ಬಂಟ್ವಾಳ, ನ.9: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಇತರ ಕಡೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಹಲ್ಲೆ, ಸೊತ್ತು ಹಾನಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಮೂವರ ವಿರುದ್ಧ ಪೊಲೀಸ್ ಇಲಾಖೆ ಗೂಂಡಾಕಾಯ್ದೆಯನ್ನು ದಾಖಲಿಸಿದೆ.
ಪುದುಗ್ರಾಮದ ದೇವಸ್ಯ ಪೇರಿಮಾರು ನಿವಾಸಿ ಹನೀಫ್ ಯಾನೆ ಮಾದ ಹನೀಫ್ (29), ಮಾರಿಪಳ್ಳ ಪಾಡಿ ನಿವಾಸಿ ಹಫೀಝ್ ಯಾನೆ ಅಪ್ಪಿ(25) ಹಾಗೂ ಮಾರಿಪಳ್ಳ ಶಾಲಾ ಬಳಿ ನಿವಾಸಿ ಎಂ.ಇಮ್ರಾನ್(23) ಗೂಂಡಾ ಕಾಯ್ದೆಗೆ ಒಳಪಟ್ಟವರು.
ಆರೋಪಿಗಳ ಪೈಕಿ ಹನೀಫ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 8, ನಗರ ಠಾಣೆಯಲ್ಲಿ 1 ಹಾಗೂ ಬಜ್ಪೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ, ಹಫೀಝ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ 4, ನಗರ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದೆ, ಇಮ್ರಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ 8 ಹಾಗೂ ನಗರ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸದ್ರಿ ಗೂಂಡಾ ವ್ಯಕ್ತಿಗಳನ್ನು ದಸ್ತಗಿರಿ ಮಾಡಿ ಹಿರಿಯಡ್ಜದ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.