ಕರಾವಳಿ

‘ನರ್ಸಿಂಗ್ ಪ್ರೊಸೆಸ್’ ಕಾರ್ಯಾಗಾರ

Pinterest LinkedIn Tumblr

Yenopoya_Nursing_wshop

ಉಳ್ಳಾಲ, ನ.9: ಸಮಾಜದಲ್ಲಿ ಒಂದು ಉತ್ತಮ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ನರ್ಸ್‌ಗಳ ಪಾತ್ರವೂ ಅತ್ಯಂತ ಮಹತ್ವಪೂರ್ಣವಾದುದು. ರೋಗಿಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಆರೋಗ್ಯದ ರಕ್ಷಣೆಯ ವಿಷಯದಲ್ಲಿ ಬಹಳಷ್ಟು ಸೂಕ್ಷ್ಮತೆಗಳನ್ನು ನರ್ಸ್‌ಗಳು ಅರಿತುಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಡೀನ್ ಡಾ. ಆನಿಸ್ ಜಾರ್ಜ್ ಅಭಿಪ್ರಾಯಪಟ್ಟರು.

ಅವರು ಯೆನೆಪೋಯ ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ‘ನರ್ಸಿಂಗ್ ಪ್ರೊಸೆಸ್’ ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರವನ್ನು ಯೆನೆಪೊಯ ವಿ.ವಿ.ಯ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ನರ್ಸಿಂಗ್ ಕ್ಷೇತ್ರಕ್ಕೆ ಇಂದು ಬಹಳಷ್ಟು ಅವಕಾಶಗಳಿವೆ. ಇಂತಹ ವಿಚಾರ ಸಂಕಿರಣಗಳ ಸದುಪಯೋಗವನ್ನು ಪಡೆದು ಹಲವಾರು ವಿಷಯಗಳ ಬಗ್ಗೆ ಅಧ್ಯಯನವನ್ನು ಮಾಡುವುದರ ಜೊತಗೆ ಈ ಕ್ಷೇತ್ರದ ಹಿರಿಮೆಯನ್ನು ಮತ್ತಷ್ಟು ಬೆಳೆಸಬೇಕು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಯೆನೆಪೊಯ ವಿವಿಯ ಉಪಕುಲಪತಿ ಡಾ.ಪಿ.ಚಂದ್ರಮೋಹನ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಸಿ.ವಿ.ರಘುವೀರ್, ಯೆನೆಪೊಯ ನರ್ಸಿಂಗ್ ಕಾಲೇಜಿನ ಡೀನ್ ಡಾ.ಆಶಾ ಶೆಟ್ಟಿ, ಯೆನೆಪೊಯ ವಿ.ವಿ.ಪ್ರಾಧ್ಯಾಪಕ ನಿಶಾದ್ ಇನ್ನಿತರರು ಉಪಸ್ಥಿತರಿದ್ದರು.

Write A Comment