ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕೊಲ್ಲೂರಿನ ಬಹು ದಿನದ ಬೇಡಿಕೆಯಾದ ಒಳ ಚರಂಡಿ ಮತ್ತು ನೀರಾವರಿ ಯೋಜನೆಗಳನ್ನು ಅತೀ ಶೀಘ್ರವಾಗಿ ಜಾರಿಗೊಳಿಸಿ, ಕೊಲ್ಲೂರಿನ ಪರಿಸರವನ್ನು ಮಲೀನ ಮುಕ್ತ ಮಾಡಬೇಕಾಗಿ ಊರ ನಾಗರಿಕರು ಈ ಸಂದರ್ಭ ಮನವಿ ಮಾಡಿಕೊಂಡರು. ಸಚಿವರು ಸ್ಥಳೀಯರ ಬೇಡಿಕೆಗೆ ಸ್ಪಂದಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳುವ ಬರವಸೆ ನೀಡುವುದರೊಂದಿಗೆ, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಸ್ಥಳೀಯ ಪಂಚಾಯತ್ ಅಧ್ಯಕ್ಷ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ದಿನಾಂಕ ೧೨-೧೧-೨೦೧೪ ರಂದು ಕರೆದಿದ್ದು, ಸದ್ರಿ ಯೋಜನೆಯನ್ನು ಅತೀ ಶೀಘ್ರವಾಗಿ ಕಾರ್ಯ ರೂಪಕ್ಕೆ ತರುವ ಕುರಿತು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಅಧೀಕ್ಷಕ ರಾಮಕ್ರಷ್ಣ ಅಡಿಗ ಮೊದಲಾದವರು ಉಪಸ್ಥಿತರಿದ್ದು ಸಚಿವರನ್ನು ಸ್ವಾಗತಿಸಿದರು.