ಪರ್ಬ ತುಳು ಕಿರುಚಿತ್ರದ ವೀಡಿಯೋ ಡಿವಿಡಿಯನ್ನು ಇದೇ ಬಾನುವಾರ ದಿನಾಂಕ 27-09-2015 ರಂದು ಸುರತ್ಕಲ್, ತಡಂಬೈಲ್ ನ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಇವರು ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ತುಳು ಹಾಸ್ಯ ಕಲಾವಿದ ಬಲೆ ತೆಲಿಪಾಲೆ ಖ್ಯಾತಿಯ ರಂಜನ್ ಬೋಳೂರ್, ಚಿತ್ರ ನಿರ್ದೇಶಕ ಲೋಕು ಕುಡ್ಲ, ಕ್ಯಾಮರಾಮ್ಯಾನ್ ಸಚಿನ್ ಎಸ್ ಶೆಟ್ಟಿ , ಶಿವರಾಮ್ ಶೆಟ್ಟಿ, ಇಂಟೀರಿಯರ್ ಡಿಸೈನರ್ ರತ್ನಾಕರ್ ಎನ್.ಬಿ ಮತ್ತು ಶೇಕರ್ ಮೊಯ್ಲಿ ಉಪಸ್ಥಿತರಿದ್ದರು. ಕುಮಾರಿ ಸಹನಾ ದೇವಾಡಿಗ ಪ್ರಾರ್ಥನಾ ಗೀತೆಯನ್ನು ಹಾಡಿದರು.
ಚಿತ್ರ ನಿರ್ಮಾಪಕರಾದ ಧರ್ಮಪಾಲ ಯು ದೇವಾಡಿಗರು ಮಾತನಾಡಿ ಇತ್ತೀಚೆಗೆ ಬಹಳಷ್ಟು ತುಳು ಚಿತ್ರಗಳು ನಿರ್ಮಾಣವಾಗುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಾ ಪರ್ಬ ಕಿರು ಚಿತ್ರ ಶ್ರೀ ಸತ್ಯನಾರಾಯಣ ಪ್ರೊಡಕ್ಸನ್ಸ್ ನ ಎರಡನೆಯ ಕೊಡುಗೆ ಅಲ್ಲದೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಕೊಡುವಂತಹ ಚಿತ್ರಗಳನ್ನು ನಿರ್ಮಿಸುವುದು ನಮ್ಮ ಧ್ಯೇಯವಾಗಿದ್ದು ಈ ಹಿಂದೆ ಮಾಡಿದ “ಬೊಲ್ಕಿರ್” ಕಿರು ಚಿತ್ರವನ್ನು ಅತೀ ಶೀಘ್ರದಲ್ಲಿ ಪೂರ್ಣಪ್ರಮಾಣದ ಚಿತ್ರವಾಗಿ ಮಾಡಲಿದ್ದು ಇದಕ್ಕೆ ಸರ್ವರ ಪ್ರೋತ್ಸಾಹವನ್ನೂ ಬಯಸುತ್ತಾ, ಚಿತ್ರತಂಡವನ್ನು ಹಾರೈಸಿದರು.
ವೇದಿಕೆಯಲ್ಲಿದ್ದ ರಂಜನ್ ಬೋಳೂರ್, ಶಿವರಾಮ್ ಶೆಟ್ಟಿ, ರತ್ನಾಕರ್ ಎನ್.ಬಿ ಮತ್ತು ಶೇಕರ್ ಮೊಯ್ಲಿ ತುಳು ಚಿತ್ರ, ಹೊಸ ಪ್ರತಿಭೆಗಳ ಪರಿಚಯದ ಬಗ್ಗೆ ಪ್ರೋತ್ಸಾಹಿಕ ನುಡಿಗಳನ್ನು ಮಾತನಾಡುತ್ತಾ ಪರ್ಬ ಚಿತ್ರತಂಡವನ್ನು ಅಭಿನಂದಿಸಿದರು.
ಚಿತ್ರ ನಿರ್ದೇಶಕ ಲೋಕು ಕುಡ್ಲ ಪರ್ಬ ಚಿತ್ರಕ್ಕೆ ಪ್ರೋತ್ಸಾಹಿಸಿದ ಸರ್ವರಿಗೂ ಅಭಿನಂದಿಸುತ್ತಾ ಮುಂದಿನ ಚಿತ್ರಕ್ಕೂ ಪ್ರೋತ್ಸಾಹ ಕೋರಿದರು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ರೆಡ್ ಎಫ್ ಎಮ್ 93.5 ನ ಆರ್ ಜೆ ಅನುರಾಗ್ ನೆರವೇರಿಸಿದರು.
ಪರ್ಬ ಚಿತ್ರದಲ್ಲಿ ಎರಡು ಹಾಡುಗಳಿದ್ದು ಬೆಂಗಳೂರಿನ ಸಾಫ್ಟ್ ವೇರ್ ಉದ್ಯಮಿ, ತುಳು ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿದ ನಿರೆಲ್ ಮತ್ತು ದಂಡ್ ಚಿತ್ರದ ಸಂಗೀತ ನಿರ್ದೇಶಕ ಅಭಿಶೇಕ್ ಎಸ್ ಎನ್ ಪರ್ಬ ತುಳು ಕಿರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಈಗಾಗಲೇ ಯೂಟ್ಯೂಬ್ ನಲ್ಲಿ ಹಾಡು ಕೇಳಿದವರಲ್ಲಿ ಕುತೂಹಲ ಮೂಡಿಸಿದ “ಈ ಸೃಷ್ಟಿಡ್” ಹಾಡನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಸರಾಂತ ಗಾಯಕ ರಮೇಶ್ ಚಂದ್ರ ಜೊತೆಗೆ ನಿರೆಲ್ ಖ್ಯಾತಿಯ ತುಳು ನಾಡಿನ ಶ್ರೇಯಾ ಘೋಶಾಲ್ ಎಂದೇ ಪ್ರಖ್ಯಾತಿಯಲ್ಲಿರುವ ಅಕ್ಷತಾ ರಾವ್ ಹಾಡಿದ್ದಾರೆ. ಚಿತ್ರದಲ್ಲಿರುವ ಮತ್ತೊಂದು ಹಾಡನ್ನು ಅತೀ ಶೀಘ್ರದಲ್ಲಿ ಯೂಟ್ಯೂಬ್ ಗೆ ಹಾಕುವುದರ ಜೊತೆಗೆ ತುಳುವರ ಪರ್ಬದ ಸಂಭ್ರಮವಿರುವ ಹಾಡನ್ನು ತುಳುವರು ಖಂಡಿತಾ ಇಷ್ಟಪಡುತ್ತಾರೆಂದು ಸಂಗೀತ ನಿರ್ದೇಶಕ ಅಭಿಶೇಕ್ ಎಸ್ ಎನ್ ಜೊತೆಗೆ ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಈ “ತುಡರ್ ಪರ್ಬ” ಎಂಬ ಹಾಡನ್ನು ದಂಡ್ ಖ್ಯಾತಿಯ ಪುಷ್ಪಾಂಜಲಿ ಸುಚಿ ಜೊತೆಗೆ ಅಭಿಶೇಕ್ ಎಸ್ ಎನ್ ಹಾಡಿದ್ದಾರೆ.
ಈಗಾಗಲೇ ತನ್ನ ಕಿರು ಚಿತ್ರವೊಂದಕ್ಕೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದ “ಕನಸು” ಕನ್ನಡ ಚಿತ್ರದ ಕ್ಯಾಮರಾಮ್ಯಾನ್ ಸಚಿನ್ ಎಸ್ ಶೆಟ್ಟಿ ಇವರ ಕ್ಯಾಮರಾ ಕೈಚಳಕ ಪರ್ಬ ಚಿತ್ರದಲ್ಲಿದ್ದು ಯುವ ಪ್ರತಿಭೆ ತರುಣ್ ಇವರು ಕೋರಿಯೋಗ್ರಫಿ ಮಾಡಿದ್ದಾರೆ.
ತುಳು ಚಿತ್ರ ಅಷ್ಟೇ ಅಲ್ಲದೆ ಇತರ ಭಾಷಾ ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಚಿರಪರಿಚಿತ ಚೇತನ್ ರೈ ಮಾನಿ ಜೊತೆಗೆ ಲಕುಮಿ ತಂಡದ ಶೋಭ ಶೆಟ್ಟಿ ಪರ್ಬ ಚಿತ್ರದಲ್ಲಿ ನಟಿಸಿದ್ದಾರೆ, ಚಿತ್ರದಲ್ಲಿ ಯುವ ಪತಿಭೆಗಳಾದ ರೋಶನ್ ಶೆಟ್ಟಿ, ರಿಯಾ ದೇವಾಡಿಗ, ಅಕ್ಷತಾ ಶೆಟ್ಟಿಗಾರ್, ಅನುಶ ಶೆಟ್ಟಿ, ಎ.ಕೆ ಉಮಾನಾಥ್ ದೇವಾಡಿಗ, ಪ್ರಭಾಕರ್ ದೇವಾಡಿಗ, ವಾರಿಜಾ ದೇವಾಡಿಗ, ಬೇಬಿ ರಿಷಾ ದೇವಾಡಿಗ ಅಭಿನಯಿಸಿದ್ದಾರೆ. ಸಂಕಲನವನ್ನು ವಿಜಯ್ ರೈ ಮಾಡಿದ್ದು, ಬೆಳಕು ಗೋಪಿ ವಿಶನ್ ಸುರತ್ಕಲ್, ಸ್ಥಿರ ಚಿತ್ರಣವನ್ನು ಅಜಿತ್ ಕರ್ಕೇರ ಮತ್ತು ಅಶ್ವಿನ್ ದೇವಾಡಿಗ ಸೆರೆಹಿಡಿದಿದ್ದಾರೆ. ಚಿತ್ರದ ಪೋಸ್ಟರ್ ಡಿಸೈನ್ಸ್ ಗಳನ್ನು ಖ್ಯಾತ ಡಿಸೈನರ್ ದೇವಿ ರೈ ಮಾಡಿದ್ದಾರೆ, ಚಿತ್ರದ ನಿರ್ವಹಣೆಯನ್ನು ಸುಭಾಶ್ ದೇವಾಡಿಗ ನಿರ್ವಹಿಸಿದ್ದು,ಚಿತ್ರ ನಟರಾದ ರಾಜ್ ಸಂಪಾಜೆ, ಕಾರ್ತಿಕ್ ಮತ್ತು ನಟಿ ಪೂಜಾ ರೈ ಕಂಠದಾನ ಮಾಡಿದ್ದಾರೆ.
ದುಬೈ ಉದ್ಯಮಿ ಹರೀಶ್ ಶೇರಿಗಾರ್, ವಾಮನ್ ಮರೋಳಿ (ಅಧ್ಯಕ್ಷರು ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು) ಇವರು ಪರ್ಬ ಚಿತ್ರತಂಡಕ್ಕೆ ಶುಭಹಾರೈಸಿದರು.