ಅಂತರಾಷ್ಟ್ರೀಯ

ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸಿ ಅರಿಶಿನ….ಬಳಸುವ ಬಗ್ಗೆ ಇಲ್ಲಿದೆ ನೋಡಿ…

Pinterest LinkedIn Tumblr

turmeric-face-mask

ಅರಿಶಿನದಲ್ಲಿ ಹಲವು ರೋಗ ನಿರೋಧಕ ಶಕ್ತಿ ಇರುವುದರಿಂದ ಅರಿಶಿನವನ್ನು ಅಡುಗೆಗೆ ಬಳಸುತ್ತಾರೆ. ಅಡುಗೆಗೆ ಅಲ್ಲದೇ ಅರಿಶಿನವನ್ನು ಉಪಯೋಗಿಸಿಕೊಂಡು ಸೌಂದರ್ಯವನ್ನು ನೀವು ಹೆಚ್ಚು ಮಾಡಿಕೊಳ್ಳಬಹುದು. ಯಾವ ರೀತಿ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಕೆಲವು ಬ್ಯುಟಿ ಟಿಪ್ಸ್‍ನ್ನು ಇಲ್ಲಿ ನೀಡಲಾಗಿದೆ.

* ಹಾಲಿನ ಕೆನೆಯಲ್ಲಿ ಅರಿಶಿನಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಅಲ್ಲದೇ ನುಣುಪಾಗುತ್ತದೆ.

* ಶ್ರೀಗಂಧ, ಅರಿಶಿನ ಹಾಗೂ ಪನ್ನೀರು ಅಥವಾ ರೋಸ್‍ವಾಟರ್ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಮೂಡುವ ಮೊಡವೆಗಳು ದೂರವಾಗುತ್ತದೆ.

* ಬಿಸಿ ಹಾಲಿಗೆ ಚಿಟಿಕೆ ಅರಿಶಿನ ಪುಡಿ ಬೆರೆಸಿ ಕುಡಿದರೆ ಕೆಮ್ಮು, ನೆಗಡಿ ವಾಸಿಯಾಗುತ್ತದೆ.

* ಹಸಿಹಾಲು, ಟೊಮೋಟೊ ರಸವನ್ನು ಅಕ್ಕಿಹಿಟ್ಟು ಮತ್ತು ಅರಿಶಿನ ಹಾಕಿ ಕಲಸಿ ಪೇಸ್ಟ್ ಮಾಡಿ ಮುಖಕ್ಕೆ ಹಾಕಿ ಅದು ಒಣಗಿದ ನಂತರ ತೊಳೆಯಿರಿ. ಹೀಗೆ ಮಾಡಿದರೆ ಮುಖದಲ್ಲಿನ ನೆರಿಗೆಗಳು ನಿವಾರಣೆಯಾಗುತ್ತವೆ.

* ಅರಿಶಿನಪುಡಿಗೆ ಕೊಬ್ಬರಿ ಎಣ್ಣೆ ಅಥವಾ ಹರೆಳೆಣ್ಣೆ ಸೇರಿಸಿ ಬಿರುಕು ಬಿಟ್ಟ ಪಾದಗಳು, ಹಿಮ್ಮಡಿಗೆ ಹಚ್ಚಿ 15 ನಿಮಿಷದ ನಂತರ ಸ್ನಾನ ಮಾಡುವುದರಿಂದ ಪಾದಗಳು ಮೃದುವಾಗುತ್ತವೆ.

Write A Comment