ಕರಾವಳಿ

ತೀಯಾ ಸಮಾಜದ ಕಾರ್ಯಾಲಯಕ್ಕೆ ಕೊಂಡೆವೂರು ಸ್ವಾಮೀಜಿ ಭೇಟಿ ಊರಿನ ದೇವಸ್ಥಾನಗಳ ಅಭಿವೃದ್ದಿಗೆ ಮುಂಬಯಿಗರ ಕೊಡುಗೆ ಶ್ಲಾಘನೀಯ.

Pinterest LinkedIn Tumblr

kondevuru_swamiji_photo_1

ವರದಿ : ಈಶ್ವರ ಎಂ. ಐಲ್

ಮುಂಬಯಿ : ಉಪ್ಪಳದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ನ. 16ರಂದು ಅಪರಾಹ್ನ ಘಾಟ್ಕೋಪರ್ ಪೂರ್ವದ ತೀಯಾ ಸಮಾಜದ ಕಾರ್ಯಾಲಯಕ್ಕೆ ಬೇಟಿ ನೀಡಿ ಆಶೀರ್ವಚನ ನೀಡುತ್ತಾ ತೀಯಾ ಸಮಾಜವು ಇನ್ನೂ ವಿಶಾಲವಾಗಿ ಬೆಳೆಯಲಿದ್ದು, ಒಂದು ಕಡ್ಡಿ ಸೇರಿದಾಗ ಇರುವ ಬಲಕ್ಕೂ ಹತ್ತಾರು ಕಡ್ಡಿ ಸೇರಿದಾಗ ಇರುವ ಬಲಕ್ಕೆ ಪ್ರತ್ಯೇಕ ವಿವರಣೆ ಮಾಡುವ ಅವಶ್ಯವಿಲ್ಲ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಎರಡನೇ ಬಾರಿ ಈ ಸ್ಥಳಕ್ಕೆ ಆಗಮಿಸಿದ್ದೇನೆ. ನಾವು ಯಾರು ಸ್ವತಂತ್ರರಲ್ಲ. ನಾವು ಚಲಿಸಿದಲ್ಲಿ ಮಾತ್ರ ಕನ್ನಡಿಯಲ್ಲಿನ ನಮ್ಮ ಪ್ರತಿಬಿಂಬ ಚಲಿಸುತ್ತದೆ. ಭಗವಂತನ ಅನುಗೃಹದಿಂದ ಹೃದಯ ಶುದ್ದಿಯಾಗುತ್ತದೆ. ಊರಿನ ಎಲ್ಲಾ ದೇವಸ್ಥಾನದ ಅಭಿವೃದ್ದಿಗೆ ಮುಂಬಯಿಗರ ಕೊಡುಗೆ ಸ್ಲಾಗನೀಯ. ಈ ಸಂಘಟನೆಯು ಇನ್ನೂ ಅಭಿವೃದ್ದಿಯಾಗಲಿ ಎನ್ನುತ್ತಾ 2015 ಮಾರ್ಚ್ ತಿಂಗಳಲ್ಲಿ ಕೊಂಡೆವೂರಲ್ಲಿ ನಡೆಯಲಿರುವ ಬೃಹತ್ ಯಾಗಕ್ಕೆ ಎಲ್ಲರನ್ನೂ ಆಮಂತ್ರಿಸಿದರು.

kondevuru_swamiji_photo_2 kondevuru_swamiji_photo_3 kondevuru_swamiji_photo_4

ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ ತುಳು ಸಂಸ್ಕೃತಿ ಮತ್ತು ಬಾಷೆಯನ್ನು ಉಳಿಸಲು ಮುಂದಿನ ತಿಂಗಳು ಮಂಗಳೂರಿನಲ್ಲಿ ನಡೆಯಲಿರುವ ವಿಶ್ವ ತುಳು ಪರ್ಬಕ್ಕೆ ಹಾಗೂ 500 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾ ಯಾಗಕ್ಕೆ ನಿಮ್ಮೆಲ್ಲರ ಉಪಸ್ಥಿತಿಯ ಅಗತ್ಯವಿದೆ ಎಂದರು.

kondevuru_swamiji_photo_5 kondevuru_swamiji_photo_6 kondevuru_swamiji_photo_7 kondevuru_swamiji_photo_8

ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬಿ. ಅವರು ಸ್ವಾಮೀಜಿಯವರನ್ನು ಸ್ವಾಗತಿಸಿ ಗೌರವಿಸಿದರು.

ಸಮಾಜದ ಬೋರ್ಡ್ ಆಪ್ ಟ್ರಷ್ಟ್ ನ ಕಾರ್ಯಧ್ಯಕ್ಷ ರೋಹಿದಾಸ ಬಂಗೇರ, ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ, ಮಾಜಿ ಉಪಾಧ್ಯಕ್ಷ ಸುಧಾಕರ ಉಚ್ಚಿಲ್, ಉಪಾಧ್ಯಕ್ಷ ಟಿ. ಬಾಬು ಬಂಗೇರ, ಪ್ರಧಾನ ಕಾರ್ಯದರ್ಶಿ ಐಲ್ ಬಾಬು, ಕೋಶಾಧಿಕಾರಿ ರಮೇಶ್ ಉಳ್ಳಾಲ್ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು, ಇತರ ಸಮಿತಿಗಳ ಪ್ರಮುಖರಾದ ತಿಮ್ಮಪ್ಪ ಬಂಗೇರ, ಗಂಗಾಧರ ಕಲ್ಲಾಡಿ, ಬಾಬು ಬೆಳ್ಚಡ, ದಿವ್ಯಾ ಆರ್. ಕೋಟ್ಯಾನ್, ಉಜ್ವಲ ಚಂದ್ರಶೇಖರ್ ಮತ್ತು ಇತರ ಸದಸ್ಯರುಗಳು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Write A Comment