ಕರಾವಳಿ

‘ಮೊಗವೀರ್ಸ್ ಬಹ್ರೈನ್’ನ ಶೈಕ್ಷಣಿಕ ಸಾಧನಾ ಪ್ರಶಸ್ತಿ – 2015; ಮಿಥಿಲ್ ಕಿರಣ್ ಹೆಜಮಾಡಿ-ಕೋಡಿ ಪ್ರಥಮ

Pinterest LinkedIn Tumblr

mOGA

ಮನಾಮ, ಬಹ್ರೈನ್: ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯವರು ನಡೆಸಿರುವ ಏಪ್ರಿಲ್-2015ರ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾಗಿ ಉತ್ಕೃಷ್ಟ ಶೈಕ್ಷಣಿಕ ಸಾಧನೆಯನ್ನು ಗೈದಿರುವ ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ ಕೊಡಮಾಡಲು ಉದ್ದೇಶಿಸಿರುವ ಶೈಕ್ಷಣಿಕ ಸಾಧನಾ ಪ್ರಶಸ್ತಿಗಳಿಗೆ ಮೊಗವೀರ್ಸ್ ಬಹ್ರೈನ್ ಸಂಸ್ಥೆಯು ತನ್ನ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಅದರಂತೆ ಪ್ರಶಸ್ತಿಗಳಿಗೆ ಅರ್ಹರಾಗುವ ವಿಜೇತರ ವಿವರಗಳು ಈ ರೀತಿ ಇವೆ.

ಪ್ರಥಮ: ಮಿಥಿಲ್ ಕಿರಣ್ ಕುಮಾರ್, ಹೆಜಮಾಡಿ-ಕೋಡಿ [97.92%], ದ್ವಿತೀಯ: ಶ್ರದ್ಧಾ ಸುಂದರ್ ಸುವರ್ಣ, ಕೋಡಿ ಬೆಂಗ್ರೆ [97.76%], ತೃತೀಯ: ಸಾಹಿತ್ಯ ಸತೀಶ್ ಸಾಲ್ಯಾನ್, ಕೊಡವೂರು [97.44%]. ಅಂತೆಯೇ ಚತುರ್ಥ ಸ್ಥಾನಿಗಳಾಗಿ ಜೀತೇಶ್ ಕರ್ಕೇರ, ಒಡೆಯರಬೆಟ್ಟು – ಮುಲ್ಕಿ [96.96%] ಮತ್ತು ಶಿಲ್ಪ ಜನಾರ್ಧನ್, ಕೊಡವೂರು [96.96%] ಹಾಗೂ ಪಂಚಮ ಸ್ಥಾನಿಗಳಾಗಿ ಅಮೃತಾ ಸೋಮಪ್ಪ, ಉಪ್ಪೂರು [95.68%], ಹಿಂದುಜಾ ಕುಂದರ್, ತೊಟ್ಟಂ [95.68%] ಮತ್ತು ಶ್ರೀಲಕ್ಷ್ಮಿ ಶಂಕರ್, ಹಾಲಾಡಿ [95.04%] ಇವರು ಆಯ್ಕೆಯಾಗಿರುತ್ತಾರೆ.

ಅದೇ ರೀತಿ ಸಂಸ್ಥೆಯು 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುತ್ತಮ ಶೈಕ್ಷಣಿಕ ನಿರ್ವಹಣೆಯನ್ನು ತೋರಿರುವ ಸ್ವಸಮುದಾಯದ ಇತರ ಹತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಕ ಪ್ರಶಸ್ತಿಗೆ ಆಯ್ಕೆಗೊಳಿಸಿದ್ದು, ಅದರಂತೆ ನೀಲಾವರ ಶೈಲೇಶ್ ಸಾಲ್ಯಾನ್, ಕುಂದಾಪುರ ಕಸ್ಬಾ ವಿದ್ಯಾಶ್ರೀ ಜನಾರ್ಧನ್, ಕಾರ್ಕಳ ನೀಶಾ ಗಣೇಶ್, ಹೊಸಬೆಟ್ಟು ಪ್ರತೀಕಾ ಪ್ರದೀಪ್, ಹಟ್ಟಿಯಂಗಡಿ ಸಂಧ್ಯಾ ಶ್ರೀನಿವಾಸ್, ಉಳಿಯ-ಉಳ್ಳಾಲ ಫಲ್ಗುಣಿ ಭವಾನಿ, ಶಿವಳ್ಳಿ-ಉಡುಪಿ ಶ್ರದ್ಧಾ ಸತೀಶ್, ಪರ್ಕಳ ಜಯಶ್ರೀ ಸಾಲ್ಯಾನ್, ಕಲ್ಮಾಡಿ ಓಂಕಾರ್ ಜನಾರ್ಧನ್, ಕಚ್ಚೂರು-ಬಾರ್ಕೂರು ಸೌರಭ್ ಸಾಲ್ಯಾನ್ ಇವರೆಲ್ಲಾ ಆ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಈ ಬಾರಿ ಸಂಸ್ಥೆಯ ದಶಮಾನೋತ್ಸವದ ಹಿನ್ನೆಲೆಯಲ್ಲಿ ಕೆಲವೊಂದು ಹೆಚ್ಚುವರಿ ಪ್ರಶಸ್ತಿಗಳನ್ನು ತಾತ್ಕಾಲಿಕವಾಗಿ ಸೇರಿಸಿಕೊಳ್ಳಲಾಗಿದ್ದು, ಇದು ಇನ್ನೂ ಹೆಚ್ಚಿನ ಪ್ರತಿಭಾವಂತ ಯಾ ಬಡ ವಿದ್ಯಾರ್ಥಿಗಳು ಪ್ರಶಸ್ತಿ ಯಾ ಪ್ರೋತ್ಸಾಹಕ್ಕೆ ಅರ್ಹರಾಗುವಂತೆ ಮಾಡಿರುತ್ತದೆ.

ಗತ ಹಲವು ವರ್ಷಗಳಿಂದಲೂ ಸಂಸ್ಥೆಯ ಅಗ್ರ ಪ್ರಾಶಸ್ತ್ಯದ ಕಾರ್ಯಕ್ರಮವಾಗಿ ಮೂಡಿ ಬಂದಿರುವ ಈ ಶೈಕ್ಷಣಿಕ ಸಾಧಕರ ಸಮ್ಮಾನ ಕಾರ್ಯಕ್ರಮದನ್ವಯ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಹಾಗೂ ಪ್ರೋತ್ಸಾಹಕರ ಪ್ರಶಸ್ತಿ ವಿಜೇತರೆಲ್ಲರೂ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಶಾಲು ಸಹಿತ ಅನುಕ್ರಮವಾಗಿ ರೂ.10,000, ರೂ.7,000, ರೂ.5,000, ರೂ.4,000, ರೂ.3,000 ಹಾಗೂ ತಲಾ 2,000ದ ನಗದು ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.

ಅಂತೆಯೇ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಾದ ಬೀಜಾಡಿ ಮನೋಜ್ ನಾಗರಾಜ್, ಬೈಂದೂರು ಪೂರ್ಣಿಮ ನರಸಿಂಹ ಮತ್ತು ಶೀರೂರು ನಾಗಶ್ರೀ ನರಸಿಂಹ ಇವರನ್ನು ಸಂಸ್ಥೆಯು ಪ್ರತ್ಯೇಕ ವಿದ್ಯಾರ್ಥಿವೇತನಕ್ಕೆ ಆಯ್ಕೆಗೊಳಿಸಿದ್ದು, ಅವರೂ ಕೂಡಾ ಗೌರವ ಸಹಿತ ರೂ.2,000 ಮೊತ್ತದ ಶೈಕ್ಷಣಿಕ ಅನುದಾನವನ್ನು ಸ್ವೀಕರಿಸಲಿದ್ದಾರೆ. ತತ್ಸಂಬಂಧಿತ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಮೊಗವೀರ ಸಮುದಾಯದ ಮೂಲ ಕುಲಕ್ಷೇತ್ರವಾದ ಬೆಣ್ಣೆಕುದ್ರು-ಬಾರ್ಕೂರಿನ ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಸ್ಥಳೀಯ ಮೊಗವೀರ ಯುವಕ ಸಂಘ ಹಾಗೂ ಮೊಗವೀರ ಮಹಿಳಾ ಸಂಘದ ಜಂಟಿ ಸಹಯೋಗದಲ್ಲಿ ಜರಗಲಿರುವುದು.

ಸಂಸ್ಥೆಯ ಈ ಬಾರಿಯ ಪ್ರಧಾನ ಪ್ರಶಸ್ತಿಗಳಿಗೆ ಮುಖ್ಯ ಪ್ರಾಯೋಜಕರಾಗಿ ಸುಭಾಶ್ಚಂದ್ರ ಶೀರೂರು, ಗಿರೀಶ್ ಇಡ್ಯಾ, ಕೋದಂಡರಾಮ ಸಾಲ್ಯಾನ್, ಶಮಿತ್ ಕುಂದರ್, ತೀರ್ಥ ಸುವರ್ಣ, ಲೀಲಾಧರ್ ಬೈಕಂಪಾಡಿ, ನಾಗೇಶ್ ನಾಯ್ಕ್, ವಿಠ್ಠಲ್ ಸುವರ್ಣ, ಭಾಸ್ಕರ್ ಕಾಂಚನ್ ಮತ್ತು ರಘು ಕೋಟ್ಯಾನ್ ಇವರೆಲ್ಲಾ ಬೆಂಬಲಿಸಿರುತ್ತಾರೆ. ಅಂತೆಯೇ ಇತರ ಪೋತ್ಸಾಹಕ ಪ್ರಶಸ್ತಿಗಳಿಗೆ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಹ ಪ್ರಾಯೋಜಕರಾಗಿ ರಾಜೇಶ್ ಮೆಂಡನ್, ಸುರೇಶ್ ಅಮೀನ್, ಪುನೀತ್ ಪುತ್ರನ್, ಚಂದ್ರ ಮೆಂಡನ್, ಪದ್ಮನಾಭ ಕಾಂಚನ್, ಮನೋಹರ್ ಹೆಜ್ಮಾಡಿ, ಸುಧಾಕರ್ ಮೊಗವೀರ, ಗಂಭೀರ್ ಕುಂದರ್, ಕಿರಣ್ ಮೆಂಡನ್, ಪ್ರವೀಣ್ ಬೈಕಂಪಾಡಿ, ವಿನೋದ್ ಶ್ರೀಯಾನ್, ನಂದಕಿಶೋರ್ ಪುತ್ರನ್ ಮತ್ತು ಜನಾರ್ಧನ ತಿಂಗಳಾಯ ಮುಂತಾದವರು ಸಹಕರಿಸಿರುತ್ತಾರೆ.

ಪ್ರಶಸ್ತಿ ವಿಜೇತರೆಲ್ಲರನ್ನೂ ಅಭಿನಂದಿಸಿರುವ ಸಂಸ್ಥೆಯ ದಶಮಾನೋತ್ಸವ ಅವಧಿಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಮೆಂಡನ್ [00973-36152999] ಅಥವಾ ಸ್ಥಳೀಯ ಕಾರ್ಯಕ್ರಮ ಸಂಯೋಜಕರ ಪರವಾಗಿ ಸತೀಶ್ ಅಮೀನ್ [9448773919] ಯಾ ಗಿರಿಜಾ ವಿಠ್ಠಲ್ ಕಾಂಚನ್ [9986344373] ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Write A Comment