ಉಡುಪಿ: ಯುವ ಕಥೊಲಿಕ್ ವಿದ್ಯಾರ್ಥಿ ಸಂಚಲನದಿಂದ ಕೊಂಕ್ಣಿ ಸಂಸ್ಕ್ರತಿ – ಯುವ ಫೆಸ್ತ್ ಒಂದು ದಿನದ ಹಬ್ಬವನ್ನು ಶಂಕರಪುರ ಪಾಂಗ್ಳಾ ಸಂತ ಯೋಹಾನ್ನರ (ಜುವಾಂವ್) ಇಗರ್ಜಿಯ ಮೈದಾನದಲ್ಲಿ ಆಚರಿಸಿಲಾಯಿತು.
ಈ ಹಬ್ಬದ ಅಧ್ಯಕ್ಷತೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ಡಾ|ಜೆರಾಲ್ಡ್ ಐಸಾಕ್ ಲೋಬೊ ವಹಿಸಿಕೊಂಡಿದ್ದರು ನಮ್ಮ ಕೊಂಕಣಿ ಸಂಸ್ಕ್ರತಿ, ತುಂಬ ಶ್ರೀಮಂತವಾದುದು ಈ ಮಣ್ಣಿನ ಆಚಾರ ವಿಚಾರ, ಎಂದು ಮರೆಯಬಾರದು, ಇವತ್ತು ಯುವ ವಿದ್ಯಾರ್ಥಿಗಳಿಗೆ ಸಂಸ್ಕ್ರತಿ ಆಚಾರ ವಿಚಾರಗಳ ಬಗ್ಗೆ ತುಂಬ ಕಲಿಯಲು ಸಿಗುತ್ತದೆ, ಇವತ್ತು ನೀವು ಸಂಸ್ಕ್ರತಿಯ ಆಚಾರವನ್ನು ಪಾಲಿಸಿದ್ದಿರಿ, ಇದನ್ನು ಇಂದು ಮಾತ್ರವಲ್ಲಾ. ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳ ಬೇಕೆಂದು ಎಂದರು.
ಪಾಂಗ್ಳಾ ಸಂತ. ಯೋಹಾನ್ನರ ಇಗರ್ಜಿಯ ಪ್ರಧಾನ ವ|ಧರ್ಮಗುರು ಲೆಸ್ಲಿ ಡಿ’ಸೋಜಾ ಹಡಿ ಮಂಚದ ಮೇಲೆ ತೇನೆ ಬತ್ತವನ್ನು ಬಡಿಯುತ್ತಾ ಈ ಹಬ್ಬವನ್ನು ಉದ್ಘಾಟಿಸಿ ಸಂಸ್ಕ್ರತಿ ಹಬ್ಬಕ್ಕೆ ಶುಭ ಕೋರಿದರು. ಕೊಂಕಣಿ ಭಾಶೆ ಮತ್ತು ಆಡಳಿತ್ಮಾಮಕ ಪರೀಕ್ಷೆ ಇದರ ಬಗ್ಗೆ ಶ್ರೀಮತಿ ಐರ್ನ್ ರೆಬೆಲ್ಲೊರವರು ತಿಳುವಳ್ಕೆ ನೀಡಿದರು. ನಂತರ ಕೊಂಕಣಿ ಗೀತೆ ನ್ರತ್ಯ, ಕೊಂಕಣಿ ಪಂಗಡ ಗಾಯನ ಮತ್ತು ಕ್ವೀಜ್ ಸ್ಪರ್ದೆಗಳು ನೆಡೆದವು
ಮಧ್ಯಾನ್ನದ ಬಳಿಕ ಕೊಂಕಣಿ ಸಂಸ್ಕ್ರತಿಯ ಬಗ್ಗೆ ಕುಂದಾಪುರ, ಕಾರ್ಕಳ, ಉಡುಪಿ, ಶಿರ್ವಾ ಮತ್ತು ಕಲ್ಯಾಣ್ಪುರ ವಲಯಗಳ ವಾಯ್.ಸಿ.ಎಸ್ ಸದಸ್ಯರಿಂದ ಕೊಂಕಣಿ ಸಂಸ್ಕ್ರತಿಯ ಬಗ್ಗೆ ಸಣ್ಣ ನಾಟಕಗಳು ಪ್ರದರ್ಶನ ಗೊಂಡವು.
ಸಂಜೆಯ ಸಮಾಪನ ಕಾರ್ಯಕ್ರಮಕ್ಕೆ ಅ|ವ|ಮೊನ್ಸಿಜೆಂರ್ ಬ್ಯಾಪ್ಟಿಸ್ಟ್ ಮಿನೇಜಸ್ ಅಧ್ಯಕ್ಷತೆಯನ್ನು ವಹಿಸಿ ಹೆತ್ತವರು ಇಂದು ಮಕ್ಕಳಿಗಾಗಿ ಯಾವ ತ್ಯಾಗಕ್ಕೂ ಸಿದ್ದರಿದ್ದಾರೆ, ಕೇಳಿದನ್ನು ನೀಡುತ್ತಾರೆ, ಹಾಗೇ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕ್ರತಿ, ಆಚಾರ ವಿಚಾರಗಳ ತಿಳುವಳಿಕೆ ಕೊಟ್ಟು, ಈಗಿನ ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕ್ರತಿ ಬಗ್ಗೆ ಅರಿವು ಮುಡಿಸಿ ಉಳಿಸಿ ಬೇಳೆಸಲು ನೆರವಾಗ ಬೇಕೆಂದು ಕರೆ ಕೊಟ್ಟರು.
ನಾವು ನಮ್ಮ ಸುತ್ತ ಮುತ್ತಲಿನ ಜನರೊಡನೆ ಬೆರೆತು, ನಮ್ಮ ಸಂಸ್ಕ್ರತಿ ಆಚಾರ ವಿಚಾರಗಳೊಡನೆ ಜೀವಿಸ ಬೇಕು, ಅವರ ಭಾವನೆಗಳಿಗೆ ಬೆಲೆ ಕೊಡದಿದ್ದರೆ, ಅವರ ನಾವು ಮನಸ್ಸುಗಳಿಗೆ ನೋವುಂಟ ಮಾಡಿದರೆ, ನಮ್ಮದು ಅದೊಂದು ಧರ್ಮವಲ್ಲಾ, ಹಾಗಾಗಿ ನಾವು ಎಲ್ಲಾ ಧರ್ಮ ಸಂಸ್ಕ್ರತಿಯೊಂದಿಗೆ ಬೆರೆತು ಜೀವಿಸಲು ವಾಯ್.ಎಸ್.ಎಮ್. ಸಂಘವನ್ನು ಸಂಘಟಿಸಿದ್ದೆವೆ ತಿಳಿಸಿದರು.
ಕಾರ್ಯದರ್ಶಿ ಯುವ ಆಯೋಗ ಕರ್ನಾಟಕ್ ಪ್ರಾಂತ್ಯ ವ|ಮರಿ ಜೋಸೆಫ್ ಮಾತಾಡುತ್ತಾ ೨೦ ನೇ ಶತಮಾನದಲ್ಲಿ ಪ್ರಪಂಚದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು, ಆದ್ದರಿಂದ ಮಾನವ ಹಳೆ ಸಂಸ್ಕ್ರತಿಯನ್ನು ಮರೆಯ ತೊಡಗಿದ, ಆದರೆ ಈ ನಾಗರಿಕತೆ ಪುನಾರವರ್ತನೆಯಾಗುವುದು ಅದಕ್ಕಾಗಿ ನಾವು ನಮ್ಮ ಪುರಾತನ ಉತ್ತಮ ಸಂಸ್ಕ್ರತಿಗಳನ್ನು ಮರೆಯಬಾರದೆಂದು ಮನವರಿಕೆ ಮಾಡಿ ಕೊಟ್ಟರು
ಶ್ರೀ.ಮಾರ್ಕ್ ವ್ಹಾಜ್ ಪಾಂಗ್ಳಾ ಇಗರ್ಜಿಯ ಉಪಾಧ್ಯಕ್ಷರು, ಕಾರ್ಯದರ್ಶಿ ಶ್ರೀಮತಿ ಮಾರ್ಗರೇಟ್ ಡಿಸೋಜಾ, ವಿನಾರ್ಡ್ ಡಿಕೋಸ್ತಾ ಕುಂದಾಪುರ, ಕ್ಯಾಲ್ವಿನ್ ಡಿಸಿಲ್ವಾ ಕಲ್ಯಾಣ್ಪುರ. ಜೊಯ್ಸನ್ ಜೆ ಡೆಸಾ ಶಿರ್ವಾ. ಕ್ಲಿಂಟನ್ ಕಾರ್ಡೋಜಾ ಕಾರ್ಕಳಾ, ಡೆರಿಲ್ ಕ್ವಾಡರ್ಸ್ ಉಡುಪಿ, ವಲಯದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ವಾಯ್.ಸಿ.ಎಸ್. ನ ನಿರ್ದೇಶಕರಾದ ವ|ಧರ್ಮಗುರು ಎಡ್ವಿನ್ ಡಿಸೋಜಾ ಈ ಹಬ್ಬದ ಸಂಯೋಜಕರು ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. ಈ ಕೊಂಕಣಿ ಸಂಸ್ಕ್ರತೆ ಹಬ್ಬದಲ್ಲಿ ಭಾರತದ ಅನೇಕ ಕಡೆಗಳಿಂದ ವಿಧ್ಯಾರ್ಥಿಗಳು ಶಾಮೀಲಾಗಿದ್ದು ಒಟ್ಟು 800 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹಾಗೂ ಹಲವಾರು ಧರ್ಮಗುರುಗಳು, ಧರ್ಮ ಭಗಿನಿಯರು, ಸಂಘಟನೇಯ ಸಚೇತಕರು,ಸದಸ್ಯರ ತಂದೆ ತಾಯಂದಿರು ಈ ಹಬ್ಬದಲ್ಲಿ ಪಾಲುಗೊಂಡಿದ್ದರು.