ಕರಾವಳಿ

ಮೊಗರ್ನಾಡು-ಕಲ್ಯಾರು-ಬೋಳಂತೂರು ಸ್ಥಳೀಯ ಯುವಕರಿಂದ ಶ್ರಮದಾನ.

Pinterest LinkedIn Tumblr

sramdana_staliya_nivasi_1a

ಬಂಟ್ವಾಳ, :  ಕಳೆದು 20 ವರ್ಷಗಳಿಂದ ಡಾಮರು ಕಾಣದೆ ತೀರಾ ನಾದುರಸ್ತಿಯಲ್ಲಿದ್ದ ಮೊಗರ್ನಾಡು-ಕಲ್ಯಾರು-ಬೋಳಂತೂರು ರಸ್ತೆಯನ್ನು ಸ್ಥಳೀಯ ಯುವಕರ ಪಡೆ ಶ್ರಮದಾನದ ಮೂಲಕ ದುರಸ್ತಿಗೊಳಿಸಿದೆ. ಇಲ್ಲಿನ ಹಿಂದೂ ಯುವಶಕ್ತಿ ಅಧ್ಯಕ್ಷ ನವೀನ್ ನೇತೃತ್ವದಲ್ಲಿ ಭಾನುವಾರ ಈ ಶ್ರಮದಾನ ನಡೆದಿದ್ದು, ಸಂಘದ ಪದಾಧಿಕಾರಿಗಳ ಜೊತೆ ಗ್ರಾಮಸ್ಥರು ಕೈಗೂಡಿಸಿದರು.

sramdana_staliya_nivasi_2a

ಈ ಹಿಂದೆ ರುಕ್ಮಯ ಪೂಜಾರಿಯವರು ಶಾಸಕರಾಗಿದ್ದ ಕಾಲದಲ್ಲಿಸದ್ರಿ ರಸ್ತೆಯ ಡಾಮರೀಕರಣ ಮಾಡಲಾಗಿತ್ತು, ಬಳಿಕ ಹದಗೆಟ್ಟಿದ್ದ ರಸ್ತೆಯ ಬಗ್ಗೆ ನರಿಕೊಂಬು ಗ್ರಾಮಪಂಚಾಯತ್ ಗೆ ಮನವಿ ಮಾಡಲಾಗಿತ್ತಾದರೂ, ಗ್ರಾ.ಪಂ. ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ಗೆ ಸವಾಲೊಡ್ಡುವ ಸಲುವಾಗಿ ರಸ್ತೆಯ ಹೊಂಡಗಳನ್ನು ಕೆಂಪುಕಲ್ಲಿನ ಹುಡು ಹಾಗೂ ಕಪ್ಪು ಕಲ್ಲಿನ ಹುಡಿ ಹಾಕಿ ದುರಸ್ತಿ ಗೊಳಿಸಿದರು. ಗ್ರಾಮಪಂಚಾಯತ್ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಪಂ.ವ್ಯಾಪ್ತಿಯ ಕಾಲುದಾರಿಗಳನ್ನು ಕಾಂಕ್ರಿಟೀಕರಣ ಗೊಳಿಸಲಾಗಿದೆ, ಆದರೆ ಮೊಗರ್ನಾಡು-ಕಲ್ಯಾರು-ಬೋಳಂತೂರು ಸಂಪರ್ಕದ ಮುಖ್ಯರಸ್ತೆಯನ್ನು ಕಡೆಗಣಿಸಿದ್ದಾರೆ, ಸದ್ರಿ ರಸ್ತೆಯಲ್ಲಿ ಸಾಗುವ ವಾರ್ಡ್‌ನ ಸದಸ್ಯರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.

sramdana_staliya_nivasi_3a sramdana_staliya_nivasi_4a

ಪ್ರತಿಭಟನೆಗೂ ಬೆಲೆ ಕೊಡೊಲ್ಲ..
ಗ್ರಾಮಪಂಚಾಯತ್ ನಿಂದ ಸದ್ರಿ ಪರಿಸರಕ್ಕೆ ಸರಿಯಾಗಿ ನೀರಿನ ಪೂರೈಕೆಯೂ ಆಗುತ್ತಿಲ್ಲ, ಜನರ ಸಮಸ್ಯೆಗಳನ್ನು ಪರಿಹರಿಸಬೇಕಾದ ಪಂಚಾಯತ್ ಗ್ರಾಮಸ್ಥರಿಗೆ ಹೆಚ್ಚು ಸಮಸ್ಯೆಗಳನ್ನೇ ಒಡ್ಡುತ್ತಿದೆ, ಸಮಸ್ಯೆಗಳ ಬಗೆಹರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ, ಅದಕ್ಕೂ ಪಂಚಾಯತ್ ಬೆಲೆಕೊಡುವುದಿಲ್ಲ, ರಸ್ತೆ ಅವ್ಯವಸ್ಥೆ ಬಗ್ಗೆ ಕಳೆದ ವರ್ಷ ಪ್ರತಿಭಟನೆ ನಡೆಸಲಾಗಿತ್ತು, ಬಳಿಕ ರಸ್ತೆ ಡಾಮರೀಕರಣ ಮಾಡಿಕೊಡುತ್ತೇವೆಂದು ಹೇಳಿದ ಗ್ರಾಮಪಂಚಾಯತ್ ಕೊನೆಕ್ಷಣದಲ್ಲಿ ರಸ್ತೆಯ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿ ನಮಗೆ ಅನ್ಯಾಯ ಮಾಡಿದ್ದಾರೆ, ಇದಕ್ಕೆ ದಿಟ್ಟ ಉತ್ತರ ನೀಡುವ ಸಲುವಾಗಿ ಪ್ರತಿಭಟನೆಯ ರೂಪದಲ್ಲಿ ಶ್ರಮದಾನ ನಡೆಸುತ್ತಿರುವುದಾಗಿ ಶ್ರಮದಾನದಲ್ಲಿ ಗ್ರಾ,ಪಂ.ಸದಸ್ಯ ಯಶೋಧರ, ಸಂಘಟನೆಯ ಪ್ರಮುಖರಾದ ದಿನಕರ ಶೆಟ್ಟಿ, ದಯಾನಂದ, ರೋಹಿತ್, ಪ್ರಭಾಕರ, ಕರುಣಾಕರ, ಗಣೇಶ್ ಶೆಟ್ಟಿ, ಚರಣ್ ರಾಜ್, ತಾರಾನಾಥ್, ಶ್ರೀಕಾಂತ್ ಮೊದಲಾದವರು ಭಾಗವಹಿಸಿದ್ದರು.

Write A Comment