ಮಂಗಳೂರು : ನವದೆಹಲಿ: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ನಿಲೋಫರ್ ಚಂಡಮಾರುತ ಅಪ್ಪಳಿಸುವ ಭೀತಿ ಇದೆ. ಜೊತೆಗೆ ಮಂಗಳೂರು-ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲೂ ನಿಲೋಫರ್ ಚಂಡಮಾರುತದ ಭೀತಿ ಎದುರಾಗಿದೆ.
ಅರಬ್ಬೀ ಸಮುದ್ರದಲ್ಲಿ ರಚನೆಯಾಗಿರುವ ನಿಲೋಫರ್ ಚಂಡ ಮಾರುತ ಮುಂಬೈ ಮುಖಾಂತರ ಉತ್ತರ ದಿಕ್ಕಿಗೆ ಸಾಗಿ, ಗುಜರಾತ್ ರಾಜ್ಯಕ್ಕೆ ವ್ಯಾಪಕ ಹಾನಿ ಮಾಡುವ ಸಾಧ್ಯತೆ ಇದೆ. ಮಂಗಳವಾರ ರಾತ್ರಿಯ ವೇಳೆಗೆ ಈ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪಶ್ಚಿಮ ಕರಾವಳಿಯ ಪ್ರದೇಶಗಳಾದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ಡಿಯು-ಡಾಮನ್, ದಾದರ್ ನಗರ್ ಹವೇಲಿ, ಲಕ್ಷದ್ವೀಪ ಪ್ರದೇಶಗಳಿಗೆ ಚಂಡ ಮಾರುತದ ಪರಿಣಾಮ ಬೀರ ಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇತ್ತೀಚೆಗೆ ಆಂಧ್ರ ಮತ್ತು ಒಡಿಶಾದಲ್ಲಿ ಆರ್ಭಟಿಸಿದ್ದ ಹುಡ್ ಹುಡ್ ಚಂಡಮಾರುತದಷ್ಟು ನಿಲೋ ಫರ್ ಭೀಕರವಾಗಿಲ್ಲ. ಗುಜರಾತ್ ಹಾಗೂ ಪಾಕಿಸ್ತಾನದ ಕೆಲ ಪ್ರದೇಶಗಳಿಗೆ ಹೆಚ್ಚು ಪರಿಣಾಮ ಬೀರಬಹುದು. ಅಲ್ಲಿ ಭಾರೀ ಮಳೆಯಾ ಗುವ ಸಾಧ್ಯತೆ ಬಹಳಷ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ :
. ಹವಾಮಾನ ಇಲಾಖೆ ನೀಡಿದ ಮಾಹಿತಿಯಲ್ಲಿ ಮಂಗಳೂರಿನ ಹೆಸರು ಕೂಡಾ ಸೇರಿರುವುದು ಭೀತಿಗೆ ಕಾರಣವಾಗಿದೆ. ಅಲ್ಲದೆ ಚಂಡಮಾರುತ ಬೀಸುವ ಮುಂಚೆ ಆ ಭಾಗದಲ್ಲಿ ಭಾರೀ ಮಳೆ ಯಾಗಬಹುದೆಂದು ಹೇಳಿದ್ದು, ಸದ್ಯ ಮಂಗಳೂರಿನಲ್ಲಿ ಮಳೆ ಆಗುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.