ಬಂಟ್ವಾಳ: ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಮಂಗಳೂರು ಸಂಸ್ಥೆಯ ನೇತೃತ್ವದಲ್ಲಿ 32ನೇ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಫೆಡರೇಶನ್ ಚಾಂಪಿಯನ್ ಶಿಫ್-2014 ಅಕ್ಟೋಬರ್ 16ರಿಂದ 19ರ ತನಕ ಮಂಗಳೂರಿನ ಯು.ಶ್ರೀನಿವಾಸ್ ಮಲ್ಯ ಇಂಡೂರ್ ಸ್ಟೇಡಿಯಂನಲ್ಲಿ ನಡೆಯಿತು.
ಇನ್‌ಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ್(ರಿ) ಮಂಗಳೂರು ಸಂಸ್ಥೆಯ ಸಹ ಶಾಖೆಯಾದ ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ಅಶ್ವಿತ.ಎ ಕಲರ್ ಬೆಲ್ಟ್ ಹುಡುಗಿಯರ 45-50 ಕೆ.ಜಿ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ.
ಶಾಲೆಯಲ್ಲಿ ಪಠ್ಯೇತರ ತರಗತಿಯಲ್ಲಿ ಅಭ್ಯಾಸ ನಡೆಸಿದ್ದು ಈ ಸ್ಪರ್ಧೆಗೆ ಕರಾಟೆ ಸಂಸ್ಥೆಯಿಂದ ಆಯ್ಕೆಗೊಳಿಸಿ ಹೆಚ್ಚಿನ ವಿಶೇಷ ತರಬೇತಿಗೆ ಹಾಜರುಪಡಿಸಲಾಗಿತ್ತು. ಅನುಭವಿ ತರಬೇತಿ ಕರಾಟೆಯ ನಿರ್ದೇಶಕ ಮುಖ್ಯ ಗುರುಗಳಾದ ಸೆನ್ಸಾಯಿ ವಸಂತ ಕೆ ಬಂಗೇರರ ತರಬೇತಿ ಮತ್ತು ಮಾರ್ಗದರ್ಶನದೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು.
ಇನ್‌ಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಸದಸ್ಯೆಯಾಗಿರುತ್ತಾಳೆ. ಈಕೆ ತುಂಬೆ ರಾಮಲ್ ಕಟ್ಟೆ ಶ್ರೀಮತಿ ವಿದ್ಯಾ ಅರುಣ್ ಮತ್ತು ಅರುಣ್ ಪೂಜಾರಿ ಕುವೈಟ್ ದಂಪತಿಗಳ ಸುಪುತ್ರಿಯಾಗಿರುತ್ತಾಳೆ.
ಸಾತ್ವಿಕ್‌ಗೆ ರಾಷ್ಟ್ರಮಟ್ಟದ ಬೆಳ್ಳಿಪದಕ :
ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಮಂಗಳೂರು ಸಂಸ್ಥೆಯ ನೇತೃತ್ವದಲ್ಲಿ 32ನೇ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಫೆಡರೇಶನ್ ಚಾಂಪಿಯನ್ ಶಿಫ್-2014 ಅಕ್ಟೋಬರ್ 16ರಿಂದ 19ರ ತನಕ ಮಂಗಳೂರಿನ ಯು.ಶ್ರೀನಿವಾಸ್ ಮಲ್ಯ ಇಂಡೂರ್ ಸ್ಟೇಡಿಯಂನಲ್ಲಿ ನಡೆಯಿತು.
ಇನ್‌ಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ್(ರಿ) ಮಂಗಳೂರು ಸಂಸ್ಥೆಯ ಸಹ ಶಾಖೆಯಾದ ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ಸಾತ್ವಿಕ್ ಎಲ್.ರೈ ವೈಟ್ ಬೆಲ್ಟ್ ಹುಡುಗರ 25-30 ಕೆ.ಜಿ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾನೆ.
ಶಾಲೆಯಲ್ಲಿ ಪಠ್ಯೇತರ ತರಗತಿಯಲ್ಲಿ ಅಭ್ಯಾಸ ನಡೆಸಿದ್ದು ಈ ಸ್ಪರ್ಧೆಗೆ ಕರಾಟೆ ಸಂಸ್ಥೆಯಿಂದ ಆಯ್ಕೆಗೊಳಿಸಿ ಹೆಚ್ಚಿನ ವಿಶೇಷ ತರಬೇತಿಗೆ ಹಾಜರುಪಡಿಸಲಾಗಿತ್ತು. ಅನುಭವಿ ತರಬೇತಿ ಕರಾಟೆಯ ನಿರ್ದೇಶಕ ಮುಖ್ಯ ಗುರುಗಳಾದ ಸೆನ್ಸಾಯಿ ವಸಂತ ಕೆ ಬಂಗೇರರ ತರಬೇತಿ ಮತ್ತು ಮಾರ್ಗದರ್ಶನದೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು.
ಇನ್‌ಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಸದಸ್ಯೆಯಾಗಿರುತ್ತಾನೆ. ಈತ ವಾಮದಪದವು ಪಡಂತರ ಕೋಡಿ ಶ್ರೀಮತಿ ಪ್ರಶಾಂತಿ ಎಲ್.ರೈ ಮತ್ತು ಲಕ್ಷ್ಮೀ ನಾರಾಯಣ ರೈ ದಂಪತಿಗಳ ಸುಪುತ್ರನಾಗಿರುತ್ತಾನೆ.