ಕರಾವಳಿ

ಬ್ಯಾಟರಿ ಕಳ್ಳನ ಬಂಧನ : 2.6 ಲಕ್ಷ ರೂ. ಸೊತ್ತು ವಶ | ಒರ್ವ ಪರಾರಿ

Pinterest LinkedIn Tumblr

Bettary_Robry_accsed

ಬೆಳ್ತಂಗಡಿ, ನ.14: ಎರಡು ವರ್ಷಗಳ ಹಿಂದೆ ಉಜಿರೆ ವಿಶ್ವತಾರಾ ಬ್ಯಾಟರಿ ಅಂಗಡಿಯಿಂದ ಸುಮಾರು 38 ಬ್ಯಾಟರಿಗನ್ನು ಕಳವುಗೈದ ಓರ್ವ ಆರೋಪಿಯನ್ನು ಉಜಿರೆ ಟಿ.ಬಿ.ಕ್ರಾಸ್ ಬಳಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ಈತನೊಂದಿಗೆ ಕೈಜೋಡಿಸಿದ್ದ ಇನ್ನೋರ್ವ ಆರೋಪಿ ಪರಾರಿಯಾದ ಘಟನೆ ನಡೆದಿದೆ.

ಮಲವಂತಿಗೆ ದಿಡುಪೆ ಮಂಟಮೆ ಮನೆ ನಿವಾಸಿ ಸಂತೋಷ್ ಕುಮಾರ್ (23) ಬಂಧಿತ ಆರೋಪಿಯಾಗಿದ್ದು. ದಿಡುಪೆ ಕುದ್ಮಾನ್ ನಿವಾಸಿ ಸುದರ್ಶನ್ ಎಂಬಾತ ಪರಾರಿಯಾಗಿದ್ದಾನೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್.ಲಿಂಗಪ್ಪ ಹಾಗೂ ಸಿಬ್ಬಂದಿ ನ.11ರಂದು ಉಜಿರೆ ಟಿ.ಬಿ. ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಮಾಂಡರ್ ಜೀಪೊಂದನ್ನು ನಿಲ್ಲಿಸಲು ಸೂಚಿಸಿದ್ದು ಜೀಪಿನ ಬಳಿ ಹೋದಾಗ ಅದರಲ್ಲಿದ್ದ ಓರ್ವ ಪರಾರಿಯಾಗಿದ್ದಾನೆ.

ಅನುಮಾನಗೊಂಡು ಚಾಲಕ ಸಂತೋಷನನ್ನು ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳವುಗೈದ 2 ಬ್ಯಾಟರಿಗಳನ್ನು ಮಾರಾಟ ಮಾಡಲು ಜೀಪಿನಲ್ಲಿ ಕೊಂಡೊಯ್ಯುತ್ತಿದ್ದು ಸ್ಥಳದಲ್ಲೇ ಬ್ಯಾಟರಿ ವಶಪಡಿಸಿಕೊಂಡು ಕೃತ್ಯಕ್ಕೆ ಬಳಸಿದ ಜೀಪನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ತನಿಖೆಯ ವೇಳೆ ಉಜಿರೆ ವಿಶ್ವತಾರಾ ಬ್ಯಾಟರಿ ಅಂಗಡಿಯಿಂದ ಎರಡು ವರ್ಷದ ಹಿಂದೆ 38 ಬ್ಯಾಟರಿ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಬ್ಯಾಟರಿಗಳನ್ನು ಮಂಗಳೂರು, ಸುರತ್ಕಲ್ ಪರಿಸರದ ಅಂಗಡಿಗಳಿಗೆ ಮಾರಾಟ ಮಾಡಿದ್ದು ಇವುಗಳಲ್ಲಿ 36 ಬ್ಯಾಟರಿಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು ಬೇರೆ ಇತರ ಪ್ರಕರಣಗಳಲ್ಲಿ ಬಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಪತ್ತೆ ಹಚ್ಚಲು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಶರಣಪ್ಪ ಎಸ್.ಡಿ. ಅವರ ನಿರ್ದೇಶನದಂತೆ ಬಂಟ್ವಾಳ ಉಪವಿಭಾಗದ ಸಹಾಯಕ ಅಧೀಕ್ಷಕ ರಾಹುಲ್ ಕುಮಾರ್ ಎಸ್.ರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ ನೇತೃತ್ವದಲ್ಲಿ ಎಎಸ್ಸೈ ಕಲೈಮಾರ್, ಸಿಬ್ಬಂದಿ ತನಿಖೆ ನಡೆಸಿದ್ದಾರೆ.

Write A Comment