ಕರಾವಳಿ

ಲೈಂಗಿಕ ದೌರ್ಜನ್ಯ ಬಗ್ಗೆ ಮಾಹಿತಿ ಜಾಗೃತಿ ಶಿಬಿರ

Pinterest LinkedIn Tumblr

Jokatte_work_shop

ಜೋಕಟ್ಟೆ, ನ.9: ಜೋಕಟ್ಟೆ ಅಂಜುಮನ್ ವಿದ್ಯಾಸಂಸ್ಥೆಯಲ್ಲಿ ಲೈಂಗಿಕ ದೌರ್ಜನ್ಯ ಬಗ್ಗೆ ಮಾಹಿತಿ ಜಾಗೃತಿ ಶಿಬಿರವು ಇತ್ತೀಚೆಗೆ ಜರಗಿತು. ದೇಶಾದ್ಯಂತ ಲೈಂಗಿಕ ದೌರ್ಜನ್ಯದಂತಹ ಅಪರಾಧಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮತ್ತು ಪಣಂಬೂರು ಸಬ್ ಇನ್ಸ್‌ಪೆಕ್ಟರ್ ಸತೀಶ್ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯರಾದ ಹಾಜಿ ಅಬ್ದುರ್ರಝಾಕ್ ನಾರ್ವೆ ವಹಿಸಿದ್ದರು.ಈ ಸಂದರ್ಭದಲ್ಲಿ ‘ಇಂಗ್ಲಿಷ್ ಕಲಿಕೆಯ ಸುಲಲಿತ ವಿಧಾನ’ವನ್ನು ಅಳವಡಿಸುವ ಬಗ್ಗೆ ನುರಿತ ತರಬೇತುದಾರ ಪವನ್ ಭಕ್ತರವರು ಪ್ರಾತ್ಯಕ್ಷತೆಯನ್ನು ನೆರವೇರಿಸಿದರು.

ಪ್ರಾರಂಭದಲ್ಲಿ ಸಂಸ್ಥೆಯ ಸಂಚಾಲಕ ಹಾಜಿ ಮೂಸಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ ಆ್ಯಂಡ್ ಟಿ ಕಂಪೆನಿಯ ಮ್ಯಾನೇಜರ್ ಗಿರೀಶ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಟಿ.ಎ. ಖಾದರ್, ಹಾಜಿ ಬಿ. ಮುಹಮ್ಮದ್, ಸಹ ಸಂಚಾಲಕ ಎ.ಎಂ. ಅಥಾವುಲ್ಲಾ, ಹಾಜಿ ಬಿ.ಎಸ್. ಶರೀಫ್ ಎಂ.ಪಿ. ಇಸ್ಮಾಯೀಲ್, ಆಧುನಿಕ ಖಾದರ್, ಗೋವಾ ಖಾದರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಾಜಿ ಟಿ.ಎ. ಅಲಿಯಬ್ಬ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಸತ್ಯವತಿ ವಿಜಯ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಅರ್ಚನಾ ವಂದಿಸಿದರು. ಪ್ರಾಧ್ಯಾಪಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

Write A Comment