File Photo (ಕಡತ ಚಿತ್ರ)
ಸುರತ್ಕಲ್,ನ.11 : ಬಿಜೆಪಿ ಮುಖಂಡನ ಮನೆಯ ಹೊರಗಡೆ ನಿಲ್ಲಿಸಲಾಗಿದ್ದ ಬೊಲೆರೋ ಜೀಪ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶನಿವಾರ ತಡ ರಾತ್ರಿ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಬಳಿ ನಡೆದಿದ್ದು, ನಿನ್ನೆ ವಿಷಯ ಬಯಲಾಗಿದೆ.
ಕುಳಾಯಿಯಲ್ಲಿ ವಾಸವಾಗಿರುವ ಬಿಜೆಪಿಯ ಮುಖಂಡ ರಾಜೇಶ್ ಎಂಬವರ ಮನೆಯ ಆವರಣದೊಳಗೆ ನಿಲ್ಲಿಸಿದ್ದ ಬೊಲೆರೋ ವಾಹನಕ್ಕೆ ದುಷ್ಕರ್ಮಿಗಳು ದೊಂಬಿ ಎಬ್ಬಿಸಬೇಕು ಎಂಬ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಯಾರು ಈ ಕುಕೃತ್ಯ ಎಸಗಿರ ಬಹುದೆಂಬ ಸತ್ಯ ಬಯಲಾಗದಿದ್ದರೂ ಕಾರಣಕ್ಕೆ ಅನುಮಾನಗಳು ಶುರುವಾಗಿದೆ.
ಕೆಲ ದಿನಗಳ ಹಿಂದಷ್ಟೇ ಪೊಲೀಸರು ಕೋಡಿಕೆರೆ ನಿವಾಸಿ ಮನೋಜ್ ಮೇಲೆ ಗೂಂಡಾ ಕಾಯ್ದೆ ಹಾಕಿದ್ದರು. ಉದ್ರಿಕ್ತ ಹಿಂದೂ ಸಂಘಟನೆ ಕಾರ‍್ಯಕರ್ತರು ಮನೋಜ್ ಗೂಂಡಾ ಕಾಯ್ದೆಗೆ ಸಂಬಂಧಿಸಿದಂತೆ ಪೊಲೀಸರನ್ನು ಹೀನಾಯ ಮಾನ ಜರಿದೆ ಕಮಿಷನರ್ ಆರ್.ಹಿತೇಂದ್ರ ಮತ್ತು ಉಸ್ತುವಾರಿ ಸಚಿವ ರಮಾನಾಥ್ ರೈ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಅಲ್ಲದೆ ಸಂಘ ಪರಿವಾರದ ನಿಗದಿಯಂತೆ ಇನ್ನೂ ಪ್ರತಿಭಟನೆಗಳು ನಡೆಯಲಿವೆ.
ಇಷ್ಟರ ಮದ್ಯೆ ಯಾರೋ ಕಿಡಿಗೇಡಿಗಳು ಬಿಜೆಪಿ ಮುಖಂಡನ ವಾಹನಕ್ಕೆ ಬೆಂಕಿ ಹಚ್ಚಿರುವುದು ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಗಲಭೆ ನಡೆಸುವ ಉದ್ದೇಶವೇ ನೀಚರದ್ದು ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು, ಬಿಜೆಪಿ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.