ಕರಾವಳಿ

ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ…..

Pinterest LinkedIn Tumblr

tension

ಬೆಂಗಳೂರು, ಡಿ.15: ಅರುಷಾ ಕಂಜಿಲಾಲ್ ಎಂಬ ಸಾಫ್ಟ್‌ವೇರ್ ತಂತ್ರ, ತಮ್ಮ 13 ವರ್ಷದ ಮಗಳು. ಆಕೆಯ ಇತರೆ ಗೆಳತಿಯರಂತಲ್ಲ, ಇವಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತಿಯೇ ಇಲ್ಲ ಎಂದು ಹೆಮ್ಮೆಯಿಂದ ಇತರರಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಇವರ ಮಗಳು ಅನನ್ಯಾ (ಹೆಸರು ಬದಲಿಸಲಾಗಿದೆ) ನಕಲಿ ಗುರುತಿನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಫೇಸ್ ಬುಕ್‌ನಲ್ಲಿ ಸಕ್ರಿಯವಾಗಿದ್ದಳು ಎಂಬ ಸಂಗತಿ ಅರಿವಿಗೆ ಬಂದು ಈ ಎಲ್ಲ ಕಲ್ಪನೆಗಳು ಕುಸಿದು ಬಿದ್ದವು. ಫೇಸ್‌ಬುಕ್‌ಗೆ ಸೈನಿಂಗ್ ಅಪ್ ಆಗಲು 13 ವರ್ಷಗಳು ಆಗಬೇಕಾಗಿರುವುದರಿಂದ ಆಕೆ ನಕಲಿ ಗುರುತಿನೊಂದಿಗೆ ಫೇಸ್‌ಬುಕ್ ಖಾತೆ ತೆರೆದಿದ್ದಳು.

ವಿಪರ್ಯಾಸವೆಂದರೆ, ಅನನ್ಯ ಇವರ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಇದ್ದಳು. ನಾನು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿಯೇ ಇದ್ದೇನೆ. ನನ್ನ ಮಗಳು ನನ್ನ ಫ್ರೆಂಡ್ಸ್ ಲಿಸ್ಟ್‌ನಲ್ಲಿದ್ದಳು. ಆದರೆ ನನಗದು ತಿಳಿದಿರಲಿಲ್ಲ. ಆಕೆಯ ಆನ್‌ಲೈನ್ ಚಟುವಟಿಕೆಗಳ ಮೇಲೆ ನಾನು ಕಣ್ಣಿಡುವ ಬದಲಾಗಿ, ಆಕೆ ನನ್ನ ಪ್ರೊಫೈಲ್‌ಅನ್ನು ಟ್ರಾಕ್ ಮಾಡುತ್ತಿದ್ದಳು ಮತ್ತು ನಕಲಿ ಹೆಸರಿನೊಂದಿಗೆ ನನ್ನಲ್ಲಿ ಚಾಟ್ ಮಾಡುತ್ತಿದ್ದಳು ಎಂದು ಅರುಷಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ.

ಈಕೆಯೊಬ್ಬಳೇ ಅಲ್ಲ, ಇಂಟೆಲ್ ಸೆಕ್ಯೂರಿಟಿ ದೇಶಾದ್ಯಂತ ನಡೆಸಿರುವ ಸಮೀಕ್ಷೆಯು ತೋರಿಸಿದ್ದೇನೆಂದರೆ, ಶೇ.77ರಷ್ಟು ಮಕ್ಕಳು ವಯಸ್ಸು 13 ಆಗುವ ಮುನ್ನವೇ ಫೇಸ್‌ಬುಕ್ ಖಾತೆಗಳನ್ನು ತೆರೆದಿದ್ದಾರೆ.

ಈ ಅಧ್ಯಯನವನ್ನು 2,370 ಮಂದಿಯ ಮೇಲೆ ನಡೆಸಲಾಗಿದೆ. (1,185 ಮಕ್ಕಳು 8-18 ವರ್ಷ ವಯಸ್ಸಿನ ನಡುವಿನವರು ಮತ್ತು 1,185 ಪೋಷಕರು). ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಮಕ್ಕಳಲ್ಲಿ, ಶೇ.69 ಮಂದಿ ಫೊಟೋಗಳನ್ನು ಪೋಸ್ಟ್ ಮಾಡುತ್ತಾರೆ. ಶೇ.42 ಮಂದಿ ತಮ್ಮ ಫೋನ್ ನಂಬರ್ ಹಾಕುತ್ತಾರೆ, ಶೇ.44 ಮಂದಿ ಆನ್‌ಲೈನ್‌ನಲ್ಲೇ ಮೊದಲು ಕಂಡವರನ್ನು ಭೇಟಿ ಮಾಡಲಿದ್ದಾರೆ ಅಥವಾ ಭೈಟಿ ಮಾಡಿಯಾಗಿದೆ ಎಂದು ತೋರಿಸುತ್ತದೆ ಮತ್ತು ಅಪರಿಚತರೊಂದಿಗಿನ ಸಂಭಾಷಣೆಯು ಮಕ್ಕಳನ್ನು ಅಪಾಯಕ್ಕೀಡು ಮಾಡಬಹುದು.

ಮಾನಸ ನ್ಯೂರೋಸೈಕಿಯಾಟ್ರಿಕ್ ಹಾಸ್ಪಿಟಲ್ ಕನ್ಸಲ್ಟೆಂಟ್ ಮನಶಾಸ್ತ್ರಜ್ಞ ಡಾ.ಎಂ.ಎಸ್.ಧರ್ಮೇಂದ್ರ ಮಾತನಾಡಿ, ಇಂದಿನ ಹದಿಹರೆಯದವರು ತುಂಬಾ ಕುತೂಹಲಿಗಳು. ಇತರರ ಜೀವನದಲ್ಲಿ ಏನಾಗುತ್ತಿದೆ ಎಂದು ಅವರು ತಿಳಿಯಲು ಬಯಸುತ್ತಾರೆ. ಈ ಯುವಕರ ಜತೆ ಚಾಟ್ ಮಾಡಲು ಆರಂಭಿಸುವ ವ್ಯಕ್ತಿಗಳು ಮಕ್ಕಳನ್ನು ಹೇಗೆ ಆಕರ್ಷಿಸಬೇಕು ಎಂದು ತಿಳಿದಿರುವ ವೃತ್ತಿಪರರಾಗಿರುತ್ತಾರೆ. ಹಾಗಾಗಿ ಇವರು ಸುಲಭವಾಗಿ ಟ್ರಾಪ್ ಆಗುತ್ತಾರೆ ಎಂದು ಹೇಳುತ್ತಾರೆ.

Write A Comment