ಕರಾವಳಿ

ಸ್ನೇಹ ಶಾಲೆಗೆ ಸಚಿವ ಶ್ರೀ ರಮಾನಾಥ ರೈ ಭೇಟಿ

Pinterest LinkedIn Tumblr

5

ಸುಳ್ಯದ ಬಸ್ ಡಿಪೋ ಶಂಕುಸ್ಥಾಪನೆಯ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ ರಮಾನಾಥ ರೈಯವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಇಲ್ಲಿನ ಶಿಕ್ಷಣ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಪರಿಸರಕ್ಕೆ ಪೂರಕವಾಗುವ ವಾತಾವರಣವನ್ನು ಉಳಿಸಿಕೊಂಡು ನೈಸರ್ಗಿಕ ಗಿಡ-ಮರಗಳ ಮಧ್ಯದಲ್ಲಿ ಶಿಕ್ಷಣ ನೀಡುತ್ತಿರುವುದು ಮಕ್ಕಳ ಭೌತಿಕ ಮತ್ತು ಬೌದ್ಧಿಕ ಶಕ್ತಿಯ ಬೆಳವಣಿಗೆಗೆ ಬಹಳ ಸಹಾಯವಾಗುತ್ತದೆ ಎಂಬುದಾಗಿ ಅರಣ್ಯ ಸಚಿವರೂ ಆಗಿರುವ ರೈಯವರು ಸಂದರ್ಶಕರ ಪುಸ್ತಕದಲ್ಲಿಯೂ ದಾಖಲಿಸಿದ್ದಾರೆ. ಬರಹದ ಮನೆ, ಕಲಾಶಾಲೆ, ಬಯಲು ರಂಗಮಂದಿರ ಹಾಗೂ ವೃತ್ತಾಕಾರದ ಕೊಠಡಿಗಳನ್ನು ಸಚಿವರು ವೀಕ್ಷಿಸಿದರು. ಸಂಸ್ಥೆಯ ಅಧ್ಯಕ್ಷ ಡಾ ಚಂದ್ರಶೇಖರ ದಾಮ್ಲೆಯವರು ಕಲಿಕಾ ವ್ಯವಸ್ಥೆಗಳ ಬಗ್ಗೆ ಹಾಗೂ ಶಾಲಾ ಫಲಿತಾಂಶದ ಬಗ್ಗೆ ವಿವರಣೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.  ಸಚಿವರೊಂದಿಗೆ ಸ್ಥಳೀಯ ಮುಂದಾಳುಗಳಾದ ಶ್ರೀ ಸಂಶುದ್ದೀನ್, ಶ್ರೀ ಎಂ ವೆಂಕಪ್ಪ ಗೌಡ, ಶ್ರೀ ಮುಸ್ತಫಾ, ಶ್ರೀ ಪಿ ಎ ಮಹಮ್ಮದ್ ಶ್ರೀ ಜಯಪ್ರಕಾಶ್ ರೈ ಮುಂತಾದವರಿದ್ದರು.

6

Write A Comment