ಅಂತರಾಷ್ಟ್ರೀಯ

ಕರಿಬೇವು ಆರೋಗ್ಯವೃದ್ಧಿಗೆ ಸಹಕಾರಿ

Pinterest LinkedIn Tumblr

kari

ಕರಿಬೇವು ನಮ್ಮ ಆರೋಗ್ಯವೃದ್ಧಿಯಲ್ಲಿ ತನ್ನದೇ ಪಾತ್ರ ನಿರ್ವಹಿಸುತ್ತಲೇ ಬಂದಿದೆ. ನಮ್ಮ ಅಡುಗೆ ತಯಾರಿಕೆಯಲ್ಲೂ ಅದರ ಪಾತ್ರ ಹಿರಿದು. ಹೇಗೆಂದರೆ, ಯಾವುದೇ ಸಾಂಬಾರಿಗೆ ‘ಒಗ್ಗರಣೆ’ ಹಾಕದಿದ್ದರೆ ನಿರೀಕ್ಷಿತ ರುಚಿ ಬರಲ್ಲ. ಅಂತಹ ರುಚಿ ಬೇಕೆಂದಾಗ ಕರಿಬೇವು ಹಾಕಿದ ಒಗ್ಗರಣೆ ಇರಲೇಬೇಕು.

ಕರಿಬೇವು ಔಷಧಿಯುಕ್ತವೂ ಹೌದು, ಮೂಲತಃ ಇದೊಂದು ಗಿಡ ಮೂಲಿಕೆ. ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಕರಿಬೇವು ಅಪ್ಪಟ ಭಾರತದ ಗಿಡ ಮೂಲಿಕೆಯಾಗಿದ್ದು, ಈ ವಿಚಾರವನ್ನು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಅನಾದಿ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರು ತಯಾರಿಸುತ್ತಿದ್ದ ಅಡುಗೆಗಳಲ್ಲಿ ಪ್ರಮುಖ ಪಾತ್ರವಹಿಸಿದೆ.

ಆಯುರ್ವೇದದ ಪ್ರಕಾರ ‘ಕಡಿಪತ್ತಾ’ ಎಂದು ಕರೆಯಲ್ಪಡುವ ಕರಿಬೇವು ದೇಹದಲ್ಲಿನ ಟಾಕ್ಸಿಕ್ ಅಂಶಗಳನ್ನು ಹೊರ ಹಾಕುವಲ್ಲಿ ಸಹಕಾರಿಯಾಗಲಿದೆ. ಮಾತ್ರವಲ್ಲದೆ ದೇಹದಲ್ಲಿನ ಪಿತ್ತವನ್ನು ಕಡಿಮೆ ಮಾಡಲಿದೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ಆಹಾರದ ಮೂಲಕ ಸೇವನೆ ಮಾಡುವುದರಿಂದ ಮಧುಮೇಹ ರೋಗವನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಕರಿಬೇವು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಗಣನೀಯವಾಗಿ ಕಡಿಮೆಯಾಗಲಿದೆ.

ಇನ್ನು ಕೆಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಅಥವಾ ಪ್ರಯಾಣ ಮಾಡುವಾಗ ವಾಕರಿಕೆ ಸಮಸ್ಯೆ ಎದುರಾಗುತ್ತದೆ. ಕರಿಬೇವು ಸೇವನೆಯಿಂದ ಈ ಸಮಸ್ಯೆಗೂ ಪರಿಹಾರ ಸಿಗಲಿದೆ.

ವಾಕರಿಕೆ ಸಮಸ್ಯೆ ಎದುರಿಸುತ್ತಿರುವವರು, ಪ್ರತಿದಿನ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಕುಡಿದರೆ ದೇಹದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ದೇಹದಲ್ಲಿ ಪಿತ್ತ ಹೆಚ್ಚಾಗಿದ್ದಲ್ಲಿ ಅಜೀರ್ಣ ಉಂಟಾಗಲಿದೆ. ಕರಿಬೇವಿನಲ್ಲಿ ಅಲ್ಕಾಲಾಯ್ಡ್ ಕಾರ್ಬೋ ಜೋಲ್ ಇದ್ದು, ಅದು ಉರಿಬಾವು ನಿರೋಧಕ ಗುಣಗಳನ್ನು ಹೊಂದಿರುತ್ತsssssssssದೆ. ಹೊಟ್ಟೆ ತೊಳೆಸುವಂತಹ ಸಮಸ್ಯೆಗಳನ್ನು ನಿವಾರಿಸಬಲ್ಲ ಸಾಮರ್ಥ್ಯ ಕರಿಬೇವಿನಲ್ಲಿದೆ.

ಅಜೀರ್ಣ ಸಮಸ್ಯೆಗೂ ಕರಿಬೇವು ಸಂಜೀವಿನಿಯಂತೆ ಎಂದರೂ ತಪ್ಪಾಗಲಾರದೇನೋ….ಕೆಲವೊಮ್ಮೆ ಹೊಟ್ಟೆಯಲ್ಲಿ ಅಜೀರ್ಣವಾದ ಕಾರಣ, ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆ ಭಾಗದಲ್ಲಿ ಉರಿ ತರಿಸುತ್ತವೆ. ಇಂತಹ ಸಂದರ್ಭದಲ್ಲಿ ಕರಿಬೇವು ಎಲೆಗಳನ್ನು ಮಿಕ್ಸಿಗೆ ಹಾಕಿ ಜ್ಯೂಸ್ ತಯಾರಿಸಿಕೊಂಡು ಕುಡಿದರೆ ದೇಹದ ಸ್ಥಿತಿ ಸುಧಾರಿಸಲಿದೆ.

ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಕರಿಬೇವು ಸೇರ್ಪಡೆಯಾಗಿದ್ದಲ್ಲಿ, ಅದು ಮೂತ್ರಪಿಂಡಗಳಲ್ಲಿ (ಕಿಡ್ನಿಗಳಲ್ಲಿ) ಕಲ್ಲು ರೂಪುಗೊಳ್ಳುವುದನ್ನು ತಡೆಯಬಹುದು. ಸಮಸ್ಯೆ ತೀವ್ರವಾದಾಗ, ಕರಿಬೇವಿನ ಎಲೆಗಳನ್ನು ಮಿಕ್ಸಿಗೆ ಹಾಕಿ ಮಿಶ್ರಣ ಮಾಡಿದ ಜ್ಯೂಸ್ ಕುಡಿಯಬೇಕು.

ಕರಿಬೇವು ನಮ್ಮ ರಕ್ತಹೀನತೆಯನ್ನೂ ನಿವಾರಿಸಲು ಸಹಕಾರಿಯಾಗಿದೆ. ದೇಹದ ಕೆಂಪುರಕ್ತಕಣಗಳಿಗೆ ಅಗತ್ಯವಿರುವ ಕಬ್ಬಿಣಾಂಶವನ್ನು ಸಿದ್ಧ ರೂಪದಲ್ಲಿ ದೇಹಕ್ಕೆ ಒದಗಿಸಲಿದೆ.

Write A Comment