ಕರಾವಳಿ

U A E ಕರ್ನಾಟಕ ರಾಜ್ಯ S K S S F ಅದ್ಯಕ್ಷರಾಗಿ ಆಸ್ಕರ್ ಅಲಿ ತಂಘಳ್ ಹಾಗು ಕಾರ್ಯದರ್ಶಿ ಯಾಗಿ ಸುಲೈಮಾನ್ ಮೌಲವಿ ಕಲ್ಲೇಗ ಪುನರಾಯ್ಕೆ

Pinterest LinkedIn Tumblr

20150420054935 (1)

ದಿನಾಂಕ 16/04/2015 ನೇ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ದುಬೈ ಸುನ್ನಿ ಸೆಂಟರ್ ಹಾಲಿನಲ್ಲಿ UAE SKSSF ಕರ್ನಾಟಕ ರಾಜ್ಯದ ವಾರ್ಷಿಕ ಮಹಸಬೆಯು ಬಹುಮಾನ್ಯ ಆಸ್ಕರ್ ಅಲಿ ತಂಘಳ್ ರವರ ಘನ ಅದ್ಯಕ್ಷತೆಯಲ್ಲಿ ಜರುಗಿತು. ಆಸ್ಕರ್ ಅಲಿ ತಂಘಳ್ ರವರ ಭಕ್ತಿ ಪೂರ್ವಕ ದುವಾದೊಂದಿಗೆ ಪ್ರಾರಂಬ ಗೊಂಡ ಸಭೆಯಲ್ಲಿ ಬಹುಮಾನ್ಯ ಅಬ್ದುಲ್ಲ ನಯೀಮಿ ಉಸ್ತಾದ್ ರವರು ತುಂಬಿದ ಜನರನ್ನು ಸ್ವಾಗತಿಸುವುದರ ಮೂಲಕ SKSSF ಎಂಬ ಮಹತ್ತರ ಸಂಘಟನೆಯ ರೂಪು ರೇಖೆಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಅಶ್ರಫ್ ಪರ್ಲಡ್ಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು.ಬಹುಮಾನ್ಯ ನೌಶಾದ್ ಫೈಝೀ ಉಸ್ತಾದ್ ರವರು SKSSF ಎಂಬ ವಿದ್ಯಾರ್ಥಿ ಸಂಗಟನೆಯು ಬಹುಮಾನ್ಯ ಮರ್ಹೂಂ ಸಂಶುಲ್ ಉಲಮ ಹಾಗು ಮರ್ಹೂಂ ಕನ್ನಿಯತ್ ಉಸ್ತಾದ್ ರಂತಹ ಮಹಾ ಪಂಡಿತರು ನೇತ್ರತ್ವ ಕೊಟ್ಟು ಮುನ್ನಡೆಸಿದ ಸಂಘಟನೆಯಾಗಿದೆ ಈ ಸಂಘಟನೆಯನ್ನು ಎಲ್ಲರೂ ಹೃದಯಂತರಾಳದಿಂದ ಪ್ರ್ರೀತಿಸಿ ಇದರ ಅಭಿವ್ರಿದ್ದಿಗಾಗಿ ಎಲ್ಲರೂ ಕೈ ಜೋಡಿಸಿ ಸಹಕರಿಸಬೇಕು ಎಂದು ನೆರೆದ ಸಬಿಕರಲ್ಲಿ ಕೋರುತ್ತ ಕಳೆದ ವರ್ಷಗಳಲ್ಲಿ ಮಾಡಿದ ಕಾರ್ಯ ವೈಕರಿ ಗಳಿಂದಲೂ ,ದುಪ್ಪಟ್ಟು ಕೆಲಸ ಕಾರ್ಯಗಳನ್ನು ಮುಂದಿನ ವರ್ಷಗಳಲ್ಲಿ ಮಾಡಲು ಎಲ್ಲರೂ ಸನ್ನದ್ದರಾಗಬೇಕು ಅದಕ್ಕಾಗಿ ಸರ್ವಶಕ್ತನು ಅನುಗ್ರಹಿಸಲಿ ಎಂದು ಪ್ರಾರ್ತಿಸುತ್ತ ಅಲ್ಲಾಹನ ಪರಿಶುದ್ದ ನಾಮದೊಂದಿಗೆ ಸಮಾರಂಭವನ್ನು ವಿದ್ಯುಕ್ತವಾಗಿ ಉದ್ಘಾಟಿ ಸಿದರು .

20150420054803

20150420054935

ತದನಂತರ ಅದ್ಯಕ್ಷರು ಮಾತನಾಡಿ ಈಗ UAE ಯಲ್ಲಿ SKSSF ಎಂಬ ಸಂಘಟನೆಯು ಗಿಡವಾಗಿದೆ. ಮುಂದಕ್ಕೆ ಇದು ಹೆಮ್ಮರವಾಗಿ ಬೆಳೆದು ನಾಡಿನ ಜನತೆಗೆ ಒಂದು ನೆರಳಾಗಿ ಇತರ ಸಂಘಟನೆಗಳಿಗೆ ಮಾದರಿಯಾಗಿ ರೂಪುಗೊಳ್ಳಬೇಕು ಅದಕ್ಕಾಗಿ UAE ಯಲ್ಲಿರುವ ಯುವಕರು ಮುಂದೆ ಬರಬೇಕಾಗಿದೆ ಎಂದು ಹೇಳುತ್ತಾ ಹಳೆಯ ಸಮಿತಿಯನ್ನು ಬರ್ಕಾಸ್ತು ಮಾಡುವುದಾಗಿ ಗೋಷಿಸುತ್ತ ನೂತನ ಸಮಿತಿಯ ರಚನೆಗೆ ಅನುವು ಮಾಡಿಕೊಟ್ಟರು. ಅದರಂತೆ ಚುನಾವಣಾ ಆಧಿಕಾರಿಯಾಗಿ ದುಬೈ ಕೇರಳ ಯೂನಿಟ್ SKKSSF ಅದ್ಯಕ್ಷರಾದ ಬಹುಮಾನ್ಯ ಹಕೀಮ್ ಫೈಝೀ ಉಸ್ತಾದರಿಗೆ ನೀಡಲಾಯಿತು.

ಜವಾಬ್ದಾರಿಯನ್ನು ಹೊತ್ತು ಮಾತನಾಡಿದ ಉಸ್ತಾದ್ ರವರು SKSSF ಕರ್ನಾಟಕ ರಾಜ್ಯ ಸಮಿತಿಯ ಅದ್ಯಕ್ಷರು ಮತ್ತು ಸದಸ್ಯರು 2 ವರ್ಷಗಳಲ್ಲಿ ನಡೆಸಿದ ಪರಿಶ್ರಮ,ಕೆಲಸ ಕಾರ್ಯಗಳು ನಿಜವಾಗಿಯೂ ಪ್ರಶಂಸನೀಯ ಹತ್ತು ಹಲವು ಸಂಘಟನೆಗಳಲ್ಲಿ ಸದಾ ನಿರತರಾಗಿರುವ ನೀವು ಮಾಡಿದ೦ತಹ ಈ ಮಹತ್ಕರ್ಯಗಳು ಈ ಲೋಕದಲ್ಲೂ ಅಲ್ಲಾಹನ ಬಳಿಯೂ ಪ್ರತಿಫಲ ಉಳ್ಳದ್ದು ಎಂದು ಕೊಂಡಾಡುತ್ತಾ ನೂತನ ಸಮಿತಿ ರಚನೆಗೆ ಚಾಲನೆ ನೀಡಿದರು ಹಾಗೆಯೇ 2015/2016 ನೇ ಸಾಲಿನ ಸಾರಥಿಗಳನ್ನು ಈ ಕೆಳಕಂಡಂತೆ ಆರಿಸಲಾಯಿತು.

ಅದ್ಯಕ್ಷರು : ಆಸ್ಕರ್ ಅಲಿ ತಂಘಳ್
ಕಾರ್ಯಾಧ್ಯಕ್ಷರು : ನೌಶಾದ್ ಫೈಜ್ಹಿ ಕಣ್ಣೂರ್
ಉಪಾಧ್ಯಕ್ಷರು :ಶರೀಫ್ ಕಾವು, ಅಶ್ರಫ್ ಖಾನ್ ಮಾ೦ತೂರ್, ಅಬ್ದುಲ್ ಸಲಾಂ ಬಪ್ಪಳಿಗೆ, ಅಬ್ದುಲ್ ರಝಾಕ್ ಬುಳೆರಿಕಟ್ಟೆ, ಹಾಜಿ ಅಬ್ಧುಲ್ ರಝಾಕ್ ಮಣಿಲಾ
ಪ್ರಧಾನ ಕಾರ್ಯದರ್ಶಿ : ಸುಲೈಮಾನ್ ಮೌಲವಿ ಕಲ್ಲೇಗ
ಜೊತೆ ಕಾರ್ಯದರ್ಶಿಗಳು : ಅಶ್ರಫ್ ಪರ್ಲಡ್ಕ, ಮುಸ್ತಫಾ ಗೂನಡ್ಕ, ಉಮರ್ ರೆಂಜಲಾಡಿ , ಮುಹಮ್ಮದ್ ಶಿಹಾಬ್
ಸಂಘಟನ ಕಾರ್ಯದರ್ಶಿ :ಅಶ್ರಫ್ ಅಮ್ಜದಿ, ಅತಾವುಲ್ಲ ಉಮರ್ ಮುಕ್ವೆ
ಲೆಕ್ಕ ಪರಿಶೋಧಕರು : ಬದ್ರುದ್ದೀನ್ ಹೆಂತಾರ್
ಟ್ರೆಂಡ್ ಅಧ್ಯಕ್ಷರು : ಅಬ್ದುಲ್ಲ ನಯೀಮಿ, ನೂರ್ ಮುಹಮ್ಮದ್ ನೀರ್ಕಜೆ
ಇಬಾದ್ ಅಧ್ಯಕ್ಷರು : ಶಂಸುದ್ದೀನ್ ಹನೀಫಿ ಮರ್ಧಾಳ, ರಫೀಕ್ ಅತೂರು
ಕೋಶಾಧಿಕಾರಿ : ಅಬ್ದುಲ್ ಖಾದರ್ ಬೈತಡ್ಕ
ಸಲಹಾ ಸಮಿತಿ ಅಧ್ಯಕ್ಷರು : ಹಮೀದ್ ಮಣಿಲ
ಉಪ ಸಲಹೆಗಾರರು : ಅಶ್ರಫ್ ಆರ್ತಿಕೆರೆ, ಅಬ್ಬಾಸ್ ಕೇಕುಡೆ, ಶಾಫಿ ಕಲ್ಲುಗುಂಡಿ, ಝ್ಹಕರಿಯಾ ಮುಲಾರ್, ಝ್ಹಕರಿಯಾ ಮುಲಾರ್, ಅಬ್ದುಲ್ ರಝಾಕ್ ನೀರ್ಕಜೆ

ಕಾರ್ಯಕಾರಿ ಸಮಿತಿ ಸದಸ್ಯರಾಗಿ: ಅಶ್ರಫ್ ಕಂಬಳಬೆಟ್ಟು, ಸಾಜಿದ್ ಅರ್ಲಪದವು, ನವಾಜ್ ಬಿ ಸಿ ರೋಡ್, ಆಸಿಫ್ ಮರೀಲ್, ಶಾಹುಲ್ ಬಿ ಸಿ ರೋಡ್, ಜಾಬೀರ್ ಬೆಟ್ಟಂಪಾಡಿ, ಅಝೆಝ್ ಸೊರಕೆ, ಲತೀಫ್ ಬೈತಡ್ಕ ಅಟ್ಲಾಸ್, ಹಮೀದ್ ನೀರ್ಕಜೆ, ಶರೀಫ್ ಅಶ್ರಫಿ, ಫಾರೂಕ್ ಆರ್ಲಪದವು, ಸುಲೈಮಾನ್ ವಿಟ್ಲ, ಇರ್ಶಾದ್ ಗೂನಡ್ಕ ರವರನ್ನು ಆಯ್ಕೆ ಮಾಡಲಾಯಿತು.

ಕೊನೆಗೆ ಜನಾಬ್ ಅಬ್ದುಲ್ ಖಾದರ್ ಬೈತಡ್ಕ ,ಬಹುಮಾನ್ಯ ಇಬ್ರಾಹಿಂ ಫೈಝೀ ಉಸ್ತಾದ್ , ಶಂಸುದ್ದೀನ್ ಹನೀಫಿ ಉಸ್ತಾದ್ ,ಅಶ್ರಫ್ ಖಾನ್ ಸಂದರ್ಬೋಜಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೆಯಿಸಿದರು. ಸಮಾರಂಬದಲ್ಲಿ ಅಬ್ದುಲ್ ಸಲಾಂ ಬಪ್ಪಳಿಗೆ, ಶರೀಫ್ ಕಾವು,ಅಬ್ಬಾಸ್ ಕೇಕುಡೆ, ಮುಸ್ತಫಾ ಗೂನಡ್ಕ,ಹಮೀದ್ ಮಣಿಲ,ಅಶ್ರಫ್ ಆರ್ತಿಕೆರೆ,ಆಸೀಫ್ ಮರಿಲ್,ಅನ್ವರ್ ಮಣಿಲ,ರಜಾಕ್ ನೀರ್ಕಜೆ,ಸಿರಾಜ್ ಪೆರಾಜೆ ಹಾಗು ಇತರ SKSSF ಪದಾದಿಕಾರಿಗಳು ಉಪಸ್ತಿತರಿದ್ದರು. ಅತಾವುಲ್ಲ ಉಮ್ಮರ್ ಮುಕ್ವೆ ಕಿರಾತ್ ಪಟಿಸಿ ಅಶ್ರಫ್ ಅಮ್ಜದಿ ದನ್ಯವಾದ ಸಮರ್ಪಿಸಿದರು ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Write A Comment