ಕರಾವಳಿ

ಕುಂದಾಪುರ: ರೈಲಿನಲ್ಲಿ 3,50,000 ಹಣ ಹಾಗೂ 75 ಸಾವಿರದ ಚಿನ್ನಾಭರಣ ಕಳವು

Pinterest LinkedIn Tumblr
theaft
ಕುಂದಾಪುರ: ರೈಲಿನಲ್ಲಿ ಕಳ್ಳತನವಾದ ಬಗ್ಗೆ ಒಂದು ತಿಂಗಳ ಬಳಿಕ ಕುಂದಾಪುರ ಠಾಣೆಯಲ್ಲಿ ಮಹಿಳೆಯೋರ್ವರು ದೂರು ದಾಖಲಿಸಿದ್ದಾರೆ.
ಇಲ್ಲಿನ ಕಾಳಾವರ ಸಮೀಪದ ಸಳ್ವಾಡಿ ನಿವಾಸಿ ಪ್ರತಿಮಾ ಜೆ.ಪಿ ಶೆಟ್ಟಿ  09.10.2014 ರಂದು ದೆಹಲಿಯಿಂದ ನಿಜಾಮುದ್ದೀನ್‌ ರೈಲಿನಲ್ಲಿ ಕುಂದಾಪುರಕ್ಕೆ ಪ್ರಯಾಣಿಸಿ ಬರುತ್ತಿದ್ದಾಗ  ರಾತ್ರಿ ಓರ್ವ ಅಪರಿಚಿತ ವ್ಯಕ್ತಿ ಪ್ರತೀಮಾ ಇರುವ ಕಂಪಾರ್ಟ್‌ಮೆಂಟ್‌ಗೆ ಬಂದು ಕುಳಿತಿದ್ದಾನೆ.
ಪ್ರತಿಮಾ 11.10.2014 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬಳಿ ಬೆಳಿಗ್ಗೆ 02:30 ಗಂಟೆಗೆ ತನ್ನ ಬ್ಯಾಗ್‌ ನೋಡಿದಾಗ ಅದರ ಜಿಪ್‌ನ ಕೆಳಗೆ ಸುಮಾರು 10 ರಿಂದ 15 ಇಂಚು ಉದ್ದಕ್ಕೆ ಬ್ಯಾಗ್‌ನ್ನು ಕತ್ತರಿಸಿ ಅದರಲ್ಲಿದ್ದ ರೂ. 3,50,000/- ಹಣ ಹಾಗೂ ಎರಡು ಚಿನ್ನದ ಬಳೆಒಂದು ಚಿನ್ನದ ಉಂಗುರ ಮತ್ತು ಒಂದು ಜೊತೆ ಕಿವಿ ಒಲೆ ಮತ್ತು ಮುತ್ತಿನ ಸರವನ್ನು ಕಳವು ಮಾಡಿಕೊಂಡು ಹೋಗಿದ್ದುಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ರೂ. 75,000/- ಆಗಬಹುದು  ಪ್ರತಿಮಾ ಜೆ.ಪಿ ಶೆಟ್ಟಿ ರವರು  ಕುಂದಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Write A Comment