(ಸಾಂದರ್ಭಿಕ ಚಿತ್ರ)
ಉಡುಪಿ: ವಿಕಲ ಚೇತನ ಮತ್ತು ಬುದ್ಧಿಮಾಂಧ್ಯ ಮಗು ಹೆತ್ತವರಿಗೆ ಬೇಡವಾಗಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಈ ಮಗು ಪತ್ತೆಯಾಗಿದೆ.
ಮಣಿಪಾಲ ಕೆ. ಎಂ. ಸಿ. ಆಸ್ಪತ್ರೆಯ ಮಕ್ಕಳ ವಿಭಾಗದ ಪಿ. ಡಿ. -2 ನೇ ವಾರ್ಡ್ ನ ಬೆಡ್ ನಲ್ಲಿಒಂದು ಅನಾಥ ಅಂಗವಿಕಲ, ಹಾಗೂ ಬುದ್ಧಿ ಮಾಂದ್ಯ ಸುಮಾರು 3 ½ ವರ್ಷ ಪ್ರಾಯದ ಹೆಣ್ಣು ಮಗುವನ್ನು ಹೆತ್ತವರು ಬಿಟ್ಟು ಹೋಗಿದ್ದು ಹಾಗೂ ಮಗುವಿನ ಕೈಯಲ್ಲಿ ಹಾಲಿನ ಬಾಟಲಿ ಹಾಗೂ ಒಂದುಚೀಟಿಯನ್ನು ಇರಿಸಿ ಹೋಗಿದ್ದಾರೆ. ಈ ಚೀಟಿಯಲ್ಲಿ “ಹೆಣ್ಣು ಮಗುವಿನ ಆರೈಕೆ ನೋಡಲು ನಾವುಬಡವರಾಗಿರುವುದರಿಂದ, ಅಸಾಧ್ಯವಾಗಿರುವುದಾಗಿಯೂ, ಯಾರಾದರೂ ಚಿಕಿತ್ಸೆ ಕೊಡಿಸಿ’ ಎಂದು ವಿವರಬರೆದಿರುತ್ತದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/14 ಕಲಂ 317ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.