ಕಾಸರಗೋಡು, ಮಾ.31: ಯುದ್ಧಗ್ರಸ್ತ ಯಮನ್ನಲ್ಲಿ ಕಾಸರಗೋಡಿನ ಯುವಕನೋರ್ವ ಸಿಲುಕಿಕೊಂಡಿರುವು ದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಅವರು ಕಾಞಂಗಾಡ್ ಸಮೀಪದ ಒಡೆಯಂಚಾಲ್ ಪಾಲಕ್ಕಾಲ್ನ ಜಿಂಟೊ ಜೋಸೆಫ್(34) ಎಂಬವರಾಗಿದ್ದಾರೆ.
60ಕ್ಕೂ ಅಧಿಕ ಕೇರಳಿಯರು ಈ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಜಿಂಟೊ ಸೇರಿದಂತೆ 7 ಮಂದಿ ಕೇರಳಿಯರು ಒಂದೇ ಕೋಣೆಯಲ್ಲಿ ಕಳೆದ 6 ದಿನಗಳಿಂದ ಆಹಾರ, ನೀರು, ಇಲ್ಲದೆ ಭಯದಿಂದ ದಿನ ಕಳೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ .
ಐದಾನ್ ಎಂಬಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಉದ್ಯೋಗದಲ್ಲಿರುವ ಜಿಂಟೊ 5 ವರ್ಷಗಳಿಂದ ಯಮನ್ನಲ್ಲಿದ್ದು 2 ವರ್ಷದ ಹಿಂದೆ ಊರಿಗೆ ಬಂದು ತೆರಳಿದ್ದರು. ಹೊರಗಡೆ ಬರುವ ಸ್ಥಿತಿ ಇಲ್ಲ, ಬಾಂಬ್, ಗುಂಡಿನ ಸ್ಫೋಟಕ ಶಬ್ದಗಳು ಕೇಳಿ ಬರುತ್ತಿದ್ದು, ಇದರಿಂದ ಆಹಾರ, ನೀರು ಲಭಿಸುತ್ತಿಲ್ಲ. ಅವರು ಉದ್ಯೋಗ ನಡೆಸುತ್ತಿರುವ ಹೋಟೆಲ್ಗೆ ಬೀಗ ಜಡಿದಿರುವುದರಿಂದ ವಾಸದ ರೂಂನಿಂದ ಹೊರ ಬರದ ಸ್ಥಿತಿ ಉಂಟಾಗಿದೆ ಎಂದು ಜಿಂಟೊ ಜೋಸೆಫ್ ದೂರವಾಣಿ ಕರೆಮಾಡಿ ಹೇಳಿರುವುದಾಗಿ ಮನೆಯವರು ತಿಳಿಸಿದ್ದಾರೆ.