ಉಡುಪಿ : ಕರ್ನಾಟಕ ಮೊಗವೀರ ಸಮಾಜದ ಮುಂದಾಳು ನಾಡೋಜ ಡಾ. ಜಿ. ಶಂಕರ್ ಅವರ 60ನೇ ಹುಟ್ಟು ಹಬ್ಬವನ್ನು ಅ. 5 ರಂದು ಉಡುಪಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕ್ಯಾನ್ಸರ್ ಪೀಡಿತೆ ನಾಲ್ಕು ವರ್ಷದ ಬಾಲಕಿ ರಮ್ಯಾ ದೀಪ ಬೆಳಗಿಸಿ ಉದ್ಘಾಟಿಸಿದ್ದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಜಸ್ಟಿಸ್ ಎಸ್ ಆರ್. ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ರೋಹನ್ ಚಂದ್ರ ಗಟ್ಟಿ, ಡಾ. ರವೀಂದ್ರ ಪ್ರಭು ಮತ್ತು ಸದಾನಂದ ಮಳ್ಕೂರು ಆಗಮಿಸಿದ್ದರು.
ಜಿ. ಶಂಕರ್ ಅವರು ಮಾತನಾಡುತ್ತಾ ತನ್ನ ಬದುಕಿನ ಅರುವತ್ತು ವರ್ಷಗಳ ನಡಿಗೆಯ ಬಗ್ಗೆ ತಿಳಿಸಿದರು. ಪ್ರತಿಯೋರ್ವನು ತನ್ನ ಗಳಿಕೆಯಲ್ಲಿ ಕಿಂಚಿತ್ತಾದರೂ ಸಮಾಜಕ್ಕೆ ನೀಡಬೇಕೆಂದರು.
ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಕ್ಯಾನ್ಸರ್ ಪೀಡಿತ ರೋಗಿಗಳಿಗೆ , ಶಾಲಾ ಮಕ್ಕಳಿಗೆ, ವಿದ್ಯಾ ಸಂಸ್ಥೆ, ಅನಾಥಾಶ್ರಮ, ವೃದ್ಧಾಶ್ರಮ ಹೀಗೆ ನೂರಾರು ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು.
ಮುಂಬಯಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಉಪಕಾರ್ಯಾಧ್ಯಕ್ಷ ಸುರೇಶ್ ಕಾಂಚನ್, ಉದ್ಯಮಿ ವೇದ ಪ್ರಕಾಶ್ ಶ್ರೀಯಾನ್ ದಂಪತಿ ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್