ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಎರಡೂ ಕಡೆಗಳಲ್ಲಿ ಹೆದ್ದಾರಿ ಮಧ್ಯೆಯೇ ಟಯರಿಗೆ ಬೆಂಕಿ ಹಚ್ಚಿದ ಘಟನೆ ಗೋಪಾಡಿಯ ಕಾಂತೇಶ್ವರ ದೇವಸ್ಥಾನದ ಎದುರು ಭಾನುವಾರ ತಡರಾತ್ರಿ ನಡೆದಿದೆ. ಇದು ಕಿಡಿಗೇಡಿಗಳ ಕ್ರತ್ಯ ಎಂದು ಅಂದಾಜಿಸಲಾಗಿದೆ.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಸಂಬಂಧ ಒನ್ ವೇ ರಸ್ತೆಯಿತ್ತು. ಕಿಡಿಗೇಡಿಗಳು ರಾ.ಹೆದ್ದಾರಿಯ ಎರಡು ಕಡೆಗಳಲ್ಲಿ ಮಧ್ಯೆ ಭಾಗದಲ್ಲಿ ಟಯರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಭಾನುವಾರವಾದ ಕಾರಣ ಜನರು ಇಲ್ಲದ ಕಾರಣ ಘಟನೆ ಬೆಲಕಿಗೆ ಬರುವುದು ಕೊಂಚ ವಿಳಂಬವಾಗಿದೆ. ಬಳಿಕ ಪೊಲಿಸರಿಗೆ ಸುದ್ದಿ ತಲುಪಿದ್ದು, ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಾರೆ ಹೆದ್ದಾರಿ ಮಧ್ಯೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ಉದ್ದೇಶ ಏನಿರಬಹುದೆಂಬುದು ಎಲ್ಲರ ಪ್ರಶ್ನೆಯಾಗಿದೆ.