ಮಂಗಳೂರು,ನ.03: ಸ್ವಚ್ಥ ಭಾರತ ಅಭಿಯಾನದ ಅಂಗವಾಗಿ ಮಣಿಪಾಲ ವಿಶ್ವವಿದ್ಯಾನಿಲಯದ, ವೆಲ್ಕಂಗ್ರೂಪ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ನ ಎಂ. ಎಸ್ಸಿ – ಹಾಸ್ಪಿಟಾಲಿಟಿ & ಟೂರಿಸಂ ಮ್ಯಾನೇಜ್ಮೆಂಟ್’ ನ, ಹಾಗೂ ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಇನ್ ಟ್ರಾವೆಲ್ & ಟೂರಿಸಂ ನ ವಿದ್ಯಾರ್ಥಿಗಳು ಸೇರಿ ಇತಿಹಾಸ ಪ್ರಸಿದ್ದ ಬಾರ್ಕುರ್ ನ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಬಳಿಯ ಕೆರೆಯ ಬಳಿ ಸಂಕೇತಿಕವಾಗಿ ಸ್ವಚ್ಚತೆಯನ್ನು ಮಾಡಿದರು.
ಈ ಸಂಧರ್ಭದಲ್ಲಿ ಪ್ರೊಫೆಸರ್ ವೈ.ಜಿ. ತಾರಕನ್, ರಾಘವೇಂದ್ರ ಜಿ, ರಾಮದಾಸ್ ಹಾಗೂ ಸ್ಥಳೀಯ ಮಾರ್ಗದರ್ಶಕರುಗಳಾಗಿ ಪಂಚಾಯತ್ ಅಧ್ಯಕ್ಷ ಗೋಕುಲ್ ದಾಸ್, ಏಕನಾಥೇಶ್ವರಿ ಪ್ರಚಾರ ಸಮಿತಿ ಅಧ್ಯಕ್ಷ ನರಸಿಂಹ ಸೇರಿಗಾರ್, ಪ್ರಕಾಶ್ ದೇವಾಡಿಗ, ರಾಜೇಶ್ ಕುಂದರ್, ಪ್ರಕಾಶ್ ಜೋಷಿ ಇವರುಗಳು ಉಪಸ್ಥಿತರಿದ್ದರು. ಕಾಲೇಜ್ ನ ಪ್ರಾಂಶುಪಾಲೆ ಪ್ರೊ|| ಪರ್ವಧವರ್ಧಿನಿ ಇವರ ಮಾರ್ಗ ದರ್ಶನದಂತೆ ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.