ದುಬೈ : ಕರ್ನಾಟಕ ಹಾಗೂ ಅನಿವಾಸಿ ವೃತ್ತಿ ಜೀವನದಲ್ಲಿ ಕೆ ಐ ಸಿ ಎಂಬ ನಾಮವನ್ನು ಕೇಳದವರು ಅತೀ ವಿರಳ. ಕಳೆದ ದಶಕಗಳಿಂದ ತಾಯಿನಾಡಿನಲ್ಲಿ ಕುಂಬ್ರ ಪ್ರದೇಶದಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ದೊಂದಿಗೆ ಸಮಾಜದಲ್ಲಿ ಗುರುತಿಸುವಂತಹ ಯುವ ಸಮೂಹಗಳನ್ನು ತನ್ನ ಶಿಸ್ತು ಬದ್ದ ಶಿಕ್ಷಣದ ಮೂಲಕ ಸಮಾಜಕ್ಕೆ ಸಮುದಾಯಕ್ಕೆ ಸಮರ್ಪಿಸಿದ ವಿಧ್ಯಾ ಸಂಸ್ಥೆಯಾಗಿದೆ ಕೆ ಐ ಸಿ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಿವಿಧ ಭಾಷೆಗಳಲ್ಲಿ ಪ್ರಭಾಷಣ, ನೀತಿ ಭೋಧನೆ, ಧರ್ಮ ಪ್ರಬ್ಹೊಧಕರಾಗಿ ಮುಂಚೂಣಿಯಲ್ಲಿರುವ ”ಕೌಸರಿ“ ಗಳೆಂಬ ಯುವ ಪಂಡಿತ, ವಿಧ್ಯಾರ್ಥಿಗಳನ್ನು ತನ್ನ ಎಂಟು ವರ್ಷಗಳ ವಿಧ್ಯಾರ್ಜನೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದ ಈ ವಿಧ್ಯಾ ಸಂಸ್ಥೆಯ ಮೇಲುಸ್ತುವಾರಿ ಸಮಿತಿ ಅರಬ್ ರಾಷ್ಟ್ರ ದಾದ್ಯಂತ ಪ್ರಮುಖವಾಗಿ ಯು ಎ ಇ ಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಮುಖ ಸಂಸ್ಥೆ ಕೆ ಐ ಸಿ ಯುಪ್ರಸಕ್ತ 15ನೇ ವರ್ಷದ ಸಂಭ್ರಮಾಚರನೆಯಲ್ಲಿದೆ.
ಆ ಪ್ರಯುಕ್ತ ಡಿಸೆಂಬರ್ 25 ರಂದು ತನ್ನ ಸುದೀರ್ಘ 15 ವರ್ಷಗಳ ಕಾರ್ಯ ಚಟುವಟಿಕೆಗಳನ್ನು ಸಮುದಾಯಕ್ಕೆ ಪರಿಚಯಿಸುವ ಸಲುವಾಗಿ ಕೆ ಐ ಸಿ ವಿಧ್ಯಾ ಸಂಸ್ಥೆಯ ಪ್ರಚಾರಾರ್ಥ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಿದ್ದು ಪ್ರಸಕ್ತ ಕಾರ್ಯಕ್ರಮದಲ್ಲಿ ಕೆ ಐ ಎ ಅಕಾಡೆಮಿ ಅಧ್ಯಕ್ಷರು ಹಲವಾರು ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳ ನೇತಾರರು ಆದ ಕೆ ಪಿ ಅಹಮ್ಮದ್ ಹಾಜಿಯವರನ್ನೋಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಉಲಮಾ ಗಳು , ಸಾಮಾಜಿಕ ಧಾರ್ಮಿಕ ರಾಜಕೀಯ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸಾದಕರು , ಅನಿವಾಸಿ ಉಧ್ಯಮಿ ಗಳು , ವಿವಿಧ ಸಂಘ ಸಂಸ್ಥೆಗಳ ನೆತಾರು ಭಾಗವಹಿಸಲಿದ್ದಾರೆ ಎಂದು ಕೆ ಐ ಸಿ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಘಲ್ ಕೊಲ್ಪೆ , ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ. ಕಾರ್ಯದರ್ಶಿ ಅಶ್ರಫ್ ಪರ್ಲದ್ಕ , ಕಾರ್ಯಾಧ್ಯಕ್ಷರಾದ ಶರೀಫ್ ಕಾವು , ಹಾಗು ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ