ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಯು.ಎ.ಇ. ಬಂಟ್ಸ್ ವತಿಯಿಂದ ದುಬಾಯಿಯ ಅಲ್ ಕೂಸ್ ಕ್ರೀಡೆನ್ಸ್ ಹೈಸ್ಕೂಲ್ ಸಭಾಂಗಣದಲ್ಲಿ 2015 ಅಕ್ಟೋಬರ್ 23ನೇ ತಾರೀಕು ಶುಕ್ರವಾರ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಯು.ಎ.ಇ. ಯ ವಿವಿಧ ಭಾಗಗಳಿಂದ ಬಂಟ ಬಾಂಧವರು ತಮ್ಮ ಬಂಧು ಮಿತ್ರರೊಂದಿಗೆ ಆಗಮಿಸಿದ್ದರು. ಯು.ಎ.ಇ. ಯಲ್ಲಿರುವ ಇನ್ನಿತರ ಜಾತಿ ಸಮುದಾಯಗಳ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು. ಸೇರಿದ ಎಲ್ಲಾ ಭಕ್ತರು ಭಕ್ತಿಭಾವದಿಂದ ಪೂಜಾ ವಿಧಿ ವಿಧಾನದಲ್ಲಿ ತನ್ಮಯತೆಯಿಂದ ಭಕ್ತಿಪರವಶರಾಗಿ ದೇವರ ಕೃಪೆಗೆ ಪಾತ್ರರಾದರು. ಒಂದು ಸಾವಿರದ ಐನೂರಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸಾಕ್ಷಿಯಾದರು.
ಶ್ರೀ ರಘು ಭಟ್ ಶ್ರೀ ಸತ್ಯನಾರಾಯಣ ಪೂಜೆಯನ್ನು ಸಾಂಗವಾಗಿ ನೆರವೇರಿಸಿದರು. ಪೂಜಾ ಸೇವಾ ಕರ್ತರ ಪರವಾಗಿ ದಂಪತಿಗಳಾದ ಪ್ರತೀಕ್ ಮತ್ತು ಸೋನಂ ಆಳ್ವ, ಯು.ಎ.ಇ. ಬಂಟ್ ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀ ದಿವಾಕರ್ ಶೆಟ್ಟಿ, ಸುಪ್ರಿತಾ ಶೆಟ್ಟಿ ಯು.ಎ.ಇ. ಬಂಟ್ಸ್ ಸಲಹಾ ಸಮಿತಿಯ ಪರವಾಗಿ ಶ್ರೀ ಪ್ರೇಂನಾಥ್ ಶೆಟ್ಟಿ, ಭಾಗ್ಯಲಕ್ಷ್ಮೀ ಶೆಟ್ಟಿ ಪೂಜಾ ಕಾರ್ಯದಲ್ಲಿ ಭಾಗಿಗಳಾಗಿದ್ದರು.
ಪೂಜಾ ಸಂಕಲ್ಪ ಕಲಶ ಪ್ರತಿಷ್ಠೆ ಪೂಜಾ ವಿದಿವಿಧಾನ ಪ್ರಾರಂಭ
ಯು.ಎ.ಇ. ಬಂಟ್ಸ್ ಮುಖ್ಯ ಸಂಘಟಕರಾದ ಶ್ರೀ ಸರ್ವೊತ್ತಮ ಶೆಟ್ಟಿಯವರು ಸಮಸ್ಥ ಬಂಟ ಬಾಂಧವರು ಮತ್ತು ಅಹ್ವಾನಿತ ಅತಿಥಿಗಳನ್ನು ಸ್ವಾಗತಿಸಿ ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿದಿ ವಿಧಾನಗಳು ಪ್ರಾರಂಭವಾಯಿತು. ಗುರುಪೂಜೆ, ಮತ್ತು ಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ಸತ್ಯನಾರಾಯಣ ದೇವರ ವೃತ ಕಲ್ಪೋಕ್ತಿ ಪೂಜೆ, ಭಜನೆ ಸಂಕೀರ್ತನೆ, ಸತ್ಯನಾರಾಯಣ ದೇವರ ಕಥೆ ನಂತರ ಮಹಾಮಂಗಳಾರತಿ ನಡೆಯಿತು.
ಭಕ್ತಿ ಸಂಗೀತ ಸೇವೆ ಸಮರ್ಪಣೆ
ರಾಜರಾಜೇಶ್ವರಿ ಭಜನಾ ತಂಡದ ಕಿರಿಯ ಮಕ್ಕಳು ಹಾಗೂ ಹಿರಿಯರಿಂದ ಭಜನೆ ಸೇವೆ ಹಾಗೂ ಶ್ರೀಮತಿ ಮಧುರಾ ವಿಶ್ವನಾಥ್ ಶ್ರೀಮತಿ ಸಂಗೀತಾ ರಾಜೇಶ್, ಕೊಳಲು ವಾದಕ ಶ್ರೀ ಹರಿ ನಾರಾಯಣ್ , ತಬಲಾ ಶ್ರೀ ರಾಜೇಶ್ ಆಡಿಗ ತಂಡದವರ ಸುಶ್ರಾವ್ಯ ಸುಮಧುರ ಸಂಗೀತ ಸೇವೆಯನ್ನು ಸಮರ್ಪಿಸಿದರು.
ಯು.ಎ.ಇ. ಬಂಟ್ಸ್ ಸುಮಂಗಲೆಯರ ತಂಡದವರ ನವರಾತ್ರಿ ದೀಪದ ಸುತ್ತಲು ನೃತ್ಯ ಸೇವೆ ನಡೆಯಿತು.
ಯು.ಎ.ಇ. ಬಂಟ್ಸ್ ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರು ಪೂಜೆಯಲ್ಲಿ ಉಪಸ್ತಿತರಿದ್ದರು
ಯು.ಎ.ಇ. ಗೆ ಆಗಮಿಸಿದ್ದ ದಕ್ಷಿಣ ಭಾರತದ ಪ್ರಸಿದ್ದ ಚಿತ್ರ ನಟಿ ವಿನಯ ಪ್ರಕಾಶ್ ಯು.ಎ.ಇ. ಬಂಟ್ಸ್ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಯು.ಎ.ಇ. ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ ಯು.ಎ.ಇ. ಯ ಎಲ್ಲಾ ಸಮುಧಾಯ ಮತ್ತು ಸಂಘಟನೆಯ ಅಧ್ಯಕ್ಷರು, ಪಧಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.
ಮಹಾಮಂಗಾಳಾರತಿಯ ನಂತರ ತೀರ್ಥ ಪ್ರಸಾದ, ಸಪಾತ ಭಕ್ಷ್ಯ ಸ್ವೀಕರಿಸಿದ ನಂತರ ರುಚಿ ರುಚಿಯಾದ ಭಕ್ಷ್ಯ ಭೋಜನ ಮಹಾಪ್ರಸಾದವನ್ನು ಸ್ವೀಕರಿಸಿದರು.
ಪೂಜಾಕಾರ್ಯದಲ್ಲಿ ಮಹಾಪ್ರಸಾದ ವಿತರಣೆಯ ಜವಬ್ಧಾರಿಯನ್ನು ವಹಿಸಿಕೊಂಡಿದ್ದ ಶಾರ್ಜಾ ವುಡ್ ಲ್ಯಾಂಡ್ಸ್ ಹೊಟೇಲ್ ನ ಶ್ರೀ ದಿವೇಶ್ ಆಳ್ವರವರು ವಹಿಸಿಕೊಂಡಿದ್ದರು.
ಪೂರ್ವಭಾವಿ ತಯಾರಿಕೆಯೊಂದಿಗೆ ಪೂಜಾಕಾರ್ಯಕ್ರಮವನ್ನು ಯಶಸ್ಸು ಗೊಳಿಸಲು ಕಾರಣಕರ್ತರಾದ ಕಾರ್ಯಕಾರಿ ಸಮಿತಿ
ಯು.ಎ.ಇ. ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಮುಖ್ಯ ಜವಬ್ದಾರಿಯನ್ನು ವಹಿಸಿಕೊಂಡ ಶ್ರೀಯುತರುಗಳಾದ ಸರ್ವೋತ್ತಮ ಶೆಟ್ಟಿ, ಗಣೇಶ್ ರೈ, ಪ್ರವೀಣ್ ಕುಮಾರ್ ಶೆಟ್ಟಿ, ರವಿರಾಜ್ ಶೆಟ್ಟಿ ಶ್ರೀಮತಿ ಶಶಿ ಶೆಟ್ಟಿ, ಶ್ರೀ ದಿವೇಶ್ ಆಳ್ವ, ವಾಸು ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಇವರುಗಳ ಜೊತೆಯಾಗಿ ಯು.ಎ.ಇ. ಬಂಟ್ಸ್ ಕಾರ್ಯಕಾರಿ ಸಮಿತಿಯ ಸದಸ್ಯ ದಂಪತಿಗಳು ಪ್ರಸನ್ನ ಶೆಟ್ಟಿ, ಚಿತ್ರ ಪ್ರಸನ್ನ ಶೆಟ್ಟಿ, ವಿವೇಕ್ ಶೆಟ್ಟಿ, ವಿಜೇತ ವಿವೇಕ್ ಶೆಟ್ಟಿ, ನಾಗರಾಜ್ ಶೆಟ್ಟಿ, ದೀಪ್ತಿ ನಾಗರಾಜ್ ಶೆಟ್ಟಿ, ದಿವಾಕರ್ ಶೆಟ್ಟಿ, ಸುಪ್ರಿತ ದಿವಾಕರ್ ಶೆಟ್ಟಿ, ಸುಬ್ರತ್ ಶೆಟ್ಟಿ, ನಾಗಶ್ರೀ ಶುಬ್ರತ್ ಶೆಟ್ಟಿ, ಸುದೀರ್ ಶೆಟ್ಟಿ, ಸುಧಾ ಸುದೀರ್ ಶೆಟ್ಟಿ, ಗುರುಪ್ರಸಾದ್ ಭಂಡಾರಿ, ಶಕಿಲಾ ಗುರುಪ್ರಸಾದ್ ಭಂಡಾರಿ, ಬಾಲಕೃಷ್ಣ ಶೆಟ್ಟಿ ಅಮಿತಾ ಬಾಲಕೃಷ್ಣ ಶೆಟ್ಟಿ, ನಾಗರಾಜ್ ಶೆಟ್ಟಿ, ರಜನಿ ನಾಗರಾಜ್ ಶೆಟ್ಟಿ.
ಪೂಜಾ ಕಾರ್ಯದಲ್ಲಿ ಸುಮಾರು ಐನೂರಕಿಂತಲೂ ಹೆಚ್ಚು ಸೇವಾ ಕರ್ತರು ಹಾಗೂ ಬೆಂಬಲ ಸಹಕಾರ, ಪ್ರೋತ್ಸಾಹ ನೀಡಿದವರು ಶ್ರೀಯುತರುಗಳಾದ ಪ್ರೇಂನಾಥ್ ಶೆಟ್ಟಿ, ಸುಜಾತ್ ಶೆಟ್ಟಿ, ವಾಸು ಕುಮಾರ್ ಶೆಟ್ಟಿ, ಸಂಗೀತ ಸತೀಶ್ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಕರುಣಾಕರ್ ಶೆಟ್ಟಿ ಯವ್ರು ತಮ್ಮ ಸೇವೆಯನ್ನು ಸಮರ್ಪಿಸಿದರು. ಚಿಲ್ಲಿ ವಿಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸತೀಶ್ ವೆಂಕಟರಮಣ ತಂಪು ಪಾನಿಯದ ವ್ಯವಸ್ಥೆ ಮಾಡಿದ್ದರು. ಸರ್ವರನ್ನು ಡಾ. ಬಿ. ಆರ್. ಶೆಟ್ಟಿಯವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಕೊನೆಯಲ್ಲಿ ಶ್ರೀ ಸರ್ವೋತ್ತಮ್ ಶೆಟ್ಟಿವರು ವಂದನೆಗಳನ್ನು ಸಲ್ಲಿಸಿದರು.
ಆಕರ್ಷಕ ಪೂಜಾ ಮಂಟಪ ಶ್ರೀ ರಾಜೇಶ್ ಕುತ್ತಾರ್ ತಂಡದವರು ಅಚ್ಚುಕಟ್ಟಾಗಿ ಅಲಂಕಾರಗೊಳಿಸಿದ್ದರು. ಧ್ವನಿ ವರ್ಧಕ ವ್ಯವಸ್ಥೆ ಶ್ರೀ ಪ್ರವೀಣ್ ಯವರದ್ದಾಗಿತ್ತು
ಯು.ಎ.ಇ. ಬಂಟ್ಸ್ ಸಂಘಟನೆಗಳಲ್ಲಿ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವವಿರುವ ಹಲವು ಮಂದಿ ಉತ್ಸಾಹಿ ಕಾರ್ಯಕರ್ತರ ತಂಡ ಕಳೆದ ಹಲವಾರು ವಾರಗಳಿಂದ ವ್ಯವಸ್ಥಿತವಾಗಿ ಕಾರ್ಯಯೋಜನೆಗಳನ್ನು ಸಿದ್ದ ಪಡಿಸಿಕೊಂಡು ಪೂಜಾ ಕಾರ್ಯದ ಯಶಸ್ಸಿನಲ್ಲಿ ಭಾಗಿಗಳಾದರು.
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ