ಮಂಗಳೂರು : ದೇಶದ ಅತಿ ದೊಡ್ಡ ಹಗರಣಗಳನ್ನು ಬಯಲಿಗೆಳೆದ ಮತ್ತು ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾದ ಹಿರಿಯ ಭಾಜಪಾ ನಾಯಕ ಡಾ . ಸುಬ್ರಹ್ಮಣಿಯನ್ ಸ್ವಾಮಿಯವರು ಭ್ರಷ್ಟಾಚಾರದ ವಿರೋಧಿ ಜಾಗೃತಿಗಾಗಿ ದೇಶದ್ಯಂತ ಪ್ರವಾಸದಲ್ಲಿ ತೊಡಗಿದ್ದು, ದಿನಾಂಕ 15-11-2014 ರ ಶನಿವಾರದಂದು ಮಂಗಳೂರಿಗೆ ಭೇಟಿ ನೀದಲಿದ್ದಾರೆ. ಅವರು ಉಪನ್ಯಾಸವನ್ನು ನೀಡಲಿದ್ದಾರೆ.
ಅಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಮಂಗಳೂರಿನ ಸಂಘನಿಕೇತನದಲ್ಲಿ ಮಂಗಳೂರಿನ ‘ಸಿಟಿಜನ್ಸ್ ಕೌನ್ಸಿಲ್’ ಆಯೋಜಿಸಿರುವ ಕಾರ್ಯಕ್ರಮದಲ್ಲಿ “war against curreption and terrarism” ಎಂಬ ವಿಷಯದ ಕುರಿತು ಡಾ. ಸುಬ್ರಹ್ಮಣಿಯನ್ ಸ್ವಾಮಿಯವರು ಉಪನ್ಯಾಸವನ್ನು ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್ ಲಿಮಿಡೆಡ್‌ನ ಅಧ್ಯಕ್ಷರಾದ ಶ್ರೀ ಅನಂತಕೃಷ್ಣ ಅವರು ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.