ಕರಾವಳಿ

ನಾಗಾಲ್ಯಾಂಡ್ : ಅತ್ಯಾಚಾರಿಯನ್ನು ಜೈಲಿನಿಂದ ಹೊರಗೆಳೆದು ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿದ ಪ್ರತಿಭಟನಕಾರರು

Pinterest LinkedIn Tumblr

guhwati_rapits_hunged_1

ನಾಗಾಲ್ಯಾಂಡ್ / ಗೌಹಾಟಿ: ನಾಗ ಹುಡುಗಿಯೋರ್ವಳ ಮೇಲೆ ನಿರಂತರ ಅತ್ಯಾಚಾರ ಗೈದ ಅತ್ಯಾಚಾರಿಯನ್ನು ನಾಗಾಲ್ಯಾಂಡ್ ಜೈಲಿಗೆ ನುಗಿದ್ದ ಗುಂಪೊಂದು ಜೈಲಿನಿಂದ ಹೊರೆಗೆಳೆದು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ, ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಮೂಲಕ ಸಾರ್ವಜನಿಕವಾಗಿ ಶಿಕ್ಷಿಸಿದ ಘಟನೆ ನಾಗಾಲ್ಯಾಂಡ್ ನ ದಿಮಾಪುರ್ ಪಟ್ಟಣದಲ್ಲಿ ಗುರುವಾರ ಸುಮಾರು 6 ಗಂಟೆಗೆ ನಡೆದಿದೆ.

ಈ ಸಂದರ್ಭದಲ್ಲಿ ಗುಂಪನ್ನು ನಿಯಂತ್ರಿಸಲು ತೆರಳಿದ ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದು, ಪೊಲೀಸ್ ವಾಹನಗಳಿಗೆ ಹಾನಿಯುಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಗುಂಪಿನಲ್ಲಿದ್ದವರು ಅಡ್ಡಾದಿಡ್ಡಿ ಓಡಿದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ದೆಹಲಿಯಲ್ಲಿ ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ ನಿರ್ಭಯಾ ಕುರಿತ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಅಲ್ಲಿನ ಜನತೆ ತಲ್ಲಣಗೊಂಡಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಉದ್ವಿಗ್ನ ಗೊಂಡಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ದೀಮಾಪುರ್ ನ ಸೂಪರಿಂಟೆಂಡೆಂಟ್ ಪೊಲೀಸ್ ಮೇರಿನ್ ಜಾಮೀರ್ ಈ ಸಂದರ್ಭ ಹೇಳಿದ್ದಾರೆ.

guhwati_rapits_hunged_2

ಫೆಬ್ರವರಿ 23-24 ರಂದು ನಾಗ ಹುಡುಗಿ ಮೇಲೆ ಹಲವಾರು ಬಾರಿ ಅತ್ಯಾಚಾರ ಗೈದ ಖಾನ್ ವಿರುದ್ಧ ದೂರು ದಾಖಾಲಿಸಲಾಗಿದ್ದರಿಂದ ನಾಗಾಲ್ಯಾಂಡ್ ವಾಣಿಜ್ಯ ಹಬ್ ನಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಯಿತು ಎಂದು ದೀಮಾಪುರ್ ನ ಜಿಲ್ಲಾಧಿಕಾರಿ ವಿಝೋಪ್ ಕೆನ್ಯೆ ತಿಳಿಸಿದ್ದಾರೆ.

ಘಟನೆ ವಿವರ :

ಕಾರುಗಳ ಮಾರಾಟ ವ್ಯಾಪಾರಿ ಸಯ್ಯದ್ ಫರೀದ್ ಖಾನ್ (35) (ಬಾಂಗ್ಲಾದೇಶದ ವಲಸಿಗ) ಎಂಬ ವ್ಯಕ್ತಿ ನೆರೆ ಮನೆಯ ಯುವತಿಯೊಬ್ಬಳ ಮೇಲೆ ಫೆ.23-24ರಂದು ಹಲವು ಬಾರಿ ಅತ್ಯಾಚಾರ ಎಸಗಿದ್ದು, ನಂತರ ಪೊಲೀಸರು ಫೆ.24ರಂದು ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಸ್ಥಳೀಯ ನ್ಯಾಯಾಲಯ ಆರೋಪಿಗೆ ಪೊಲೀಸ್ ಕಸ್ಟಡಿ ವಿಧಿಸಿತ್ತು. ಖಾನ್‌ನನ್ನು ಧೀಮಾಪುರದ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು. ಅತ್ಯಾಚಾರಕ್ಕೊಳಗಾದ ಯುವತಿ ನಾಗಾ ಸಮುದಾಯಕ್ಕೆ ಸೇರಿದ್ದು, ನಾಗಾ ವಿದ್ಯಾರ್ಥಿ ವೇದಿಕೆ, ವೆಸ್ಟರ್ನ್ ಸುಮಿ ಹೋಹೊ ಮತ್ತಿತರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿತ್ತು. ಖಾನ್ ವಿರುದ್ಧ ಕಠಿಣ ಕ್ರಮ ಕಾನೂನು ಕೈಗೊಳ್ಳಬೇಕೆಂದು ಅಗ್ರಹಿಸಿ ಬುಧವಾರ ಬಂದ್ ಕರೆ ನೀಡಿತ್ತು.

guhwati_rapits_hunged_3

ಆದರೆ ಇದೇ ಸಂದರ್ಭದಲ್ಲಿ ಇತರೆಡೆಗಳಿಂದ ಬಂದ ತಂಡವೊಂದು ಅಲ್ಲಿ ವ್ಯಾಪರದಲ್ಲಿ ತೊಡಗಿದ್ದ ಬಾಂಗ್ಲಾ ದೇಶದ ವಲಸಿಗರ ಸುಮಾರು 20 ವ್ಯಾಪಾರ ಮಳಿಗೆಗಳನ್ನು ದ್ವಂಸಗೊಳಿಸದ ಕಾರಣ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಐಪಿಸಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು.

ಗುರುವಾರ ಸುಮಾರು 4 ಸಾವಿರದಷ್ಟಿದ್ದ ಪ್ರತಿಭಟನಾಕಾರರು ಬಾಂಗ್ಲಾದಿಂದ ವಲಸೆ ಬಂದು ಇಲ್ಲಿ ವಿವಿಧ ವ್ಯಾಪಾರ ಮಳಿಗೆ ಹೊಂದಿರುವ ಬಾಂಗ್ಲಾ ಮುಸ್ಲಿಮರ ಅಂಗಡಿ ಮಳಿಗೆಗಳ ಪರವಾನಿಗೆ ರದ್ದು ಗೊಳಿಸಿಬೇಕೇಂದು ಅಗ್ರಹಿಸಿ, ಬಿಗಿ ಭದ್ರತೆ, ನಿಷೇಧಾಜ್ಞೆ ನಡುವೆ ಕೇಂದ್ರ ಕಾರಾಗೃಹಕ್ಕೆ ಮುತ್ತಿಗೆ ಹಾಕಿದ್ದಾರೆ. ಕಾರಾಗೃಹದ ಬಾಗಿಲುಗಳನ್ನು ಮುರಿದು ಒಳನುಗ್ಗಿ ಖಾನ್‌ನನ್ನು ಹೊರಗೆಳೆದು ತಂದಿದ್ದಾರೆ. ಅತ್ಯಾಚಾರಿಯನ್ನು ಬೆತ್ತಲುಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಸಾವಿರಾರು ಜನರಿಂದ ಹಲ್ಲೆಗೀಡಾಗಿ ತೀವ್ರವಾಗಿ ಗಾಯಗೊಂಡ ಖಾನ್ ರಸ್ತೆಯಲ್ಲೇ ಸಾವನ್ನಪ್ಪಿದ ಘಟನೆ ನಡೆದಿತ್ತು.

guhwati_rapits_hunged_4

ಮೊದಲಿಗೆ ಪ್ರತಿಭಟನಾಕಾರರು, 7ಕಿಲೋ ದೂರ ಇರುವ ನಾಗಲ್ಯಾಂಡ್ ಜೈಲಿನ ಕಡೆ ತೆರೆಳಿ ಜೈಲ್ ನ ಎರಡು ಗೇಟುಗಳನ್ನು ಕೆಡವಿ ಖಾನ್ ನನ್ನು ತಮ್ಮ ವಶಕ್ಕೆ ಪಡೆದುಕೊಂಡು ಅತನ ಮೇಲೆ ಹಲ್ಲೆ ನಡೆಸಿ, ಪೂರ್ವನಿಯೋಜನೆಯಂತೆ ಅತನನ್ನು ಗಲ್ಲಿಗೆರಿಸಲು ಕ್ಲಾಕ್ ಟವರ್ ನವರೆಗೆ ಹಗ್ಗದಿಂದ ಎಳೆದೊಯ್ದಿದ್ದಾರೆ. ದಾರಿಯುದ್ದಕ್ಕೂ ಏಟು ತಿಂದ ಆರೋಪಿ ದಾರಿ ಮಧ್ಯೆ ಗಂಭೀರ ಗಾಯಗೊಂಡು ಅಸು ನೀಗಿದ್ದಾನೆ.

ಪ್ರತಿಭಟನಾಕಾರರು ಅತನ ನಿರ್ಜಿವ ದೇಹವನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಕ್ಲಾಕ್ ಟವರ್ ನ ವರೆಗೆ ಎಳೆದೊಯ್ದು ನೇತು ಹಾಕಿದ್ದಾರೆ. ಆರೊಪಿಯನ್ನು ಸೆಲೆದೊಯ್ಯುವಾಗ ಹತ್ತಿರ ಬಾರದ ಪೊಲಿಸರು, ಆತನ ನಿರ್ಜಿವ ದೇಹವನ್ನು ಪ್ರದರ್ಶನಕ್ಕಿಟ್ಟ ಸಂಧರ್ಭ ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ರೊಚ್ಚಿಗೆದ್ದ ಪ್ರತಿಭಟನಕಾರರು ಪೊಲೀಸರ ಮೇಲೆಕಲ್ಲು ಎಸೆದಾಗ ಕೆಲವು ಪೊಲೀಸರಿಗೆ ಏಟಾಗಿದ್ದು, 10ಕ್ಕಿಂತಲೂ ಹೆಚ್ಚು ಪೊಲೀಸ್ ವಾಹನಗಳು ಹಾನಿಗೊಂಡಿದೆ.

ಪರಾರಿಯಾದ ಖೈದಿಗಳು :

ಆದರೆ ಇದೇ ಸಂದರ್ಭ ಘಟನೆಯ ಪ್ರಯೋಜನ ಪಡೆದ ಕೆಲವು ಖೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಪ್ರತಿಭಟನಕಾರರು ಜೈಲಿಗೆ ನುಗ್ಗಿದ್ದ ಸಂದರ್ಭ ಉಂಟಾದ ಗಲಾಭೆಯಲ್ಲಿ ಗಾಯಗೊಂಡ ಪೊಲೀಸರ ಹಾಗೂ ಹಾನಿಗೊಂಡ ಸೊತ್ತುಗಳ ನಷ್ಟವನ್ನು ಅಂದಾಜಿಸ ಬಹುದು. ಆದರೆ ಈ ಸಂದರ್ಭ ಪರಿಸ್ಥಿತಿಯ ಲಾಭ ಪಡೆದು ಪರಾರಿಯಾದ ಖೈದಿಗಳ ಸಂಖ್ಯೆಗಳನ್ನು ತಕ್ಷಣಕ್ಕೆ ಅಂದಾಜಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಪ್ರತಿಕ್ರಿಯೆ:

ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದಿದ್ದರೆ ಉದ್ರಿಕ್ತ ಪ್ರತಿಭಟನಾಕಾರರ ಈ ಪ್ರಕರಣವನ್ನು ತಪ್ಪಿಸಬಹುದಿತ್ತು ಎಂದು ತಿಳಿಸಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಜಿಲಾಂಗ್, ಪ್ರಕರಣ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧೀಮಾಪುರದಲ್ಲಿ ಮತ್ತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದೇ ವೇಳೆ ನಿನ್ನೆ ನಡೆದ ಅತ್ಯಾಚಾರಿ ಹತ್ಯೆ, ಜೈಲು ಮುತ್ತಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಕ್ಷಣ ಸಮಗ್ರ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಾಗಾಲ್ಯಾಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ.

Write A Comment