ಕರಾವಳಿ

ನ.2 : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ರಕ್ತದಾನ ಶಿಬಿರ.

Pinterest LinkedIn Tumblr

vhp_jeethandra_press_1

ಮಂಗಳೂರು,ಅ.29: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸಂಯುಕ್ತ ಅಶ್ರಯದಲ್ಲಿ ರಕ್ತದಾನ ಶಿಬಿರವು ನವೆಂಬರ್  2 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಹ್ಗರದ ಶಾರದಾ ವಿದ್ಯಾಲಯದ ಸಂಭಾಗಣದಲ್ಲಿ ಆಯೋಜಿಸಲಾಗಿದೆ. ವಿಶ್ವ ಹಿಂದೂ ಪರಿಷತ್‌ನ ಸ್ವರ್ಣ ಜಯಂತಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಸಮಾಜದ ಇನ್ನಿತರ ಅನೇಕ ಗಣ್ಯರು ಮತ್ತು ವಿ‌ಎಚ್‌ಪಿ ಮತ್ತು ಭಜರಂಗದಳದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ವಿ‌ಎಚ್‌ಪಿ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋದ್ಯಯ ಶ್ರೀರಾಮ ಜನ್ಮ ಭೂಮಿಯ ಹೋರಾಟಕ್ಕೋಸ್ಕರ ಬಲಿದಾನಗೈದ ಹುತಾತ್ಮರ ಸ್ಮರಣಾರ್ಥವಾಗಿ ಪ್ರತಿವರ್ಷ ಸಾವಿರಾರು ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿರುತ್ತಾರೆ.

vhp_jeethandra_press_2

ಜೊತೆಗೆ ಈ ವರ್ಷ ವಿಶ್ವ ಹಿಂದೂ ಪರಿಷತ್ ನ 50 ನೇ ವರ್ಷದ ಸಲುವಾಗಿ ದೇಶದಾದ್ಯಂತ ಸುಮಾರು 1 ಲಕ್ಷಕ್ಕೂ ಹೆಚ್ಚು ದಾನಿಗಳಿಂದ ರಕ್ತದಾನ ಮಾಡಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನಿರ್ದರಿಸಿದ್ದೆ ಎಂದು ಮಾಹಿತಿ ನೀಡಿದರು.

ಮಂಗಳೂರು ನಗರದ ರಕ್ತದಾನ ಶಿಬಿರದಲ್ಲಿ ಸುಮಾರು 1200 ರಕ್ತದ ಯುನಿಟ್ ಗಳನ್ನು ಸಂಗ್ರಹಿಸುವ ಸಂಕಲ್ಪ ಮಾಡಿದೆ. ಈ ಶಿಬಿರದಲ್ಲಿ ಮಂಗಳೂರು ನಗರದ ಕೆ.ಎಂ.ಸಿ, ರೆಡ್ ಕ್ರಾಸ್, ಫಾದರ್ ಮುಲ್ಲರ್‌ಸ್, ವೆನ್ಲಾಕ್ ಮತ್ತು ಕೆ.ಎಸ್.ಹೆಗ್ಡೆ ಯತಂಹ ಅನೇಕ ಅಸ್ಪತ್ರೆಗಳು ನಮ್ಮೊಂದಿಗೆ ಸಹಕಾರ ನೀಡಲಿದ್ದಾರೆ ಎಂದರು.

vhp_jeethandra_press_3

ರಕ್ತದಾನ ಶಿಬಿರದಲ್ಲಿ ರಾಷ್ಟ್ರಾಭಿಮಾನಿ ಬಂಧುಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ್ ಅಮೂಲ್ಯವಾದ ರಕ್ತವನ್ನು ದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸುವ ಪವಿತ್ರವಾದ ಕೆಲಸದಲ್ಲಿ ಪಾಲ್ಗೊಳ್ಳಬೇಕೆಂದು ಕೊಟ್ಟಾರಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿ‌ಎಚ್‌ಪಿ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಸಂಯೋಜಕ ಭುಜಂಗ ಕುಲಾಲ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Write A Comment