ಕರಾವಳಿ

ಬೈಕ್ ಕಳ್ಳರಿಬ್ಬರ ಸೆರೆ : 3 ಬೈಕ್ ವಶ

Pinterest LinkedIn Tumblr

 baik_thives_photo_a

ಮಂಗಳೂರು, ನ.12: ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಡುಪು ನಿವಾಸಿ ಅವಿಲ್ ಕ್ರಾಸ್ತಾ(19) ಮತ್ತು ಮುಲ್ಲಕಾಡು ದ್ವಾರದ ಬಳಿಯ ನಿವಾಸಿ ವಿವಿಯನ್ ಕ್ವಾಡ್ರಸ್(19) ಬಂಧಿತ ಆರೋಪಿಗಳು.

ಇವರು ಕಳವು ಮಾಡಿ ಅಡಗಿಸಿಟ್ಟಿದ್ದರೆನ್ನಲಾದ 3 ಬೈಕ್‌ಗಳನ್ನು ನೀರುಮಾರ್ಗದ ಪಿಲಿಕುಮೇರಿ ಗುಡ್ಡೆಯ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಳ್ಳಲಾದ ಬೈಕ್‌ಗಳಲ್ಲಿ ಎರಡು ಬೈಕ್‌ಗಳು ಕಳವಾದ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿವೆ. ನೋಂದಣಿ ಸಂಖ್ಯೆ ಇಲ್ಲದ ಸ್ಕೂಟರ್ ಸುಮಾರು 6 ತಿಂಗಳ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳವಾದ ವಾಹನವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಪೊಲೀಸ್ ಉಪ ನಿರೀಕ್ಷಕ ವೆಂಕಟೇಶ್.ಐ, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಸುಕುಮಾರ್ ಶೆಟ್ಟಿ, ಮೋಹನ್, ಮೆಲ್ವಿನ್ ಪಿಂಟೋ, ಸುಧೀರ್ ಕುಮಾರ್‌ರವರು ನ.11ರಂದು ಮಂಗಳೂರು ನಗರದ ವಾಮಂಜೂರು ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸುಜುಕಿ ಸ್ವಿಸ್ ವಾಹನದಲ್ಲಿ ಬಂದ ಇಬ್ಬರನ್ನು ಹಿಡಿದು ವಿಚಾರಿಸಿದಾಗ ಅವರ ಬಳಿ ಇದ್ದುದು ಕಳವುಗೈದ ವಾಹನ ಎಂಬುದು ಬಹಿರಂಗ ಗೊಂಡಿತ್ತು. ಆರೋಪಿಗಳು ಚಲಾಯಿಸಿಕೊಂಡು ಬಂದ ಸ್ಕೂಟರ್ ಅ.28ರಂದು ಕಳವಾದ ಮಂಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Write A Comment