ಬಾರಕೂರು: ದೇವಾಡಿಗ ಸಮಾಜದ ಕುಲದೇವತೆ ಎಂದೇ ಪ್ರಚಾರಗೊಳ್ಳುತ್ತಿರುವ ಶ್ರೀ ಏಕನಾಥೇಶ್ವರಿ ದೇವಿ ದೇವಸ್ಥಾನ ಸ್ಥಾಪನೆಗೆ ಟೊಂಕ ಕಟ್ಟಿರುವ ಭಕ್ತಾದಿಗಳು ಮತ್ತು ದೇವಸ್ಥಾನ ಪ್ರಚಾರ ಸಮಿತಿಯ ಕರೆಯಂತೆ ದೇವಸ್ಥಾನದ ನಿರ್ಮಾಣದ ಮೊದಲ ಹಂತದ ಉಳು-ಬಿತ್ತು ಮತ್ತು ಮುಷ್ಟಿಕಾಣೆಕೆ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖ ಮತ್ತು ಅವರ ಪಾಲ್ಗುಳ್ಳುವಿಕೆಯಲ್ಲಿ ತಾ. ಮೇ 10, 2015 ರಂದು ಬಹಳ ಉತ್ಸುಕತೆಯೊಂದಿಗೆ ಇತಿಹಾಸ ಪ್ರಸಿದ್ಧ ಬಾರಕೂರು ಪಂಚಲಿಂಗೇಶ್ವರ ದೇವಾಸ್ಥಾನ ಬಲ ಪಕ್ಕದಲ್ಲಿ ವಿದ್ಯುಕ್ತವಾಗಿ ನೆರವೇರಿತು.
ಈ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ವೇದಮೂರ್ತಿ ಶ್ರೀ ಲಕ್ಶ್ಮೀನಾರಾಯಣ ಸೋಮಯಾಜಿ ಇವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಈ ಸ್ಥಳ ಶುದ್ದೀಕರಣ ಕಾರ್ಯಕ್ರಮ ಗೌರವಾದ್ಯಕ್ಷ ಬಾರಕೂರು ಅಣ್ಣಯ್ಯ ಶೇರಿಗಾರ್, ಅದ್ಯಕ್ಷ ನರಸಿಂಹ ಬಿ ದೇವಾಡಿಗ ಮತ್ತ್ತು ಪ್ರಧಾನ ಕಾರ್ಯದರ್ಶಿ ಜನಾರ್ಧನ ದೇವಾಡಿಗ ಇವರ ನೇತ್ರತ್ವದಲ್ಲಿ ಜರುಗಿತು.
ಅಖಿಲ ಭಾರತ ತುಳು ಒಕ್ಕೂಟದ ಅದ್ಯಕ್ಷ ಹಾಗೂ ದೇವಾಡಿಗ ಸಂಘದ ಮಾಜಿ ಅದ್ಯಕ್ಷ ಉದ್ಯಮಿ ಧರ್ಮಾಪಾಲ್ ದೇವಾಡಿಗ, ಮುಂಬೈ ಸಂಘದ ಅದ್ಯಕ್ಷ ವಾಸು ದೇವಾಡಿಗ, ನಿಕಟಪೂರ್ವ ಅದ್ಯಕ್ಷ ಹಿರಿಅಡಕ ಮೋಹನ್ ದಾಸ್, ಪೂರ್ವ ಅದ್ಯಕ್ಷ ಗೋಪಾಲ ಮೊಯ್ಲಿ, ರವಿ ದೇವಾಡಿಗ, ನಿವೃತ ಪ್ರಾದ್ಯಾಪಕ ಮಂಜುನಾಥ ಸೋಮಯಾಜಿ, ಗೌರಿ ದೇವಾಡಿಗ, ರಾಜು ದೇವಾಡಿಗ, ಗಣೇಶ್ ಶೇರಿಗಾರ್, ಶಾಂತಾರಾಮ ಶೆಟ್ಟಿ, ವಿಶ್ವನಾಥ ಭಂಡಾರಿ, ಉಪ್ಪುಂದ ಜನಾರ್ಧನ್ ದೇವಾಡಿಗ ಮೊದಲಾದವರು ಈ ಕಾರ್ಯಕ್ರಮದಲ್ಲಿ ಹಾಗೂ ನಂತರ ನೆಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಧರ್ಮಪಾಲ ದೇವಾಡಿಗರು ಮಾತನಾಡುತ್ತಾ ಈ ಪುನರ್ ನಿರ್ಮಾಣ ಕಾರ್ಯಕ್ಕೆ ಎಲ್ಲಾ ಸಮಾಜ ಭಾಂದವರು ಮುಂದೆ ಬಂದು ತಮಗಾದಷ್ಟು ಕಾಣಿಕೆ ನೀಡಿ ಈ ದೇಗುಲ ಶೀಘ್ರದಲ್ಲಿ ಪ್ರಾರಂಭಗೊಳ್ಳುವ ನಿಟ್ಟಿನಲ್ಲಿ ಕೈ ಜೋಡಿಸಿ ಕಾರ್ಯಪ್ರವತರಾಗುವಂತೆ ಕರೆ ನೀಡಿದರು.