ಅಬುಧಾಭಿ : ಬಿಲ್ಲವ ಬಳಗ ಅಬುಧಾಭಿ ಇದರ 20ನೇ ವಾರ್ಷಿಕೋತ್ಸವ ಸಮಾರಂಭವು ಅಲ್ ಧರ್ಪರ್ ಅರೀಫ್ ಸಭಾಂಗಣದಲ್ಲಿ ತಾರೀಕು 31-10-2014 ನೇ ಶುಕ್ರವಾರದಂದು ಬಹಳ ಅದ್ದೂರಿಯಾಗಿ ಜರುಗಿತು.
ಕರುಣಾಕರನ್ ಅವರ ಸುಮಧುರ ಕಂಠದ ಗಣಪತಿ ಶ್ಲೋಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಬೆಳಗ್ಗೆ 10.30 ಗೆ ಆರಂಭವಾಯಿತು ಕುಮಾರಿ ಪ್ರಾಪ್ತಿ ಅವರು ಭರತನಾಟ್ಯ ಹಾಗೂ ಪ್ರಾಥಿಕ್ ಅವರು ಯಕ್ಷಾಗಾನದ ಸ್ವಾಗತ ನೃತ್ಯ ಮಾಡಿದರು. ತುಳು ನಾಡಿನಿಂದ ಸಂಸ್ಕತಿಯ ಪ್ರತೀಕವಾಗಿ ಬಿಲ್ಲವ ಮುತ್ತೈದೆಯರು ದೀಪ ಬೆಳಗಿಸುವುದರೊಂದಿಗೆ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಜರನರನ್ನು ಹಾಗೂ ಗಣ್ಯರನ್ನು ಅಬುದಾಭಿ ಬಿಲ್ಲವ ಬಳಗದ ಸ್ಥಾಪಕರಾದ ಮನೋಹರ್ ತೋನ್ಸೆ ಸ್ವಾಗತಿಸಿದರು.
ಸಮಾರಂಭಕ್ಕೆ ಆಗಮಿಸಿದ ಗಣ್ಯ ವ್ಯಕ್ತಿಗಳಾದ ಶೊಧನ್ ಫ್ರಸಾದ್, ಸತೀಶ್ ಪೂಜಾರಿ, ದಯಾ ಕಿರೊಡಿಯನ್ ಇವರಿಗೆ ಹೂಗುಚ್ಚಗಳನ್ನು ನೀಡಿ ಗೌರವಿಸಲಾಯಿತು. ಅಬುಧಾಬಿ ಬಿಲ್ಲವ ಬಳಗದ ಪುಟಾಣಿಗಳು ಹಾಗೂ ಮಕ್ಕಳು ತಮ್ಮ ನೃತ್ಯ ವೈವಿದ್ಯದಿಂದ ಸೇರಿದ ಜನರ ಮನಸನ್ನು ಸಂತೋಷ ಗೊಳಿಸಿದರು. ಪ್ರನನ್ಯ, ಪ್ರಾಪ್ತಿ, ಶಿಫ಼ಲಿ, ತನಿಶ್, ಶೆಲಿಲ್, ಇವರ ಭರತನಾಟ್ಯ ಜನರ ಮನಸ್ಸನ್ನು ಸೆಳೆಯಿತು.
ದೇಶ ವಿದೇಶಗಳಲ್ಲಿ ಅದ್ವಿತೀಯ ಸಾಧನೆ ಪ್ರತಿಭೆಯನ್ನು ತೋರಿಸಿದ ಅಶೋಕ್ ಪೊಳಲಿ ಇವರ ಉಷ್ಟಪಕ್ಷಿ ನೃತ್ಯ, ಕೋರಿ ನೃತ್ಯ, ಅಜ್ಜ ಅಜ್ಜಿಯರ ಕಲ್ಪಾನಿಕ ಪ್ರೀತಿ ಪ್ರೇಮ ದ್ವೀಪಾತ್ರ ನೃತ್ಯ ಜನಮಣ್ಣನ್ನೆ ಗಳಿಸಿತು. ಇವರಿಗೆ ಬಿಲ್ಲವ ಬಳಗ ಅಬುಧಾಬಿಯ ವತಿಯಿಂದ ಎಲ್ಲರ ಸಮ್ಮುಖದಲ್ಲಿ ಸ್ಮರಣಿಕೆ ಕೊಟ್ಟು ಗೌರವಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮಹಾನ್ ವ್ಯಕ್ತಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಪ್ರಯೊಜಕರಾದ ಅಬು ಖ್ಹಲಿದ್ (ಆಲ್ ಭೊಶಿ) ಇವರಿಗೆ ಪ್ರವೀಣ್ ಶಾಲು ಹೊದಿಸಿ , ಹೂ ಗುಚ್ಚ ನೀಡಿ, ನಂದ ಪೂಜಾರಿ ಸ್ಮರಣಿಕೆ ನೀಡಿ , ರಮೆಶ್ ಸುವರ್ಣ ಫಲವಸ್ತುಗಳನ್ನು ನೀಡಿ ಗೌರವಸಿದರು. ಅದೇ ರೀತಿ ಮಾಧವ ಗುಂಡಿಬೈಲು, ಸತೀಶ್ ವೆಂಕಟರಮನ್, ಜಗನ್ನಾಥ್ ಬಾಬು, ಅಶೋಕ್ ಅಂಚನ್ , ಮನೋಹರ್ ಯೆಯ್ಯಾಡಿ, ಚಂದ್ರಹಾಸ ಶೆಟ್ಟಿ , ಮಲಾಬಾರ್ ಗೋಲ್ದ್ ನ ಪ್ರಯೊಜಕರು , ಕಮಿಟಿ ಸದಸ್ಯರಿಗೂ ಈ ಸಂಧರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಾಧ್ಯಮ ಪ್ರತಿನಿಧಿಗಳಾದ ದೈಜಿ ವರ್ಲ್ದ್ ಡಾಟ್ ಕಾಮ್, ಕನ್ನಡಿಗ ವರ್ಲ್ದ್ ಡಾಟ್ ಕಾಮ್, ಮಂಗಳೂರು ಡಾಟ್ ಕಾಮ್ , ನಮ್ಮ ಟಿ.ವಿ ಇವರಿಗೂ ಸ್ಮರಣಿಕೆ ನೀಡಿ ಗೌರವಿಸುವುದರ ಜೊತೆಗೆ ಕೋರಿಯಗ್ರಫರ್ ಗಳಾದ ಪವನ್ ಇವರನ್ನು ಸ್ಮರಣಿಕೆ ಕೊಟ್ಟು ಸನ್ಮನಿಸಲಾಯಿತು.
ಈ ಸಂಧರ್ಭದಲ್ಲಿ ಇಬ್ಬರು ಮುಖ್ಯ ವ್ಯಕ್ತಿಗಳಿಗೆ ಅವರ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಬಿಲ್ಲವ ಬಳಗ ಸಂಘಟನೆಯ ಸ್ಥಾಪಕ ಸದಸ್ಯರಾದ ಮನೊಹರ್ ತೋನ್ಸೆಗೆ ದಯಾ ಕಿರೋಡಿಯನ್ ಶಾಲು ಹೊದಿಸಿ, ಸುಧಾಕರ್ ತುಂಬೆ ಹೂಗುಚ್ಚ ನೀಡಿ ,ಸತೀಶ್ ಪೂಜಾರಿ ಸ್ಮರಣಿಕೆ ಕೊಟ್ಟು, ಜೀತೆಂದ್ರ ಸುವರ್ಣ ಫಲ ವಸ್ತುಗಳನ್ನು ನೀಡಿ ಸನ್ಮಾನಿಸಿದರು. ಪ್ರದೀಪ್ ಅವರು ಸನ್ಮಾನ ಪತ್ರ ಓದಿದರು.
ನೃತ್ಯ ಲೊಕದಲ್ಲಿ ಅದ್ವೀತಿಯ ಸಾಧನೆ ಮಾಡಿದ ಶೀಮತಿ ಜಾಸ್ಮಿತ ವಿವೆಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಜಯಂತಿ ಉದಯ್ ಇವರು ಸನ್ಮಾನ ಪತ್ರ ಓದಿದರು. ಶ್ರೀಮತಿ ಮಾಧವ, ಶ್ರೀಮತಿ ಪೂರ್ಣಿಮ , ಶ್ರೀಮತಿ ಸರಿತ ಕಿರೋಡಿಯನ್ ಶಾಲು ಹೊದಿಸಿ ಫಲ ವಸ್ತುಗಳನ್ನು ನೀಡಿ , ಸ್ಮರಣಿಕೆ ಕೊಟ್ಟು ಅವರ ಪ್ರತಿಭೆಗೆ ಗೌರವ ಕೊಟ್ಟರು.
ಕಾರ್ಯಕ್ರಮದ ಕೊನೆಯ ಅಂಗವಾಗಿ ನಡೆದ “ಕೋಟಿ ಚೆನ್ನಯ” ನೃತ್ಯ ರೂಪಕವು ಜನರ ಮೆಚ್ಚುಗೆಗಳಿಸಿತು. ಮೈ ಮನಸುಗಳಲ್ಲಿ ಭಕ್ತಿ ಭಾವ ತುಂಬಿಸಿತು. ತುಳುನಾಡಿನ ನಮ್ಮ ಸಂಸ್ಕ್ರತಿಯನ್ನು ಬಿಂಬಿಸುವ ಈ ಕಾರ್ಯಕ್ರಮದ ಪ್ರಯೊಜಕರು ಜಸ್ಮಿತ ವಿವೆಕ್.
20ನೇ ವರ್ಷದ ಈ ವಾರ್ಷಿಕೋತ್ಸವದಲ್ಲಿ ಮದ್ಯೆ ಮದ್ಯೆ ತನ್ನ ಸುಮಧುರ ಕಂಠದಿಂದ ರಸ ಮಂಜರಿ ನಡೆಸಿಕೊಟ್ಟ ಕರುಣಾಕರ್ ಹಾಗೂ ಇಮ್ತಿಯಸ್ ಇವರು ಜನ ಮೆಚ್ಚುಗೆ ಗಳಿಸಿದರು.
ಕರುಣಾಕರನ್ ಇವರನ್ನು ಬಳಗದ ವತಿಯಿಂದ ಗೌರವಿಸಲಾಯಿತು.
ನೃತ್ಯ ಮಾಡಿದ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದ ಕೊನೆಗೆ ಪ್ರದೀಪ್ ಅವರು ಧನ್ಯವಾದ ಅರ್ಪಿಸಿದರು. ಜಯಂತಿ ಉದಯ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.