಣೆ ನೀಡಿದ್ದಾರೆ.
ಎನ್ ಡಿ ಎ ಅಧಿಕಾರಕ್ಕೆ ಬಂದ ನಂತರ ಐದು ತಿಂಗಳಲ್ಲಿ ಸದಾನಂದ ಗೌಡರ ಆಸ್ತಿಯಲ್ಲಿ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಚುನಾವಣ ಪರಿವೀಕ್ಷಣ ಮತ್ತು ಪ್ರಜಾಪ್ರಭುತ್ವ ಸುಧಾರಣೆಗಳ ಸಂಘ ಇತ್ತೀಚಿಗೆ ಆಪಾದನೆ ಮಾಡಿದ ಹಿನ್ನೆಲೆಯಲ್ಲಿ ಬಾನುವಾರ ಮಂಗಳೂರಿನ ತನ್ನ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಗೌಡರು, ನನಗೆ ಕೆನರಾ ಬ್ಯಾಂಕ್ ಮಂಗಳೂರು, ಕಾರ್ಪೋರೇಶನ್ ಬ್ಯಾಂಕ್ ಮಂಗಳೂರು, ಫೆಡರಲ್ ಬ್ಯಾಂಕ್ ಮಂಗಳೂರು ಹಾಗೂ ಅಫೆಕ್ಸ್ ಬ್ಯಾಂಕ್ ಬೆಂಗಳೂರು ಬ್ಯಾಂಕ್ ಗಳಲ್ಲಿ 15 ಕೋಟಿ ರೂ ಸಾಲವಿದೆ. ಆ ಸಾಲದ ಮೂಲಕ ನಾನು ಉದ್ಯಮಕ್ಕೆ ಬಂಡವಾಳ ಹಾಕಿದ್ದೇನೆ ಎಂದು ವಿವರಿಸಿದರು.
2013 ಸೆಪ್ಟೆಂಬರ್ ನಲ್ಲಿ ವ್ಯವಹಾರಕ್ಕಾಗಿ ಫೆಡರಲ್ ಬ್ಯಾಂಕ್ ನಿಂದ 8.5 ಕೋಟಿ ರೂ. ಸಾಲ ಕೋರಿದ್ದೆ. 2013 ನವಂಬರ್ 20ರಂದು ನನಗೆ 8 ಕೋಟಿ ರೂ ಸಾಲ ದೊರೆಯಿತು. ಇದರ ಜೊತೆಯಲ್ಲಿ ಕಟ್ಟಡ ಖರೀದಾರರೊಂದಿಗೆ ಮಾತುಕತೆಯೂ ನಡೆಸಿದೆ. ಆದಾದ ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಎದುರಾಯಿತು. ಈ ಹಿನ್ನಲೆಯಲ್ಲಿ ನನ್ನ ವ್ಯವಹಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕಾದ ಅನಿವಾರ್ಯತೆ ಬಂತು. ಚುನಾವಣೆ ಮುಗಿದ ಬಳಿಕ ಮತಎಣಿಕೆಗೆ ಕೆಲ ದಿನಗಳಿರಬೇಕಾದರೆ ನನ್ನ ವ್ಯವಹಾರವನ್ನು ಮುಂದುವರಿಸಿದೆ. 23.5.2014ರಂದು ಫೆಡರಲ್ ಬ್ಯಾಂಕ್ ನನ್ನ ಕೈಗೆ 8 ಕೋಟಿ ರೂ ಸಾಲವನ್ನು ನೀಡಿತು. ನಾನು ಜನರ ಹಣವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಫೆಡರಲ್ ಬ್ಯಾಂಕ್ ನ ಎಲ್ಲಾ ದಾಖಲೆಗಳನ್ನು ಮಾದ್ಯಮಕ್ಕೆ ಬಿಡುಗಡೆ ಮಾಡಿದರು.
ಕೇಂದ್ರ ಸಚಿವ ಸದಾನಂದ ಗೌಡರು ಲೋಕಸಭಾ ಚುನಾವಣೆಯಲ್ಲಿ ಘೋಷಿಸಿಕೊಂಡಿದ್ದ 9.88 ಕೋಟಿ ರೂ ಆಸ್ತಿಯಿಂದ ಈಗ 20.34 ಕೋಟಿಗೆ, ಅಂದರೆ 10.46 ಕೋಟಿ ರೂ ವೃದ್ಧಿ ಕಂಡಿದೆ ಎಂದು ಆಪಾದಿಸಲಾಗಿತ್ತು.
2 Comments
ಅಲ್ಲರಿ ಗೌಡರೆ ಕಳ್ಳರು ಕದ್ದು ಕೊಡುವ ಭಾಷಣಕ್ಕೆ ಇದಕ್ಕಿಂತ ಒಂದು ದೊಡ್ಡ ಉಧಾರಣೆಬೇರೆ ಇದೇನಾ …
ಯೋದಿಯೋರಪ್ಪ ರೆಡ್ಡಿ ಗಳು ಚೆಡ್ಡಿ ಗಳು ಕಳ್ಳ ಕಾಂಗಿ ಗಳು ಹೇಳಿದು ಕೂಡ ಹೀಗೆನೆ…
ನಮ್ಮ ಮತದಾರರು ನಿಮ್ಮಂತಹವರಿಗೆ ಅಧಿಕಾರಕ್ಕೆ ಏರಿಸುದು ನಿಮ್ಮ ಕಿಸೆ ತುಂಬಿಸಲು ಮತ್ತು ದರೋಡೆ ಕೊಲೆ ಲೂಟಿಗಷ್ಟೆ ..
Salakkoo aastigoo enu sambhanda sadananda gowdare? Hagadre nimma vyavahara enu?