ಕರಾವಳಿ

ಬಿಲ್ಲವರ ಎಸೋಸಿಯೇಶನ್, ಆರೋಗ್ಯ ನಿಧಿ ಸಹಾಯಾರ್ಥ ನಾಟಕ ಪ್ರದರ್ಶನ

Pinterest LinkedIn Tumblr

billava_function_1

ಮುಂಬಯಿ : ಬಿಲ್ಲವರ ಎಸೋಸಿಯೇಶನ್, ಮುಂಬಯಿಯ ಸಾಮಾನ್ಯ ಸಹಾಯಕ ಉಪಸಮಿತಿಯ ಆಶ್ರಯದಲ್ಲಿ ಆರೋಗ್ಯ ನಿಧಿ ಸಹಾಯಾರ್ಥ ಅ. 24ರಂದು ಬಿಲ್ಲವ ಭವನದಲ್ಲಿ ಲಕುಮಿ ತಂಡದ ”ಬದ್ಕೆರೆಗಾದ್ ದಿನನಿತ್ಯ ಸೈಪಿನಕುಲ” ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಈ ಸಂಧರ್ಭದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿಲ್ಲವರ ಎಸೋಸಿಯೇಶನ್, ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮಾತನಾಡುತ್ತಾ ಕಳೆದ ಎಂಟು ದಶಕಗಳಿಂದ ಸಮಾಜ ಸೇವಾ ನಿರತವಾಗಿರುವ ಬಿಲ್ಲವರ ಎಸೋಸಿಯೇಶನ್, ಮುಂಬಯಿ ವೈದ್ಯಕೀಯ ಸೇವೆಗೂ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಅಗತ್ಯಕ್ಕಿಂತ ಹೆಚ್ಚು ಕರ್ಚು ಮಾಡುವ ಬದಲು ಅದನ್ನು ಬಡ ರೋಗಿಗಳಿಗೆ ನೆರವು ನೀಡುದರ ಮೂಲಕ ಆರ್ಥಿಕವಾಗಿ ಹಿಂದುಳಿದ ಸಮಾಜದ ರೋಗಿಗಳಿಗೆ ಸಹಾಯ ಮಾಡಿದಂತಾಗುವುದು. ಈ ನಾಟಕ ಪ್ರದರ್ಶನ ಮೂಲಕ, ಆರೋಗ್ಯ ನಿಧಿಯ ವತಿಯಿಂದ ಬಡ ರೋಗಿಗಳಿಗೆ ನಾವೆಲ್ಲಾ ಸಹಕರಿಸುತ್ತೆದ್ದೇವೆ, ಎಂದರು.

billava_function_2 billava_function_3 billava_function_4 billava_function_5 billava_function_6

billava_function_10

billava_function_7 billava_function_8 billava_function_9

ಭಾರತ್ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ, ಹಾಲಿ ನಿರ್ದೇಶಕ ವಾಸುದೇವ ಕೋಟ್ಯಾನ್ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕೇವಲ ದುಡ್ಡು ಕೊಟ್ಟು ವೈದ್ಯಕೀಯ ಸಹಾಯ ಮಾಡಬೇಕೆಂದಿಲ್ಲ. ಇತರ ರೀತಿಯಲ್ಲೂ ಬಡ ರೋಗಿಗಳ ಸೇವೆ ಮಾಡಬಹುದು. ಎಸೋಸಿಯೇಶನ್ ಯುವ ವಿಭಾಗವು ರಕ್ತದಾನದ ಮೂಲಕ ಸಹಕರಿಸಬಹುದು. ನಿರ್ಗತಿಕ ರೋಗಿಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದ ಅವರು ಆರೋಗ್ಯ ನಿಧಿಗೆ ನಾವೆಲ್ಲರೂ ಹೆಚ್ಚಿನ ರೀತಿಯಲ್ಲಿ ಸಹಕರಿಸಬೇಕೆಂದರು.

ಭಾರತ್ ಬ್ಯಾಂಕಿನ ಚಂದ್ರಶೇಖರ್ ಎಸ್ ಪೂಜಾರಿ , ಸೋಮನಾಥ ಬಿ ಅಮೀನ್ ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇಂತಹ ಕಾರ್ಯಕ್ಕೆ ಎಲ್ಲರ ಸಹಕಾರವನ್ನು ಕೋರಿದರು.

ಸಾಮಾನ್ಯ ಸಹಾಯಕ ಉಪಸಮಿತಿಯ ಕಾರ್ಯಾಧ್ಯಕ್ಷ ರಾಜಾ ವಿ ಸಾಲಿಯಾನ್ ಸ್ವಾಗತಿಸಿದರು.

ಲಕುಮಿ ತಂಡದ ಹಿರಿಯ ಕಲಾವಿದರಾದ ವಸಂತ ಅಮೀನ್ ಮತ್ತು ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ನಿಧಿಗೆ ಹೆಚ್ಚಿನ ಮೊತ್ತವನ್ನು ನೀಡಿದ ವಾಸುದೇವ ಕೋಟ್ಯಾನ್ ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ ಗೌರವಿಸಿದರು.

ವೇದಿಕೆಯಲ್ಲಿ ಎಸೋಸಿಯೇಶನ್ ನ ಉಪಾಧ್ಯಕ್ಷರುಗಳಾದ ಡಾ. ಯು ಧನಂಜಯಕುಮಾರ್, ಶಂಕ್ರ್ ಡಿ. ಪೂಜಾರಿ, ಭಾಸ್ಕರ ವಿ ಬಂಗೇರ,ಗೌರವ ಕೋಶಾಧಿಕಾರಿ ಮಹೇಶ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಮೊದಲಾದಾರು ಉಪಸ್ಥಿತರಿದ್ದರು.

ಗೌ. ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ ಹೆಜ್ಮಾಡಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಣೇಶ್ ಕೆ ಪೂಜಾರಿ ವಂದಿಸಿದರು.

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

Write A Comment