ಕರಾವಳಿ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗ.

Pinterest LinkedIn Tumblr

vv_meet_photo_1

ವರದಿ: ರವಿರಾಜ್ ಕಟೀಲು

ಮಂಗಳೂರು,ಡಿ.15 : ಇಂದು ದೇಶದ ಹಲವಾರು ಮಾಧ್ಯಮಗಳಿಗೆ ಪ್ರತಿಭಾವಂತ ಪತ್ರಕರ್ತರನ್ನು ನೀಡಿ ಹೆಮ್ಮೆಗೆ ಪಾತ್ರವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮ (ಎಂ.ಸಿ.ಜೆ) ವಿಭಾಗವು ಪ್ರಾರಂಭವಾಗಿ 25 ವರ್ಷಗಳಾಗಿದ್ದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.

vv_meet_photo_2

ದೇಶದ ಯಾವುದೇ ಮೂಲೆಯ ಪತ್ರಿಕೆ, ಸುದ್ದಿ ವಾಹಿನಿ ಹಾಗೂ ನ್ಯೂಸ್ ಪೋರ್ಟಲ್ಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಪದವೀಧರರು ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಕಾರ್ಯ ದಕ್ಷತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡಿ.20ಕ್ಕೆ ಎಂ.ಸಿ.ಜೆ ಬೆಳ್ಳಿ ಹಬ್ಬದ ಸಂಭ್ರಮ: ಮಂಗಳೂರು ವಿಶ್ವವಿದ್ಯಾನಿಲಯದ ಎಂಸಿಜೆ ವಿಭಾಗಕ್ಕೆ 25 ವರ್ಷಗಳಾದ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಪದವೀಧರರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿ ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ಡಿ.20ರಂದು ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಮಾಡಲಿದ್ದಾರೆ.

ಈಗಾಗಲೇ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಮಾಡಲು ಹಳೆ ವಿದ್ಯಾರ್ಥಿಗಳು ಸೇರಿ ಸಮಿತಿ ರಚಿಸಲಾಗಿದ್ದು, ಫೇಸ್ ಬುಕ್, ವಾಟ್ಸಾಫ್, ಇಮೇಲ್ ಹಾಗೂ ಇನ್ನಿತರ ಸಾಮಾಜಿಕ ತಾಣಗಳ ಮೂಲಕ ವಿವಿ ಪತ್ರಿಕೋದ್ಯಮದ ಹಳೆ ವಿದ್ಯಾರ್ಥಿಗಳನ್ನೆಲ್ಲರೂ ಡಿ.20ರಂದು ಒಂದುಗೂಡಿಸುತ್ತಿದೆ.

ಎಂಸಿಜೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಮಂಗಳೂರು ವಿವಿ ಉಪಕುಲಪತಿ ಪ್ರೋ. ಕೆ. ಬೈರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವಿ ಕುಲಸಚಿವ ಪ್ರೋ. ಪಿ.ಎಸ್.ಯಡಪಡಿತ್ತಾಯ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೋ. ಬಿ.ನಾರಾಯಣ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಿಗೆ ಗೌರವ ಪೂರ್ವಕ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.

 

Write A Comment