ಅಂತರಾಷ್ಟ್ರೀಯ

ಪಪ್ಪಾಯಿಯ ಪ್ರಯೋಜನಗಳು…

Pinterest LinkedIn Tumblr

papaya

ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ನಿತ್ಯದ ಆಹಾರದಲ್ಲಿ ಅದನ್ನು ಸೇರ್ಪಡೆಗೊಳಿಸಿಕೊಂಡರೆ ಒಳಿತಾಗುತ್ತದೆ. ಶರೀರದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರಿಗೆ ಇದು ಒಂದು ವರದಾನವೇ ಸರಿ. ಕಿತ್ತಳೆ ಬಣ್ಣದ ಸಿಹಿಯಾದ ಈ ರಸಭರಿತ ಹಣ್ಣು ವಿಟಮಿನ್‍ಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಗುಣಕಾರಿ ಲಕ್ಷಣಗಳನ್ನುಹೊಂದಿದೆ.

ಉರಿಯೂತ ನಿವಾರಕ: ಪಪ್ಪಾಯಿ ಚಿಮೊಪಾಪಿನ್ ಮತ್ತು ಪಾಪಿನ್ ಗಳೆಂಬ ಎರಡು ಪ್ರೋಟೀನ್ ಜೀರ್ಣಕಾರಕ ಕಿಣ್ವಗಳನ್ನು, ವಿಟಮಿನ್ ಎ, ಸಿ ಮತ್ತು ಕ್ಯಾರೋಟಿನ್ ಹೊಂದಿದೆ. ಇವೆಲ್ಲವೂ ಈ ಹಣ್ಣಿಗೆ ರುಮಟಾಯ್ಡ್ ಆಥ್ರೈಟಿಸ್ ವಿರುದ್ಧ ಹೋರಾಟಕ್ಕೆ ಕಸುವು ನೀಡುತ್ತವೆ ಮತ್ತು ಉರಿಯೂತಗಳ ನಿವಾರಣೆಗೂ ಸಹಕಾರಿಯಾಗಿದೆ.

ಕರುಳಿನ ರಕ್ಷಕ: ಪಪ್ಪಾಯಿ ಜೀವನಿರೋಧಕ (ಆ್ಯಂಟಿ ಬಯಾಟಿಕ್)ಗಳಿಂದ ಹಾನಿಗೊಂಡ ಉತ್ತಮ ಕರುಳಿನ ಬ್ಯಾಕ್ಟೀರಿಯಾಗಳನ್ನು ಪುನಶ್ಚೇತನಗೊಳಿಸುತ್ತದೆ. ವಾಕರಿಕೆ ನಿವಾರಕ: ಪಪ್ಪಾಯಿ ಕಿಣ್ವಗಳ ಒಂದು ಸಮೃದ್ಧ ಮೂಲವಾಗಿದ್ದು ಕರುಳಿನ ಆಮ್ಲವನ್ನು ಸಮತೋಲನಗೊಳಿಸುತ್ತದೆ. ಈ ಹಣ್ಣು ವಾಕರಿಕೆಯನ್ನು ಹೋಗಲಾಡಿಸುತ್ತದೆ.

ಒತ್ತಡ ಶಾಮಕ: ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಒತ್ತಡದ ಹಾರ್ಮೋನ್‍ಗಳ ಹರಿವನ್ನು ನಿರ್ಬಂಧಿಸುತ್ತದೆ. ತನ್ಮೂಲಕ ಒತ್ತಡವನ್ನು ತಗ್ಗಿಸುತ್ತದೆ.

ಋತುಚರ್ಯೆ ಸುಗಮ: ಋತು ಸಂಬಂಧಿ ತೊಂದರೆಗಳಿಗೆ ಪಪ್ಪಾಯಿ ರಾಮಬಾಣ ಎಂದು ಬಿಂಬಿತವಾಗಿದೆ. ಒಂದು ಪಪ್ಪಾಯಿ ಎಲೆ, ಹುಣಸೆಹಣ್ಣು ಮತ್ತು ಉಪ್ಪನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕುಡಿಯಿರಿ. ಈ ಮಿಶ್ರಣ ರುಚಿಕರವಾಗಿಲ್ಲದಿದ್ದರೂ ಋತುದೋಷ ಶಮನಗೊಳಿಸಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.

ಕ್ಯಾನ್ಸರ್ ವಿರುದ್ಧ ಸೆಣಸು: ಪಪ್ಪಾಯಿಯಲ್ಲಿರುವ ಜೀವಸತ್ವ ಪಾಪಿನ್ ಮೇಲೆ ಅಧ್ಯಯನ ನಡೆಯುತ್ತಿದೆ. ಈ ಜೀವಸತ್ವವು ಕ್ಯಾನ್ಸರ್ ರೋಗಿಗಳಲ್ಲಿ ಕಿಮೋ ಥೆರಪಿ ಚಿಕಿತ್ಸೆಯ ಬಳಿಕ ತಲೆದೋರುವ ತೊಂದರೆಗಳ ಉಪಶಾಮಕವಾಗಿ ಕೆಲಸ ಮಾಡುತ್ತದೆ. ಪಪ್ಪಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ಕಸುವು ಲಭಿಸುತ್ತದೆ.

ರಕ್ತ ಪರಿಚಲನೆಗೆ ಪೂರಕ ಜನನ ನಿಯಂತ್ರಣ ಗುಳಿಗೆ ಸೇವಿಸುವವರು, ಧೂಮಪಾನಿಗಳು ಮುಂತಾದವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗುತ್ತದೆ. ಪಪ್ಪಾಯಿ ಸೇವನೆಯು ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಈ ಹಣ್ಣು ಪಾದಗಳ ಬಿರುಕನ್ನೂ ನಿವಾರಿಸುತ್ತದೆ ಎಂಬ ಪ್ರತೀತಿ ಇದೆ. ಪಪ್ಪಾಯಿಯನ್ನು ಚೆನ್ನಾಗಿ ಕಿವುಚಿ ಬೆಚ್ಚಗಿನ ನೀರಿನಲ್ಲಿ ಕಲೆ ಈ ದ್ರಾವಣದಲ್ಲಿ ಪಾದಗಳನ್ನು ಉಜ್ಜಿದರೆ ಸೀಳುಪಾದ ಗುಣವಾಗುತ್ತದೆ.

Write A Comment