ಕುಂದಾಪುರ : ಬೈಂದೂರು ಸಮೀಪದ ಕಡ್ಕೆ ನಿವಾಸಿ ಮಾಸ್ತಿಗೊಂಡ ಎನ್ನುವವರ ಮನೆಯ ಹಟ್ಟಿಯಿಂದ ಎರಡು ಕೋಣಗಳನ್ನು ಅ. 29 ರಂದು ಕಳ್ಳರು ಅಪಹರಿಸಿದ್ದರು. ಈ ಪ್ರಯುಕ್ತ ರವಿವಾರ ಬೈಂದೂರು ಪೊಲೀಸ್ ಠಾಣೆ ಎದುರು ಕೋಣಗಳನ್ನು ಪತ್ತೆ ಹಚ್ಚುವಂತೆ ಹಾಗೂ ಕಳವು ಮಾಡಿದವರನ್ನು ಪತ್ತೆ ಹಚ್ಚಲು ಆಗ್ರಹಿಸಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಬೈಂದೂರು ಪೊಲೀಸರ ಬೃಹತ್ ಕಾರ್ಯಾಚರಣೆಯಿಂದ ಸೋಮವಾರ ಕಾಣೆಯಾದ ಎರಡು ಕೋಣಗಳು ಜೋಗುರು ಪರಿಸರದಲ್ಲಿ ಸಿಕ್ಕಿದೆ. ಕೋಣಗಳೆರಡೂ ಸುರಕ್ಷಿತವಾಗಿದೆ ಎಂಬ ಮಾಹಿತಿಯೂ ಇದೆ.