ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಜಗತ್ತಿನಲ್ಲಿ ಎಲ್ಲಾ ಸೌಲಭ್ಯಗಳು ಮಕ್ಕಳ ಮುಂದಿದ್ದರೂ ಮೂಲ ಸಂಸ್ಕೃತಿ – ಬಾಷೆಯನ್ನು ಮರೆಯಬಾರದೆಂಬ ಉದ್ದೇಶದಿಂದ ಚಿಣ್ಣರ ಬಿಂಬವು ಮಕ್ಕಳಿಗೆ ನೀಡುವ ಸಂಸ್ಕಾರಕ್ಕೆ ಅದರ ರೂವಾರಿ ಪ್ರಕಾಶ್ ಭಂಡಾರಿಯವರ ಸಾಧನೆಗೆ ಅಭಿನಂದನೆಗಳು ಎಂದು ಕರ್ನಾಟಕದ ಸಚೆವೆ, ನಟಿ ಉಮಾಶ್ರೀ ನುಡಿದರು.
ನ. 16 ರಂದು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ನಡೆದ ಚಿಣ್ಣರ ಬಿಂಬ ಮುಂಬಯಿ ಇದರ 12 ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಾಡಿನ ಸಂಸ್ಕೃತಿಯನ್ನು ಉಳಿಸುವ ಇಂತಹ ಕಾರ್ಯಕ್ಕೆ ಮಕ್ಕಳು ಮಾತ್ರವಲ್ಲ ಪೋಷಕರೂ ಕೈಜೋಡಿಸಬೇಕು. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಕರ್ನಾಟಕ ಸರಕಾರದ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೋಡಿಕೊಳ್ಳುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಸಚೆವ ಅಭಯಚಂದ್ರ ಜೈನ್ ಮಾತನಾಡುತ್ತ ಕರ್ನಾಟಕದ ಪ್ರಗತಿಯಲ್ಲಿ ಮುಂಬಯಿ ಕನ್ನಡಿಗರ ದೇಣಿಗೆ ಅಪಾರವಿದ್ದು, ಚಿಣ್ಣರ ಬಿಂಬದ ಸಾಧನೆಯನ್ನು ಸರಕಾರದ ಗಮನಕ್ಕೆ ತರೋಣ ಎಂದರು. ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ಡಾ. ಪ್ರಜ್ನಾ ಅಮ್ಮೆಂಬಳ, ಬಿಲ್ಲವರ ಅಶೋಷಿಯೆಶನ್ ನ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಡಾ. ಜಿ. ಎನ್. ಉಪಾಧ್ಯ, ಉದಯವಾಣಿಯ ಸಂಪಾದಕ ಎ. ವಿ. ಬಾಲಕೃಷ್ನ ಹೊಳ್ಳ ಅವರೂ ಉಪಸ್ಥಿತರಿದ್ದು ಸಮಾರಂಭಕ್ಕೆ ಶುಭ ಹಾರೈಸಿದರು.
ಸ್ಥಾಪಕ ಸದಸ್ಯರಲ್ಲೊಬ್ಬರಾದ ಸುರೇಂದ್ರ ಕುಮಾರ್ ಹೆಗ್ಡೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಕ್ಕಳ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಗೋಪಾಲ್ ಶೆಟ್ಟಿ ಅವರು ಮಕ್ಕಳು ದೇಶದ ಸೊತ್ತು ಚಿಣ್ಣರ ಬಿಂಬವು, ಮಕ್ಕಳಿಂದ ಸದಾ ಹೊಳೆಯುತ್ತಿರಲಿ ಎಂದು ಹಾರೈಸಿದರು. ರಾಜ್ ಟಿಲಿವಿಜನ್ ಇದರ ಹಿರಿಯ ಸಂಪಾದಕ ಹಮೀದ್ ತಾಳ್ಯ ಅವರು ಮಾತನಾಡುತ್ತಾ ಚಿಣ್ಣರ ಬಿಂಬದ ಕಾರ್ಯಕ್ರಮವನ್ನು ನಾನು ಸುವರ್ಣ ಚಾನೆಲ್‌ನಲ್ಲಿರುವಾಗ ಪ್ರಸಾರಗೊಳಿಸಿದ್ದೇವೆ. ಆದರೆ ಇಂದು ಸ್ವತ: ಕಂಡು ಆನಂದಿಸುತ್ತಿದ್ದೇನೆ. ಎಂದರು. ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಜಯರಾಮ ಎನ್. ಶೆಟ್ಟಿ, ಕರ್ನಾಟಕ ಸಚಿವ ವಿನಯ್ ಕುಮಾರ್ ಸೊರಕೆ, ಮಹಾರಾಷ್ಟ್ರ ಸಚಿವೆ ವಿದ್ಯಾಠಾಕೂರ್, ಸಂಜೀವ ಕಂಡೇಲ್‌ವಾಲ ಮೊದಲಾದವರು ಮಾತನಾಡಿ ಅಭಿನಂದಿಸಿದರು.
ಕನ್ನಡ ಚಲನಚಿತ್ರ ನಟ ಉಪೇಂದ್ರ ಅವರು ಮಾತನಾಡಿ, ಇಂದಿನ ಈ ಮಕ್ಕಳ ಕಾರ್ಯಕ್ರಮವನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ. ಪ್ರತಿ ವರ್ಷವೂ ಪರಿವಾರದ ಜೊತೆಯಲ್ಲಿ ಈ ಕ್ರಮವನ್ನು ವೀಕ್ಷಿಸಲು ಬಯಸುತ್ತೇನೆ ಎಂದರು.
ಚಿಣ್ಣರ ಬಿಂಬದ ರೂವಾರಿ, ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಅವರು ಮಾತನಾಡಿ, ಮಕ್ಕಳಲ್ಲಿ ಶಿಸ್ತು ಪಾಲಿಸಲು ಕೆಲವೊಮ್ಮೆ ಕಠಿಣತೆಯನ್ನು ತೋರಿಸಬೇಕಾದ ಅನಿವಾರ್ಯತೆ ಬರುತ್ತದೆ. ಆದರೆ ಎಲ್ಲಾ ಮಕ್ಕಳ, ಪಾಲಕರ, ಪರಿಶ್ರಮದ ಅರಿವಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಎಲ್ಲರನ್ನು ಪ್ರೀತಿಯಿಂದ ನೆನೆಯುತ್ತೇನ ಎಂದರು. ವಿಜಯ ಕುಮಾರ್ ಶೆಟ್ಟಿ ಅವರು ಸ್ತಾವಿಕವಾಗಿ ಮಾತನಾಡಿದರು.
ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮಾತನಾಡಿ, ಸತತವಾಗಿ ಐದು ವರ್ಷಗಳಿಂದ ನಾನು ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದು ವರ್ಷದಿಂದ ವರ್ಷಕ್ಕೆ ಇಲ್ಲಿನ ಉತ್ಸವದ ಸಂಭ್ರಮ ಹೆಚ್ಚುತ್ತಿದೆ ಎಂದರು.
ವೇದಿಕೆಯಲ್ಲಿ ಚಿಣ್ಣರ ಬಿಂಬದ ಸುರೇಂದ್ರ ಕುಮಾರ್ ಹೆಗ್ಡೆ, ಪೂಜಾ ಭಂಡಾರಿ, ಸಚ್ಚಿದಾನಂದ ಶೆಟ್ಟಿ, ಉಮೇಶ್ ಆಚಾರ್ಯ, ರೇಣುಕಾ ಪ್ರಕಾಶ್ ಭಂಡಾರಿ, ಪೂರ್ಣಿಮಾ ಎಸ್. ಶೆಟ್ಟಿ, ಎರ್ಮಾಳ್ ಹರೀಶ್ ಎಂ. ಶೆಟ್ಟಿ, ಕರ್ನೂರು ಮೋಹನ್ ರೈ, ರಾಜೇಶ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಅರುಣ್ ರೈ, ಸತೀಶ್ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಗೋಪಾಲ್ ಶೆಟ್ಟಿ ಕಲ್ಯಾಣ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಶೋಕ್ ಪಕ್ಕಳ, ಪೂರ್ಣಿಮಾ ಶೆಟ್ಟಿ ಮತ್ತು ವಿಕ್ರಮ್ ಪಾಟ್ಕರ್ ಅವರು ನಿರೂಪಿಸಿದರು. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರ ಪಡೆದ ಚಿಣ್ಣರ ಬಿಂಬದ ಹದಿನಾಲ್ಕು ಮಂದಿ ಚಿಣ್ಣರನ್ನು ಸಮ್ಮಾನಿಸಲಾಯಿತು.ಸಮಾರಂಭದಲ್ಲಿ ಸಿಐಡಿ ಖ್ಯಾತಿಯ ದಯಾ ಶೆಟ್ಟಿ, ಬಿಗ್‌ಬಾಸ್ ನ ಸುಶಾಂತ್, ಮೊಡೆಲ್ ಕೃಷ್ಣ ಚತುರ್ವೇದಿ, ಚೀತಾ ಯಜ್ಞೆàಶ್ ಶೆಟ್ಟಿ, ಕಾಮಿಡಿ ಸರ್ಕಲ್ ವಿಜೇತ ವಿಐಪಿ, ಸಮೀರ್ ಅಲಿಖಾನ್ ಮೊದಲಾದವರು ಆಗಮಿಸಿ ಚಿಣ್ಣರಿಗೆ ಹಿತವಚನ ನೀಡಿದರು. ಚಿಣ್ಣರ ಬಿಂಬದ ಎಲ್ಲಾ ಶಿಭಿರಗಳ ನೂರಾರು ಮಕ್ಕಳು ದಿನಪೂರ್ತಿ ಜರಗಿದ ಈ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.